ನವದೆಹಲಿ: ಕಡಿಮೆ ಮತ್ತು ಮಧ್ಯಮ ಪ್ರಮಾಣದ ಕೋವಿಡ್ ಸೋಂಕಿನ ಲಕ್ಷಣವಿರುವ ರೋಗಿಗಳ ಚಿಕಿತ್ಸೆಗಾಗಿ ಎಲಿ ಲಿಲ್ಲಿ ಅಂಡ್ಕಂಪನಿಯ ಆ್ಯಂಟಿ ಬಾಡಿ(ಪ್ರತಿ ಕಾಯ) ಔಷಧ ಸಂಯೋಜನೆಯು ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿದೆ.
ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ವಯಸ್ಕ ರೋಗಿಗಳಿಗೆ ನಿರ್ಬಂಧಿತ ಬಳಕೆಗೆ ಅಮೆರಿಕದ ಕಂಪನಿ ತಯಾರಿಸಿರುವ ಮೊನೊಕ್ಲೋನಲ್ ಪ್ರತಿಕಾಯಗಳಾದ ಬಾಮ್ಲನಿವಿಮಾಬ್ ಮತ್ತು ಎಟೆಸೆವಿಮಾಬ್‌ಗಳ ಸಂಯೋಜನೆಯ ಔಷಧಕ್ಕೆ ಅನುಮೋದನೆ ದೊರೆತಿದೆ ಎಂದು ಕಂಪನಿಯ ಭಾರತೀಯ ಘಟಕವು ಇಮೇಲ್ ಹೇಳಿಕೆಯಲ್ಲಿ ತಿಳಿಸಿದೆ.
ಮೊನೊಕ್ಲೋನಲ್ ಪ್ರತಿಕಾಯಗಳು ಸೋಂಕಿನ ವಿರುದ್ಧ ಹೋರಾಡಲು ದೇಹವು ಉತ್ಪಾದಿಸುವ ನೈಸರ್ಗಿಕ ಪ್ರತಿಕಾಯಗಳನ್ನು ಅನುಕರಿಸುತ್ತದೆ.
ಕೋವಿಡ್ -19ಗೆ ಹೆಚ್ಚಿನ ಚಿಕಿತ್ಸಾ ಆಯ್ಕೆಗಳನ್ನು ಒದಗಿಸಲು ಮತ್ತು ಮತ್ತಷ್ಟು ಔಷಧ ಪ್ರವೇಶವನ್ನು ವೇಗಗೊಳಿಸಲು ಸರ್ಕಾರ ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಮೇ ತಿಂಗಳಲ್ಲಿ ರೆಜೆನೆರಾನ್ ಮತ್ತು ರೋಚೆ ಕಂಪನಿ ಅಭಿವೃದ್ಧಿಪಡಿಸಿದ ಇದೇ ರೀತಿಯ ಪ್ರತಿಕಾಯ ಔಷಧ ಭಾರತದಲ್ಲಿ ತುರ್ತು ಬಳಕೆಯ ಅನುಮೋದನೆಯನ್ನು ಪಡೆದಿತ್ತು.
ರೆಮ್‌ಡಿಸಿವಿರ್ ಜೊತೆಯಲ್ಲಿ ಲಿಲ್ಲಿ ಕಂಪನಿಯ ಸಂಧಿವಾತದ ಔಷಧ ಬ್ಯಾರಿಸಿಟಿನಿಬ್ ಈಗಾಗಲೇ ಆಮ್ಲಜನಕದ ಅಗತ್ಯವಿರುವ ಆಸ್ಪತ್ರೆಗೆ ದಾಖಲಾದ ಕೋವಿಡ್ -19 ವಯಸ್ಕ ರೋಗಿಗಳ ಚಿಕಿತ್ಸೆಗಾಗಿ ಭಾರತದಲ್ಲಿ ನಿರ್ಬಂಧಿತ ತುರ್ತು ಬಳಕೆಯ ಅನುಮೋದನೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ.. ದೆಹಲಿಯಲ್ಲಿ ಮನೆ ಬಾಗಿಲಿಗೆ ಮದ್ಯ ಡೆಲಿವರಿ ಸೇವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.