ADVERTISEMENT

ಜೀರ್ಣಕ್ರಿಯೆ ಚುರುಕುಗೊಳಿಸಲು...

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 4:54 IST
Last Updated 22 ಜೂನ್ 2024, 4:54 IST
<div class="paragraphs"><p>ವಾಣಿ ಭೋಜನ್‌</p></div>

ವಾಣಿ ಭೋಜನ್‌

   

ನೀವು ನಟರಾಗಿರಿ, 9ರಿಂದ 5 ವೃತ್ತಿಪರರಾಗಿರಿ ಅಥವಾ ಗೃಹಿಣಿಯಾಗಿರಿ ಉತ್ತಮ ಜೀರ್ಣಕ್ರಿಯೆ ವ್ಯವಸ್ಥೆ ಕಾಪಾಡಿಕೊಳ್ಳುವುದು ನಿಮ್ಮ ತೂಕ, ಶಕ್ತಿಯ ಮಟ್ಟ ಮತ್ತು ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಬಹಳ ಮುಖ್ಯವಾಗಿದೆ. ಹಲವು ವರ್ಷಗಳಿಂದ ನಾನು ನನ್ನ ಆರೋಗ್ಯ ಮತ್ತು ಫಿಟ್‌ನೆಸ್‌ ದಿನಚರಿಗೆ ಕೆಲ ಪರಿಣಾಮಕಾರಿ ಜೀರ್ಣಕ್ರಿಯೆ ಉತ್ತೇಜಿಸುವ ರೂಢಿಗಳನ್ನು ಅಳವಡಿಸಿಕೊಂಡಿದ್ದೇನೆ. ಪವರ್ ವರ್ಕೌಟ್ ಗಳಿಂದ ಹಸಿರು ಸೊಪ್ಪುಗಳು, ಬಾದಾಮಿಗಳು, ಋತು ಆಧಾರಿತ ತರಕಾರಿ, ಹಣ್ಣುಗಳ ಸೇವನೆ, ಅನಗತ್ಯ ಕುರುಕುಲು ಸೇವನೆಯನ್ನು ತಪ್ಪಿಸುವುದನ್ನು ರೂಢಿ ಮಾಡಿಕೊಂಡಿದ್ದೇನೆ.. ಈ ಸಲಹೆಗಳು ನಿಮ್ಮ ಆರೋಗ್ಯಕ್ಕೂ ಅನುಕೂಲವಾಗಬಹುದು. 

ವ್ಯಾಯಾಮ ಮುಖ್ಯ

ADVERTISEMENT

lಕಾರ್ಡಿಯೊ ಮತ್ತು ಯೋಗ: ನನ್ನ ದಿನಚರಿಗೆ ಕಾರ್ಡಿಯೊ ಮತ್ತು ಯೋಗ ಸೇರ್ಪಡೆಯು ಉತ್ತಮ ಆಯ್ಕೆಯಾಗಿವೆ. ಕಾರ್ಡಿಯೊ ವ್ಯಾಯಾಮಗಳಾದ ಓಟ ಅಥವಾ ಸೈಕ್ಲಿಂಗ್ ಕ್ಯಾಲೊರಿ ಕಡಿಮೆ ಮಾಡಲು ನೆರವಾದರೆ, ಯೋಗವು ದೇಹದ ನಮ್ಯತೆ ಹೆಚ್ಚಿಸುತ್ತದೆ ಹಾಗೂ ಮನಸ್ಸನ್ನು ಸ್ಥಿರಗೊಳಿಸುತ್ತದೆ. ಯೋಗಕ್ಕೆ ಯಾವಾಗಲೂ ಆದ್ಯತೆ ನೀಡುತ್ತೇನೆ. ಮತ್ತು ಅದನ್ನು ಕಾರ್ಡಿಯೊ ಜೊತೆಯಲ್ಲಿ ಸಂಯೋಜಿಸಿದಾಗ ಅದು ಒಟ್ಟಾರೆ ದೈಹಿಕ ಸ್ವಾಸ್ಥ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಹಕರಿಸುತ್ತದೆ. ಹಲವು ವರ್ಷಗಳಿಂದ ಯೋಗಾಭ್ಯಾಸ ಮಾಡಿ ನಾನು ನನ್ನ ಕಾರ್ಡಿಯೊ ವರ್ಕೌಟ್‌್ಗಳಲ್ಲಿ ಅದರ ಅಪರಿಮಿತ ಅನುಕೂಲಗಳನ್ನು ಕಂಡಿದ್ದೇನೆ.

l ಪವರ್ ವರ್ಕೌಟ್‌ಗಳು: ಒತ್ತಡದ ಕಾರ್ಯದಲ್ಲಿದ್ದಾಗಲೂ ಹೊರಗಡೆ 30 ನಿಮಿಷಗಳ ಬಿರುಸಾದ ಎಚ್‌ಐಐಸಿ ರೊಟೀನ್ ನನ್ನ ದೇಹವನ್ನು ಸಕ್ರಿಯವಾಗಿರಿಸುತ್ತದೆ. ವ್ಯಾಯಾಮ ಎಂದರೆ ಕ್ಯಾಲೊರಿಗಳನ್ನು ಕಡಿಮೆ ಮಾಡುವುದಲ್ಲ ಬದಲಿಗೆ ಜೀರ್ಣಕ್ರಿಯೆ ವ್ಯವಸ್ಥೆ ಉತ್ತಮಪಡಿಸುವುದು. ಇದರಿಂದ ವರ್ಕೌಟ್ ನಂತರ ಸತತವಾಗಿ ಕ್ಯಾಲೊರಿ ಕಡಿಮೆಯಾಗುತ್ತದೆ. ಓಟ ಅಥವಾ ಸೈಕ್ಲಿಂಗ್ ರೀತಿಯ ಕಾರ್ಡಿಯೊ ಚಟುವಟಿಕೆಗಳು ದೇಹಕ್ಕೆ ಪೂರೈಕೆಯಾಗುವ ಆಮ್ಲಜನಕವನ್ನು ಸುಸ್ಥಿತಿಯಲ್ಲಿಡುತ್ತದೆ. ಹೃದಯದ ಬಡಿತದ ಪ್ರಮಾಣ ಹೆಚ್ಚಿಸಿದರೆ, ಶಕ್ತಿಯ ತರಬೇತಿಯು ಸ್ನಾಯುಗಳ ಗಾತ್ರ ಹೆಚ್ಚಿಸುತ್ತದೆ. ಹೀಗಾಗಿ ಜೀರ್ಣಕ್ರಿಯೆ ವ್ಯವಸ್ಥೆಗೆ ಹೆಚ್ಚಿನ ಅನುಕೂಲ ಉಂಟಾಗುತ್ತದೆ. ಎಚ್‌ಐಐಟಿ ಆಫ್ಟರ್ ಬರ್ನ್ ಪರಿಣಾಮದ ಮೂಲಕ ತೂಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತದೆ.

ಸಮತೋಲನದ ಪೌಷ್ಟಿಕತೆ

l ಪ್ರೊಟೀನ್-ಯುಕ್ತ ಆಹಾರಗಳು: ಚಿಕನ್, ಮೀನು, ಬೀನ್ಸ್ ಮತ್ತು ಬಾದಾಮಿಗಳಂಥ ಹೆಚ್ಚಿನ ಪ್ರೊಟೀನ್ ಉಳ್ಳ ಆಹಾರಗಳು ನನ್ನ ಊಟದಲ್ಲಿ ಮೆನುವಿನಲ್ಲಿ ಇರುವಂತೆ ನೋಡಿಕೊಳ್ಳುತ್ತೇನೆ. ಪ್ರೊಟೀನ್ ಜೀರ್ಣವಾಗಲು ಹೆಚ್ಚು ಶಕ್ತಿ ಬಯಸುವುದರಿಂದ ಅದು ಜೀರ್ಣಶಕ್ತಿಯ ಪ್ರಮಾಣವನ್ನು ಉತ್ತೇಜಿಸಲು ನೆರವಾಗಬಲ್ಲದು. ದೈನಂದಿನ ರೂಢಿಯಾಗಿ ನಾನು ಬೆಳಿಗ್ಗೆ ಅಥವಾ ಮಧ್ಯಾಹ್ನದ ಕುರುಕುಲು ತಿನಿಸಾಗಿ ಒಂದು ಹಿಡಿ ಬಾದಾಮಿಗಳನ್ನು ಸೇವಿಸುತ್ತೇನೆ, ಅದು ಇಡೀ ದಿನ ನನಗೆ ಉತ್ಸಾಹದಲ್ಲಿರಲು ನೆರವಾಗುತ್ತದೆ. ಬಾದಾಮಿಗಳು ಅತ್ಯುತ್ತಮ ಪ್ರೊಟೀನ್ ಮೂಲಗಳಾಗಿದ್ದು ಅವು ಶಕ್ತಿಯನ್ನು ಮಾತ್ರ ಪೂರೈಸುವುದಲ್ಲದೆ ಸ್ನಾಯುಗಳ ಗಟ್ಟಿತನ ಬೆಳೆಯಲು ಮತ್ತು ನಿರ್ವಹಿಸಲು ಕೂಡಾ ಬೆಂಬಲಿಸುತ್ತದೆ.

l ಆರೋಗ್ಯಕರ ಕೊಬ್ಬುಗಳು: ಅವಕಾಡೊಗಳು, ಬಾದಾಮಿಗಳು ಮತ್ತು ಆಲಿವ್ ಎಣ್ಣೆಯಂಥ ಆರೋಗ್ಯಕರ ಕೊಬ್ಬುಗಳು ನಾನು ಸೇವಿಸುವ ಆಹಾರದ ಭಾಗವಾಗಿದೆಯೇ? ಎಂಬುದನ್ನು ದೃಢೀಕರಿಸಿಕೊಳ್ಳುತ್ತೇನೆ. ಈ ಕೊಬ್ಬುಗಳು ನನ್ನ ದೇಹವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಮತ್ತು ಇಡೀ ದಿನ ಶಕ್ತಿಯ ಮಟ್ಟವನ್ನು ಸ್ಥಿರವಾಗಿ ಕಾಪಾಡಲು ನೆರವಾಗುತ್ತವೆ.

lಹೆಚ್ಚಿನ ನಾರಿನಂಶದ ಆಹಾರಗಳು: ನಾರಿನಿಂದ ಕೂಡಿದ ಹಣ್ಣುಗಳು, ತರಕಾರಿಗಳು, ಬಾದಾಮಿಗಳು ಮತ್ತು ಧಾನ್ಯಗಳಂತಹ ನಾರಿನಂಶ ಹೆಚ್ಚಿರುವ ಆಹಾರಗಳು ನನ್ನ ಜೀರ್ಣಾಂಗ ವ್ಯವಸ್ಥೆಯು ಸರಾಗವಾಗಿ ಕಾರ್ಯ ನಿರ್ವಹಿಸಲು ಮತ್ತು ಆರೋಗ್ಯಕರ ಜೀರ್ಣವ್ಯವಸ್ಥೆಯನ್ನು ಹೊಂದಲು ಅತ್ಯಂತ ಮುಖ್ಯ.

ಜೀರ್ಣಕ್ರಿಯೆಗೆ ಅಡ್ಡಿಯಾಗುವ ಅಂಶಗಳು

l ಸಂಸ್ಕರಿಸಿದ ಆಹಾರಗಳು: ನಾನು ಸಂಸ್ಕರಿಸಿದ ಮತ್ತು ಸಕ್ಕರೆಯ ಆಹಾರಗಳ ಸೇವನೆಗೆ ಮಿತಿ ಹಾಕಿಕೊಂಡಿದ್ದೇನೆ. ಅದು ತೂಕ ಹೆಚ್ಚಿಸುವುದಲ್ಲದೇ, ಜೀರ್ಣಕ್ರಿಯೆಗೆ ಸಮಸ್ಯೆ ಉಂಟು ಮಾಡುತ್ತದೆ.

l ಹೊರಗಡೆ ಆಹಾರ ಸೇವನೆ ತಪ್ಪಿಸುವುದು: ರೆಸ್ಟೋರೆಂಟ್‌ನಲ್ಲಿ ಸಿಗುವ ಜಿಡ್ಡಿನ ಹಾಗೂ ಸಕ್ಕರೆಭರಿತ ಆಹಾರವನ್ನು ತ್ಯಜಿಸುತ್ತೇನೆ. ಅವುಗಳಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ನನ್ನ ಆಹಾರತಜ್ಞೆ ನೀಡುವ ಡಯೆಟ್‌ ಪ್ಲಾನ್‌ಗೆ ಬದ್ಧಳಾಗಿರುತ್ತೇನೆ, ವೃತ್ತಿಯ ಸಲುವಾಗಿ ಚಿತ್ರೀಕರಣಗಳಲ್ಲಿ ಬ್ಯುಸಿ ಇದ್ದರೂ, ಮನೆಯಲ್ಲಿ ತಯಾರಿಸಿದ ಊಟವನ್ನೇ ಕೊಂಡೊಯ್ಯುತ್ತೇನೆ. ಜತೆಗೆ ಒಂದು ಬಾಕ್ಸ್‌ನಷ್ಟು ಬಾದಾಮಿಗಳು ನನ್ನ ಜತೆ ಇರುತ್ತವೆ.

ತಕ್ಕಷ್ಟು ನಿದ್ರೆ ಮಾಡಿ ಮತ್ತು ನೀರು ಸೇವಿಸಿ

l ಗುಣಮಟ್ಟದ ನಿದ್ರೆ: ಪ್ರತಿ ರಾತ್ರಿ 7ರಿಂದ 9 ಗಂಟೆಗಳ ನಿದ್ರೆ ಮಾಡುವ ಗುರಿ ಹೊಂದಿದ್ದೇನೆ. ನಿದ್ರಾಹೀನತೆ ಸಮಸ್ಯೆ ಇದ್ದವರಿಗೆ ಜೀರ್ಣವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡದೇ ಹೋಗಬಹುದು ಮತ್ತು ತೂಕ ಹೆಚ್ಚುಗೊಳ್ಳುವ ಸಾಧ್ಯತೆ ಇದೆ.

l ನಿಗದಿತ ನಿದ್ರೆಯ ವೇಳಾಪಟ್ಟಿ: ನಿಗದಿತ ನಿದ್ರೆಯ ವೇಳಾಪಟ್ಟಿ ಕಾಪಾಡಿಕೊಳ್ಳಲು ಪ್ರಯತ್ನಿಸಿ, ಪ್ರತಿನಿತ್ಯ ನನ್ನ ದೇಹದ ಆಂತರಿಕ ಗಡಿಯಾರವನ್ನು ನಿಯಂತ್ರಿಸಲು ಒಂದೇ ಸಮಯಕ್ಕೆ ನಿದ್ರಿಸಿ, ಏಳಲು ಪ್ರಯತ್ನಿಸುತ್ತೇನೆ.

l ನೀರು ಕುಡಿಯಿರಿ: ಆರೋಗ್ಯಕರ ಜೀರ್ಣ ವ್ಯವಸ್ಥೆ ಕಾಪಾಡಿಕೊಳ್ಳಲು ಸದಾ ಹೈಡ್ರೇಟ್ ಆಗಿರುವುದು ಮುಖ್ಯ. ನೀರು ಜೀರ್ಣಕ್ರಿಯೆಗೆ ಬಹಳ ಮುಖ್ಯವಾಗಿದ್ದು ಅದು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ.

ಉತ್ತಮ ಆರೋಗ್ಯ ಬೇಕೆಂದರೆ ಉತ್ತಮ ಅಭ್ಯಾಸ ಹಾಗೂ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ನನ್ನ ಹೆಜ್ಜೆ ಇರುತ್ತದೆ.

ವಾಣಿ ಭೋಜನ್, ನಟಿ

ಫಿಟ್‌ನೆಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.