ADVERTISEMENT

ಎಚ್‌1ಬಿ ವೀಸಾ: ಹೆಚ್ಚಿದ ನಿರಾಕರಣೆ

‘ಬೈ ಅಮೆರಿಕನ್, ಹೈರ್ ಅಮೆರಿಕನ್’ ನೀತಿಯ ಪರಿಣಾಮ * ಭಾರತೀಯ ಕಂಪನಿಗಳ ಅರ್ಜಿಗಳ ತಿರಸ್ಕಾರ ಪ್ರಮಾಣ ಏರಿಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 21:45 IST
Last Updated 6 ನವೆಂಬರ್ 2019, 21:45 IST
   

ವಿದೇಶಿ ಪರಿಣತ ಕೆಲಸಗಾರರು ಅಮೆರಿಕದಲ್ಲಿ ತಾತ್ಕಾಲಿಕವಾಗಿ ನೆಲೆಸಲು ಅವಕಾಶ ನೀಡುವ ಎಚ್‌–1ಬಿ ವೀಸಾದ ಅರ್ಜಿಗಳನ್ನು ತಿರಸ್ಕರಿಸುವ ಪ್ರಮಾಣ ಏರಿಕೆಯಾಗುತ್ತಿದೆ. ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತದ ಕಂಪನಿಗಳು ಸಲ್ಲಿಸುವ ಇಂತಹ ಅರ್ಜಿಗಳನ್ನು ಅತ್ಯಧಿಕ ಪ್ರಮಾಣದಲ್ಲಿ ತಿರಸ್ಕರಿಸಲಾಗಿದೆ.

ಇಂತಹ ವೀಸಾ ಗಳ ನವೀಕರಣವನ್ನು ತಿರಸ್ಕರಿಸುವ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಆದರೆ ಇದೇ ವೇಳೆ ಅಮೆರಿಕದ್ದೇ ಕಂಪನಿಗಳು ಸಲ್ಲಿಸಿದ ಇಂತಹ ಅರ್ಜಿಗಳನ್ನು ತಿರಸ್ಕರಿಸುವ ಪ್ರಮಾಣದಲ್ಲಿನ ಏರಿಕೆ ಅಲ್ಪ ಮಾತ್ರ.

ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ, ‘ಬೈ ಅಮೆರಿಕನ್, ಹೈರ್ ಅಮೆರಿಕನ್‌’ (ಅಮೆರಿಕದ ವಸ್ತುಗಳನ್ನೇ ಖರೀದಿಸಿ, ಅಮೆರಿಕನ್ನರಿಗೇ ಕೆಲಸ ಕೊಡಿ) ನೀತಿಯ ಪರಿಣಾಮ ಎಂದು ಅಧ್ಯಯನ ವರದಿಯೊಂದು ಹೇಳಿದೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.