ಯುವಕರನ್ನು ಹಾದಿ ತಪ್ಪಿಸುತ್ತಿರುವ ಡ್ರಗ್ ಸೇವನೆ ಅತ್ಯಂತ ಅಪಾಯಕಾರಿ ಎನ್ನುವುದು ಗೊತ್ತೇ ಇದೆ. ಆದರೆ, ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯೂ ಇದೆ ಎಂದು ವೈದ್ಯ ಲೋಕ ಹೇಳುತ್ತಿದೆ. ಡ್ರಗ್ ಸೇವನೆಯ ನಾಲ್ಕ ಜನರಲ್ಲಿ ಒಬ್ಬರು ಸಾವನ್ನಪ್ಪುತ್ತಿದ್ದು, ಪ್ರತಿ ವರ್ಷ 7 ದಶಲಕ್ಷ ಜನರು ಡ್ರಗ್ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಡ್ರಗ್ ಸೇವನೆಯಿಂದ ಯಾವೆಲ್ಲಾ ಕ್ಯಾನ್ಸರ್ ಬರಲಿದೆ ಹಾಗೂ ಅದಕ್ಕೆ ಇರುವ ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ.
ಯಾವೆಲ್ಲಾ ಡ್ರಗ್ಸ್‌ನಿಂದ ಕ್ಯಾನ್ಸರ್ ಬರಲಿದೆ?
ತಂಬಾಕು, ಮಧ್ಯಪಾನ, ಧೂಮಪಾನ, ಕೊಕೇನ್ ಸೇರಿದಂತೆ ಇತರೆ ಡ್ರಗ್‌ಗಳ ಸೇವನೆಯಿಂದ ಕ್ಯಾನ್ಸರ್ ಬರುವುದು ದೃಢಪಟ್ಟಿದೆ. ಕ್ಯಾನ್ಸರ್‌ನಿಂದ ಸಾವನ್ನಪ್ಪುವವರ ಪೈಕಿ ಶೇ.80ರಷ್ಟು ಜನರು ಜಗಿಯುವ ತಂಬಾಕಿನ ಇತರೆ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವುದು ಆತಂಕಕಾರಿ. ಧೂಮಪಾನ ಹಾಗೂ ಜಗಿಯುವ ತಂಬಾಕಿನಿಂದ ಮೇದೀಜ್ಜೀರಕ ಗ್ರಂಥಿಯು ಕ್ಯಾನ್ಸರ್‌ಗೆ ತುತ್ತಾಗಲಿ. ಇನ್ನು ಮಧ್ಯಪಾನ ಸೇವನೆಯಿಂದ ಶೇ.5ರಷ್ಟು ಜನ ಲಿವರ್ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ದೇಹವನ್ನು ಬಲಿಷ್ಠ ಗೊಳಿಸಲು ಕೆಲವರು ಅನಾಬೋಲಿಕ್ ಎಂಬ ಸ್ಟಿರಾಯ್ಡ್ನನ್ನು ಚುಚ್ಚು ಮದ್ದಿನ ಮೂಲಕ ತೆಗೆದುಕೊಳ್ಳುತ್ತಾರೆ. ಇದು ಅತ್ಯಂತ ಹೆಚ್ಚು ಅಪಾಯಕಾರಿ. ಕೆಲವರು ವೇವಾಗಿ ತಮ್ಮ ದೇಹ ಬಲಿಷ್ಠವಾಗಬೇಕು ಎಂಬ ಕಾರಣಕ್ಕೆ, ಅತಿ ಹೆಚ್ಚು ಸ್ಟಿರಾಡ್ಡ್‌ಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಪುರಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಎಂಡೊಮೆಟ್ರಿಯಲ್ ಕ್ಯಾನ್ಸರ್ ಅಥವಾ ಸ್ತನ ಕ್ಯಾನ್ಸರ್‌ಗೆ ಒಳಗಾಗಬಹುದು. ಕೆಲವೊಮ್ಮೆ ಸ್ಟಿರಾಯ್ಡ್ ಬಳಕೆಯಿಂದ ಹೃದಯಾಘಾತವೂ ಆಗುತ್ತದೆ. ಗಾಂಜ ಸೇವನೆಯಿಂದಲೂ ಕ್ಯಾನ್ಸರ್ ಸಾಧ್ಯತೆ ಎನ್ನಲಾಗಿದೆ. ಗಾಂಜ ಡ್ರಗ್‌ನನ್ನು ವೈದ್ಯ ಲೋಕದಲ್ಲಿ ಚಿಕಿತ್ಸೆಗಾಗಿ ಸ್ವಲ್ಪ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ, ಕೆಲವರು ಇದರಿಂದ ಮತ್ತು ಏರಿಸಿಕೊಳ್ಳಲು ಬಳಸುತ್ತಾರೆ. ಇದರ ಪ್ರಮಾಣ ದೇಹದೊಳಗೆ ಸೇರಿದಷ್ಟು ವಿಷಕಾರಿಯಾಗಿ ಪರಿಣಾಮ ಬೀರಲಿದೆ. ಗಾಂಜಾ ಹೊಗೆಯಿಂದ ವೃಷಣ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
ಹೊರಬರುವ ಮಾರ್ಗವೇನು?
ಡ್ರಗ್ ಪ್ರಪಂಚಕ್ಕೆ ಒಮ್ಮೆ ಹೆಜ್ಜೆ ಇಟ್ಟರೆ ಹಿಂದಿರುಗುವ ಮಾರ್ಗ ಅತ್ಯಂತ ಕಠಿಣವಾಗಬಹುದು. ಆದರೆ, ಚಿಕಿತ್ಸೆ ಪಡೆದುಕೊಳ್ಳುವುದರಿಂದ ಈ ವ್ಯಸನದಿಂದ ಹೊರಬರುವ ಸಾಧ್ಯತೆ ಇದೆ. ಡ್ರಗ್ ಸೇವನೆ ಮಾಡುವವರನ್ನು ಕೂಡಲೇ ಆಸ್ಪತ್ರೆ ಅಥವಾ ಡಿ ಅಡಿಕ್ಷನ್ ಕೇಂದ್ರಗಳಿಗೆ ಸೇರಿಸುವುದು ಉತ್ತಮ. ಇಲ್ಲಿ ಇವರಿಗೆ ಬಯೋಫೀಡ್ ಥೆರಪಿ ಮೂಲಕ ಈಗಾಗಲೇ ಜೆಡ್ಡು ಹಿಡಿದಿರುವ ನರಗಳನ್ನು ಸ್ಥಿರಗೊಳಿಸಲಾಗುತ್ತದೆ. ಈ ಥೆರಪಿಯಿಂದ ಕಾಲಕ್ರಮೇಣ ಮೆದುಳನ್ನು ಮೊದಲಿನ ರೀತಿಯಲ್ಲಿ ಕ್ರಿಯಾಶೀಲತೆಗೆ ತರಲು ಸಹಕಾರಿಯಾಗುತ್ತದೆ. ಮೆದುಳಿನ ಬಯೋ ಮತ್ತು ಯೂರೋ ಕ್ರಿಯೆಗಳು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಜತೆಗೆ, ಧ್ಯಾನ, ಧನಾತ್ಮಕ ವಿಷಯಗಳ ಮೂಲಕ ಅವನ್ನು ಮೊದಲಿನಂತೆ ಮಾಡಲಾಗುತ್ತದೆ. ಧೂಮಪಾನ, ಮಧ್ಯಪಾನ ಹಾಗೂ ತಂಬಾಕು ಸೇವನೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಕೆಲವೊಮ್ಮೆ, ಈಗಾಗಲೇ ಕ್ಯಾನ್ಸರ್‌ಗೆ ಒಳಗಾಗಿದ್ದರೆ, ಮೊದಲ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ಬದುಕುವ ಸಾಧ್ಯತೆ ಇದೆ ಇಲ್ಲವಾದರೆ, ಸಾವು ಅಥವಾ ಅಂಗಾಂಗ ವೈಫಲ್ಯವಾಗಬಹುದು.
ಲೇಖಕರು: ನಿರ್ದೇಶಕರು - ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿ, ಫೋರ್ಟಿಸ್ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.