ಯಕೃತ್ತಿನ ವೈರಾಣು ಸೋಂಕು ಈಚೆಗೆ ಹೆಚ್ಚುತ್ತಿದ್ದು, ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಅದರ ಪರಿಣಾಮ ವ್ಯಾಪಕವಾಗಿ ಹೆಚ್ಚಳಗೊಂಡಿದೆ.
ಈ ರೋಗವನ್ನು ತುರ್ತಾಗಿ ನಿಯಂತ್ರಿಸಬೇಕಾಗಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 200ರಿಂದ 210 ದೃಢೀಕರಿಸಲ್ಪಟ್ಟ ಹೆಪಟೈಟಿಸ್ ಪ್ರಕರಣಗಳಿವೆ. ಹೆಪಟೈಟಿಸ್ ಎ ವೈರಸ್(ಎಚ್.ಎ.ವಿ.) ಉಂಟು ಮಾಡುವ ಹೆಪಟೈಟಿಸ್ ಎ ಅತ್ಯಂತ ಸಾಂಕ್ರಾಮಿಕ ಯಕೃತ್ತಿನ ಸೋಂಕು ಆಗಿದ್ದು, ಸೋಂಕು ತಗುಲಿದ ವ್ಯಕ್ತಿಗಳ ಮಲದಿಂದ ವರ್ಗಾವಣೆಯಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ನೈರ್ಮಲ್ಯ ಮತ್ತು ನೀರಿನ ವ್ಯವಸ್ಥೆಗಳು ಸುಸ್ಥಿತಿಯಲ್ಲಿಲ್ಲದ ಕಡೆ ಇದು ಹೆಚ್ಚು.
ಮಳೆಗಾಲದ ಸಂದರ್ಭದಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ಹಾಸ್ಟೆಲ್ ವಾಸಿಗಳು ಮತ್ತು ಹೊರಗಡೆ ಭೋಜನ ಸೇವಿಸುವವರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ.
ಜ್ವರ, ಆಯಾಸ, ವಾಕರಿಕೆ, ಹೊಟ್ಟೆಯ ಅಸೌಖ್ಯ ಮತ್ತು ಕಾಮಾಲೆ ಉಂಟಾಗುತ್ತದೆ. ಹೆಪಟೈಟಿಸ್ ಎ ಗ್ಯಾಸ್ಟ್ರೊಎಂಟೆರಿಟಿಸ್, ಯಕೃತ್ತಿನ ನಿಷ್ಕ್ರಿಯತೆ ಮತ್ತು ಮೂತ್ರಪಿಂಡದ ಸಂಕೀರ್ಣತೆಗಳು ಉಂಟಾಗಬಹುದು.
ಲಸಿಕೆ ನೀಡಿಕೆ ಹೆಪಟೈಟಿಸ್ ಎ ತಡೆಯಲು ಪರಿಣಾಮಕಾರಿ ವಿಧಾನವಾಗಿದೆ.
ಪ್ರತಿ ಮಗುವೂ 12 ತಿಂಗಳಲ್ಲಿ ಈ ಲಸಿಕೆಯನ್ನು ಪಡೆಯಲು ಶಿಫಾರಸು ಮಾಡಲಾಗುತ್ತದೆ. ಅದನ್ನು ತಪ್ಪಿಸಿಕೊಂಡರೆ ಈ ಲಸಿಕೆ ಪಡೆಯಲು ಮಕ್ಕಳ ತಜ್ಞರನ್ನು ಭೇಟಿ ಮಾಡುವುದು ಸೂಕ್ತ. ಪ್ರಸ್ತುತ ಒನ್-ಶಾಟ್ ಹೆಪಟೈಟಿಸ್ ಎ ಲಸಿಕೆಯು ಕನಿಷ್ಠ ಅಡ್ಡ ಪರಿಣಾಮಗಳೊಂದಿಗೆ ವೈರಸ್ ವಿರುದ್ಧ ಸುರಕ್ಷಿತ ಮತ್ತು ದೀರ್ಘಕಾಲ ಉಳಿಯುತ್ತದೆ.
‘ಒನ್-ಶಾಟ್ ಹೆಪಟೈಟಿಸ್ ಎ’ ಲಸಿಕೆಯು ರಕ್ಷಣೆಗೆ ಶಕ್ತಿಯುತ ವಿಧಾನವಾಗಿದೆ. ಈ ಒಂದು ಡೋಸ್ ದೀರ್ಘಕಾಲ ಪ್ರತಿರಕ್ಷಣೆ ನೀಡುತ್ತದೆ. ಹಲವು ಲಸಿಕೆಗಳಂತೆ ಅಲ್ಲದೆ ಒನ್-ಶಾಟ್ ಹೆಪಟೈಟಿಸ್ ಎ ಲಸಿಕೆಯು ಅನುಕೂಲಕರ ಮತ್ತು ಅತ್ಯಂತ ಪರಿಣಾಮಕಾರಿ’.
ಕುಡಿಯಲು ಮತ್ತು ಅಡುಗೆಗೆ ಬಿಸಿನೀರು ಬಳಸುವುದು ಸೂಕ್ತ. ಶೌಚಾಲಯಗಳನ್ನು ಬಳಸಿದ ನಂತರ ಮತ್ತು ಆಹಾರ ಸೇವಿಸುವ ಮುನ್ನ ಸಾಬೂನು ಮತ್ತು ನೀರು ಬಳಸಿ ಕೈಗಳನ್ನು ತೊಳೆಯುವಂತಹ ಅಭ್ಯಾಸ ಇರಲಿ.
ಕೊಳಚೆ ನೀರಿನ ಹರಿವು ಮತ್ತು ಸ್ವಚ್ಛವಾದ ಶೌಚಾಲಯ ಹೆಪಟೈಟಿಸ್ ಎ ವೈರಸ್ ನಿಯಂತ್ರಣಕ್ಕೆ ಅತ್ಯಂತ ಮುಖ್ಯ.
ಹೆಪಟೈಟಿಸ್ ಎ ಹೆಚ್ಚಾಗುತ್ತಿರುವುದರಿಂದ ಆರೋಗ್ಯಸೇವಾ ಪೂರೈಕೆದಾರರು, ನೀತಿ ನಿರೂಪಕರು ಮತ್ತು ಸಾರ್ವಜನಿಕರ ನಡುವೆ ಸಹಯೋಗ ಮುಖ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.