ದೇಶದಲ್ಲಿ ರಕ್ತ ಕ್ಯಾನ್ಸರ್, ಥಲಸ್ಸೇಮಿಯಾದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಬಳಲುತ್ತಿರುವವರಲ್ಲಿ ಬಹುತೇಕರು ಯುವಜನರೇ ಆಗಿದ್ದಾರೆ. ಸ್ಟೆಮ್ಸೆಲ್ ಟ್ರಾನ್ಸ್ಪ್ಲಾಂಟ್ಗೆ ಅಗತ್ಯವಿರುವ ಶೇ 30ರಷ್ಟು ರೋಗಿಗಳಿಗೆ ಮಾತ್ರ ಒಡಹುಟ್ಟಿದವರಿಂದ ಹ್ಯೂಮನ್ ಲ್ಯುಕೋಸೈಟ್ ಪ್ರತಿಜನಕಗಳು (ಎಚ್ಎಲ್ಎ) ಪಡೆಯಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ರಕ್ತದ ಕಾಂಡಕೋಶ(ಸ್ಟೆಮ್ ಸೆಲ್) ದಾನಿಗಳ ನೋಂದಣಿಗೆ ಹೆಚ್ಚಿನ ಪ್ರೋತ್ಸಾಹಿಸಬೇಕಿದೆ.
ಕ್ಯಾನ್ಸರ್ ರೋಗಿ ಬದುಕುಳಿಯಲು ರಕ್ತದ ಕಾಂಡಕೋಶ ( ಸ್ಟೆಮ್ ಸೆಲ್) ಕಸಿಯು ಕೊನೆಯ ಅವಕಾಶವಾಗಿದೆ.
ನೋಂದಣಿ ಪ್ರಕ್ರಿಯೆ ಹೀಗಿದೆ..
ಸ್ಟೆಮ್ ಸೆಲ್ ದಾನಿಯಾಗುವುದು ಸುಲಭ. 18-55 ವಯಸ್ಸಿನ ಆಸಕ್ತರು dkms-bmst.org ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಅಲ್ಲಿ ಸ್ವ್ಯಾಬ್ ಕಿಟ್ ನೀಡಲಾಗುತ್ತದೆ.
ನೋಂದಣಿಯ ಅರ್ಜಿ ವಿವರ ತುಂಬಿದ ನಂತರ, ನಿಮ್ಮ ಕೆನ್ನೆಯ ಒಳಭಾಗವನ್ನು ಸ್ವ್ಯಾಬ್ ಮಾಡಿ ಅಂಗಾಂಶ ಕೋಶಗಳನ್ನು ಸಂಗ್ರಹಿಸಿ ಆ ಮಾದರಿಯನ್ನು DKMS-BMST ಕಳುಹಿಸಿಕೊಡಬಹುದು.
DKMS ಪ್ರಯೋಗಾಲಯವು ನಿಮ್ಮ ಅಂಗಾಂಶದ ಪ್ರಕಾರವನ್ನು (ಎಚ್ಎಲ್ಎ) ವಿಶ್ಲೇಷಿಸುತ್ತದೆ. ಸೂಕ್ತ ದಾನಿಯಾಗಿದ್ದರೆ, ನೇರವಾಗಿಸಂಪರ್ಕ ಮಾಡಲಾಗುತ್ತದೆ.
ಪೆರಿಫೆರಲ್ ಬ್ಲಡ್ ಸ್ಟೆಮ್ ಸೆಲ್ ದಾನ ಎಂಬ ವಿಧಾನವನ್ನು ಬಳಸಿಕೊಂಡು ರಕ್ತದ ಹರಿವಿನಿಂದ ಕಾಂಡಕೋಶಗಳನ್ನು ಪಡೆಯಲಾಗುತ್ತದೆ, ಇದು ರಕ್ತದಾನದಂತೆಯೇ ಇರುತ್ತದೆ. ಇದು ಅತ್ಯಂತ ಸುರಕ್ಷಿತ ವಿಧಾನವಾಗಿದೆ.
ಹೆಚ್ಚಿನ ವಿವರಗಳಿಗೆ: dkms-bmst.org v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.