ADVERTISEMENT

ಏನಿದು e-ಸಿಗರೇಟ್? ಇದನ್ನು ಬಳಸುವ ಮುನ್ನ ಎಚ್ಚರವಹಿಸಿ..

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 6:34 IST
Last Updated 20 ಜೂನ್ 2022, 6:34 IST
e-ಸಿಗರೇಟ್
e-ಸಿಗರೇಟ್   

ತಂಬಾಕು ಬಳಕೆಯಲ್ಲಿ ಅತ್ಯಂತ ಸಾಮಾನ್ಯವಾದ ವಸ್ತುವೆಂದರೆ ಅದು ಸಿಗರೇಟ್, ಬೀಡಿ, ಹುಕ್ಕಾಮುಂತಾದವುಗಳು. ಅವುಗಳು ಹೊಗೆಯನ್ನು ಹೊರಹಾಕಬಲ್ಲದಾಗಿದ್ದು ಅದರಲ್ಲಿನ 400 ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ಕಾರಕ ಎಂದು ದೃಢಪಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾರುಹೋಗಿರುವುದು e-ಸಿಗರೇಟ್‌ಗಳ ಹಿಂದೆ.

ಏನಿದು e-ಸಿಗರೇಟ್?

e- ಸಿಗರೇಟ್‌ಗಳನ್ನು ವೇಪ್ಸ್, ವೇಪ್ ಪೆನ್, ಹುಕ್ಕ ಪೆನ್, e-ಸಿಗಾರ್, e- ಪೈಪ್ ಎಂಬ ಹೆಸರಿನಲ್ಲಿ ಕರೆಯಬಹುದಾಗಿದೆ. ಈ ಸಾಧನಗಳು e- ದ್ರವವನ್ನು ಉಪಯೋಗ ಮಾಡಿಕೊಂಡು ಏರಸಾಲ್‌ಗಳನ್ನು ಉತ್ಪತ್ತಿಮಾಡಬಹುದಾಗಿದೆ. ಎ-ದ್ರವದಲ್ಲಿ ಸಾಮಾನ್ಯವಾಗಿ ತಂಬಾಕುವಿನಿಂದ ಉತ್ಪತ್ತಿಯಾಗುವ ನಿಕೋಟಿನ್ ಅಂಶ. ಪ್ರೊಪಿಲೀನ್, ಗ್ಲೈಕಾಲ್, ಗ್ಲಿಸರೀನ್, ಪರಿಮಳಸೂಸುವ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.‌

ADVERTISEMENT

ಈ ಸಾಧನಗಳು ಶಾಖವನ್ನು ಉತ್ಪತ್ತಿ ಮಾಡಿ e-ದ್ರವವನ್ನು ಬಿಸಿ ಮಾಡುವುದರಿಂದ ಏರಸಾಲ್ ಉತ್ಪತ್ತಿಯಾಗುತ್ತದೆ. ಈ ಸಾಧನಗಳು ಎಲೆಕ್ಟ್ರಾನಿಕ್ ನಿಕೋಟಿನ್ ಉತ್ಪಾದನೆಯಾಗುತ್ತದೆ. ಈ ಸಾಧನಗಳನ್ನು ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ (ENDS) ಎಂದು ಕರೆಯಲಾಗುತ್ತದೆ.

ಈ ಸಾಧನಗಳ ಆಕಾರವನ್ನು ಸಾಧಾರಣವಾದ ಸಿಗರೇಟ್ , ಸಿಗಾರ್, ಪೈಪ್ ಗಳ ರೂಪದಲ್ಲಿ ಉತ್ಪಾದಿಸಲ್ಪಡುತ್ತದೆ. ಕೆಲವು ಯು.ಎಸ್.ಬಿ ಫ್ಲ್ಯಾಶ್ ಡ್ರೈವ್‌ಗಳನ್ನೂ ಸಹ ಹೋಲುವುದುಂಟು.

ಈ ಸಿಗರೇಟ್ ಗಳು ಸಾಧಾರಣ ಸಿಗರೇಟ್‌ಗಳಿಗಿಂತ ಭಿನ್ನವಾಗಿದ್ದು ಸಾಧಾರಣವಾಗಿ ಸಾಮಾನ್ಯವಾದ ಸಿಗರೇಟ್‌ಗಳಲ್ಲಿ ತಂಬಾಕನ್ನು ಸುಡುವುದರಿಂದ ಹೊರಹೊಮ್ಮುವ ಹಾನಿಕಾರಕವಾದ ಹೊಗೆಯಿಂದ ಕೂಡಿರುವುದಿಲ್ಲವಾದರೂ ಸಹ ನಿಕೋಟಿನ್ ಅಂಶವಿರುವುದರಿಂದ ಚಟ/ವ್ಯಸನಕ್ಕೆ ಎಡೆಮಾಡಬಹುದಾಗಿರುತ್ತದೆ. ಯಾವುದೇ ವಸ್ತುವಾದರೂ ಸಹ ಅದು ಚಟ/ವ್ಯಸನಕ್ಕೆ ವ್ಯಕ್ತಿಯನ್ನು ತಳ್ಳುವುದಾದರೆ ಅದನ್ನು ಆರೋಗ್ಯಕ್ಕೆ ಮಾರಕ ಎಂದೇ ಪರಿಗಣಿಸಬೇಕಾಗುತ್ತದೆ.

ಅತಿಯಾದ ಶಾಖ, ಶ್ವಾಸಕೋಶದ ತೊಂದರೆಗಳು, ನರಸಂಬಂಧಿ ದೌರ್ಬಲ್ಯಕ್ಕೆ ಕಾರಣವಾಗುವುದರಿಂದ e-ಸಿಗರೇಟ್ ಬಳಸುವ ಮುನ್ನ ಯುವಜನತೆ ಯೋಚಿಸಬೇಕಾಗಿದೆ.

E-ದ್ರವದಲ್ಲಿ ದಹಿಸುವಂತಹ ಗುಣವಿರುವುದರಿಂದ ಆಕ್ಸಿಜನ್ ಟ್ಯಾಂಕ್‌ಗಳ ಬಳಿ, ಗ್ಯಾಸ್ ಪಂಪ್‌ಗಳ ಬಳಿ ಉಪಯೋಗಿಸುವುದರಿಂದ ಬೆಂಕಿ ಹತ್ತಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ.ವಾಹನಗಳಲ್ಲಿ ಚಲಿಸುವಾಗ ಉಪಯೋಗ ಮಾಡುವುದರಿಂದ ರೋಗಗ್ರಸ್ಥ/ ಮೂರ್ಛೆ/SIEZURES ಆಗುವ ಸಂಭವ ಹೆಚ್ಚಿರುತ್ತದೆ.

ತಂಬಾಕು ಸಂಬಂಧಿತ ಸಿಗರೇಟ್, ಬೀಡಿ, ಚುಟ್ಟಾಅಥವಾಹುಕ್ಕಾಇರಬಹುದು ಅಥವ e-ಸಿಗರೇಟ್‌ಗಳಲ್ಲಿನ ನಿಕೋಟಿನ್ ಅಂಶವು ಮಿದುಳಿನಲ್ಲಿ ಡೋಪಮಿನ್ ಎಂಬ ಕ್ಷಣಿಕ ಆಹ್ಲಾದ ನೀಡುವ ಹಾರ್ಮೋನ್‌ಗಳನ್ನು ಸ್ರವಿಸಬಹುದಾಗಿದ್ದು ವ್ಯಕ್ತಿಯನ್ನು ಮತ್ತೆ ಮತ್ತೆ ಆ ಕ್ಷಣಿಕವಾದ ಆಹ್ಲಾದವನ್ನು ಪಡೆಯಯುವ ದಾಹವನ್ನು ಸೃಷ್ಠಿಸುತ್ತದೆ. ಇದರಿಂದ ವ್ಯಕ್ತಿ ವ್ಯಸನಿಯಾಗಲು ಕಾರಣವಾಗುತ್ತದೆ. ದೀರ್ಘಕಾಲ ಈ ದುಶ್ಚಟದಿಂದ ಆರೋಗ್ಯಕ್ಕೆ ಹಾನಿಕರವಲ್ಲದೆ ಉಪಯೋಗವಿಲ್ಲವೆಂಬುದನ್ನು ಯುವ ಜನತೆ ಮನಗೊಳ್ಳಬೇಕಾಗಿದೆ.

–ಲೇಖನ

ಡಾ. ಸ್ಮಿತಾ ಜೆ.ಡಿ

ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.