ADVERTISEMENT

ಮದ್ರಾಸ್ ಐ: ಪ್ರಮುಖ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2023, 5:15 IST
Last Updated 28 ಜುಲೈ 2023, 5:15 IST
ಸಾಂಕೇತಿಕ ಚಿತ್ರಗಳು
ಸಾಂಕೇತಿಕ ಚಿತ್ರಗಳು   

ಬೆಂಗಳೂರು: ಬಿಸಿಲು–ಮಳೆ, ಮೋಡ ಕವಿದ ವಾತಾವರಣದಿಂದಾಗಿ ನಗರದಲ್ಲಿ ‘ಕಂಜಕ್ಟಿವೈಟಿಸ್’ (ಮದ್ರಾಸ್ ಐ) ಪ್ರಕರಣಗಳು ಹೆಚ್ಚಳವಾಗಿವೆ.

ಕಣ್ಣುರಿ, ಕಣ್ಣಿನಲ್ಲಿ ನೀರು, ತುರಿಕೆ, ಕಣ್ಣು ಕೆಂಪಾಗುವುದು, ಕಣ್ಣಿನ ಊತ ಸೇರಿ ವಿವಿಧ ಸಮಸ್ಯೆಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

‘ಮದ್ರಾಸ್ ಐ‘ನ ಪ್ರಮುಖ ಲಕ್ಷಣಗಳು ಹಾಗೂ ಕಂಜಕ್ಟಿವೈಟಿಸ್’ ಪ್ರಮುಖ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತಾದ ಮಾಹಿತಿ ಇಲ್ಲಿದೆ...

ADVERTISEMENT

ಓದಿ: ‘ಮದ್ರಾಸ್ ಐ’ ಮುನ್ನೆಚ್ಚರಿಕೆಯೇ ಮದ್ದು

ಮದ್ರಾಸ್ ಐ: ಪ್ರಮುಖ ಲಕ್ಷಣಗಳು 

  • ಕಣ್ಣುಗುಡ್ಡೆಯ ಊತ 

  • ರೆಪ್ಪೆ ಅಂಟಿಕೊಳ್ಳುವುದು

  • ಕಣ್ಣಿನ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುವುದು

  • ಕಣ್ಣಲ್ಲಿ ಅತಿಯಾಗಿ ನೀರು ಬರುವಿಕೆ

  • ಕಣ್ಣು ಅತಿಯಾಗಿ ತುರಿಕೆ ಆಗುವಿಕೆ

  • ಕಣ್ಣುಗಳ ನಿರಂತರ ಅಸ್ವಸ್ಥತೆ

ಮದ್ರಾಸ್ ಐ: ಮುನ್ನೆಚ್ಚರಿಕೆ ಕ್ರಮಗಳು

  • ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು

  • ಕಣ್ಣು ಮತ್ತು ಕೈಗಳ ನಡುವಿನ ಸಂಪರ್ಕ ತಡೆಯಬೇಕು

  • ಕೈಗಳಿಂದ ಕಣ್ಣುಗಳ ಸ್ಪರ್ಶ ತಡೆಯಲು ಕನ್ನಡಕ ಹಾಕಿಕೊಳ್ಳಬಹುದು

  • ಕಣ್ಣುಗಳ ಆಯಾಸ ತಡೆಯಲು ಟಿ.ವಿ, ಮೊಬೈಲ್ ವೀಕ್ಷಣೆ ಕಡಿಮೆ ಮಾಡುವುದು‌

  • ಸೋಂಕಿತ ವ್ಯಕ್ತಿ ಬಳಸಿದ ಟವೆಲ್ ಸೇರಿ ವಿವಿಧ ವಸ್ತುಗಳನ್ನು ಬಳಸದಿರುವುದು

  • ಸೋಂಕಿತ ವ್ಯಕ್ತಿ ಹೊರಗಡೆ ತೆರಳದಿರುವುದು

  • ವೈದ್ಯರ ಸಲಹೆ ಪಡೆದು ಕಣ್ಣಿನ ಔಷಧಗಳನ್ನು ಬಳಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.