ADVERTISEMENT

ಚಿಕನ್ ತಿನ್ನೋ ಮೊದಲು ಇದನ್ನು ಓದಿ

ಕೋಳಿ ಮಾಂಸ, ಮೊಟ್ಟೆಯಲ್ಲಿದೆ ಔಷಧ ನಿರೋಧಕ ಬ್ಯಾಕ್ಟೀರಿಯಾ * ಅಧ್ಯಯನದಿಂದ ಬಹಿರಂಗ

ಏಜೆನ್ಸೀಸ್
Published 15 ಮೇ 2019, 12:31 IST
Last Updated 15 ಮೇ 2019, 12:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:ನೀವು ಕೋಳಿ ಮಾಂಸ ಪ್ರಿಯರಾ? ಕೋಳಿ ಮಾಂಸ, ಮೊಟ್ಟೆ ತಿನ್ನುತ್ತೀರಾ? ಹಾಗಾದರೆ ಇನ್ನು ಮುಂದೆ ಎಚ್ಚರ ವಹಿಸಿ.

ಕೋಳಿ ಮಾಂಸ ಮತ್ತು ಮೊಟ್ಟೆಗಳ ಮಾದರಿಯಲ್ಲಿ ಆ್ಯಂಟಿಬಯೋಟಿಕ್ (ಪ್ರತಿಜೀವಕ) ನಿರೋಧಕ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ. ಮುಂಬೈನ 12 ಪ್ರದೇಶಗಳಿಂದ ಸಂಗ್ರಹಿಸಿದ ಮಾಂಸದ ಮಾದರಿಯಲ್ಲಿ ’ಬಹು ಔಷಧ‘ ನಿರೋಧಕ ಬ್ಯಾಕ್ಟೀರಿಯಾ ಪತ್ತೆಯಾಗಿದೆ.

‘ಪ್ರಾಣಿಗಳ ಆಹಾರದಲ್ಲಿ ಅತಿಯಾಗಿ ಪ್ರತಿಜೀವಕಗಳನ್ನು ಬಳಸುತ್ತಿರುವುದೇ ಮಾಂಸದಲ್ಲಿ ಔಷಧ ನಿರೋಧಕ ಬ್ಯಾಕ್ಟೀರಿಯಾ ಉತ್ಪತ್ತಿಗೆ ಮುಖ್ಯ ಕಾರಣ’ ಎಂದು ಅಧ್ಯಯನ ವರದಿ ಸಿದ್ಧಪಡಿಸಿದ ತಜ್ಞರ ತಂಡದ ಸದಸ್ಯರಾದ ವಿಕಾಸ್ ಝಾ ತಿಳಿಸಿದ್ದಾರೆ.

ವಿವರವಾದ ಮಾಹಿತಿಗೆ ಈ ಸುದ್ದಿ ಓದಿ:ಕೋಳಿಗಳಿಗೆ ಆ್ಯಂಟಿಬಯೊಟಿಕ್‌ ಬಳಕೆ​

ಕನಿಷ್ಠ ಮೂರು ವಿಧದಆ್ಯಂಟಿಬಯೋಟಿಕ್‌ಗಳು ಕೆಲಸ ಮಾಡದಂತೆ ತಡೆಯುವ ಶಕ್ತಿ ಹೊಂದಿದ ಬ್ಯಾಕ್ಟೀರಿಯಾಗಳನ್ನು’ಬಹು ಔಷಧ‘ ನಿರೋಧಕ ಬ್ಯಾಕ್ಟೀರಿಯಾ ಎಂದು ಪರಿಗಣಿಸಲಾಗುತ್ತದೆ. ಈ ಬ್ಯಾಕ್ಟೀರಿಯಾದಿಂದಾಗಿ, ಸೋಂಕಿಗೆ ಗುರಿಯಾದ ವ್ಯಕ್ತಿಗೆ ನಿಡುವಆ್ಯಂಟಿಬಯೋಟಿಕ್‌ ಚಿಕಿತ್ಸೆ ಪರಿಣಾಮ ಬೀರುವುದಿಲ್ಲ.

ಸಂಗ್ರಹಿಸಿದ ಕೋಳಿ ಮಾಂಸದ ಮಾದರಿಗಳಿಂದ ವಿಷಾಹಾರಕ್ಕೆ ಕಾರಣವಾಗುವ (ಫುಡ್‌ ಪಾಯಿಸನಿಂಗ್) ‘ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಮ್’ ಅನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಇದುಅಮೋಕ್ಸಿಸಿಲಿನ್,ಅಜಿತ್ರೊಮೈಸಿನ್, ಸಿಪ್ರೊಫ್ಲೋಕ್ಸಾಸಿನ್ ಸೇರಿದಂತೆ 12ಆ್ಯಂಟಿಬಯೋಟಿಕ್‌ಗಳ ನಿರೋಧಕ ಶಕ್ತಿ ಹೊಂದಿದೆ. ಈ ಪೈಕಿ ಅಜಿತ್ರೊಮೈಸಿನ್,ಎರಿಥ್ರೊಮೈಸಿನ್,ನೈಟ್ರೋಫ್ರಂಟೊಯಿನ್ ಮತ್ತುಟ್ರಿಮೆಥೋಪ್ರಿಮ್ ನಿರೋಧಕ ಶಕ್ತಿ ಈ ಬ್ಯಾಕ್ಟೀರಿಯಾದಲ್ಲಿ ಅತಿ ಹೆಚ್ಚು ಕಂಡುಬಂದಿದೆ. ಸಂಗ್ರಹಿಸಲಾದ ಶೇ 60ರಷ್ಟು ಮಾದರಿಗಳಲ್ಲಿಟೆಟ್ರಾಸೈಕ್ಲೈನ್,ಅಮೋಕ್ಸಿಸಿಲಿನ್,ಜೆಂಟಾಮಿಕ್ ಮತ್ತು ಕ್ಲೋರೋಮ್‌ಫೆನಿಕಲ್ ನಿರೋಧಕ ಶಕ್ತಿ ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ನ್ಯಾಷನಲ್ ಫೆಸಿಲಿಟಿ ಫಾರ್ ಬಯೋಫಾರ್ಮಸ್ಯುಟಿಕಲ್ಸ್, ಸೈಂಟ್ ಜಾನ್ಸ್‌ ಕಾಲೇಜ್ ಆಫ್ ಹ್ಯುಮಾನಿಟೀಸ್ ಆ್ಯಂಡ್ ಸೈನ್ಸಸ್ ಮತ್ತು ವಿಇಎಸ್ ಕಾಲೇಜ್ ಆಫ್‌ ಫಾರ್ಮಸಿಯ ಸಂಶೋಧಕರು ಅಧ್ಯಯನ ವರದಿ ಸಿದ್ಧಪಡಿಸಿದ್ದು, ‘ಆಕ್ಟಾ ಸೈಂಟಿಫಿಕ್ ಮೈಕ್ರೋಬಯಾಲಜಿ’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಕುಕ್ಕುಟೋದ್ಯಮದ ಉತ್ಪನ್ನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ’ಬಹು ಔಷಧ‘ ನಿರೋಧಕ ಬ್ಯಾಕ್ಟೀರಿಯಾ ಇದೆ ಎಂದು 2017ರಲ್ಲಿ ‘ಸೆಂಟರ್ ಫಾರ್ ಸೈನ್ಸ್‌ ಆ್ಯಂಡ್ ಎನ್‌ವಿರಾನ್‌ಮೆಂಟ್’ ವರದಿ ತಿಳಿಸಿತ್ತು. ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಪಂಜಾಬ್‌ಗಳಿಂದ ಮಾಂಸದ ಮಾದರಿ ಸಂಗ್ರಹಿಸಿ ಅಧ್ಯಯನ ನಡೆಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.