ADVERTISEMENT

ಪರಿಸರ ಸ್ನೇಹಿ ‘ಸೂಪರ್ ಬಾಟಮ್’ ಡೈಪರ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 20:00 IST
Last Updated 24 ಡಿಸೆಂಬರ್ 2021, 20:00 IST
ಪಲ್ಲವಿ ಉಟಗಿ
ಪಲ್ಲವಿ ಉಟಗಿ   

ಇಂದಿನ ತಾಯಂದಿರಿಗೆ ಚಿಕ್ಕ ಮಕ್ಕಳ ಪಾಲನೆ–ಪೋಷಣೆ ನಿಜಕ್ಕೂ ಸವಾಲು. ಅದರಲ್ಲೂ ಪುಟ್ಟ ಮಕ್ಕಳಿಗೆ ಡೈಪರ್‌ ತೊಡಿಸುವುದು ಅವರಿಗೆ ಸಂಕಟವೇ ಸರಿ. ಯಾಕೆಂದರೆ ದಿನಪೂರ್ತಿ ಡೈಪರ್‌ ತೊಡಿಸುವುದರಿಂದ ಹಸುಗೂಸಿನಲ್ಲಿ ಚರ್ಮದ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂಬ ಆತಂಕ ತಾಯಂದಿರನ್ನು ಕಾಡಬಹುದು. ಈ ಭಯವನ್ನು ದೂರ ಮಾಡುವ ಸಲುವಾಗಿಯೇ ‘ಸೂಪರ್ ಬಾಟಮ್‌’ ಎಂಬ ಸಂಸ್ಥೆ ಪರಿಸರ ಸ್ನೇಹಿ ಡೈಪರ್‌ ಹಾಗೂ ಮಕ್ಕಳ ಒಳ ಉಡುಪುಗಳನ್ನು ತಯಾರಿಸಿದೆ. ಪಲ್ಲವಿ ಉಟಗಿ ಎನ್ನುವವರು ಸೂಪರ್‌ ಬಾಟಮ್ ಸಂಸ್ಥೆಯ ರೂವಾರಿ.

ಈ ಪರಿಸರ ಸ್ನೇಹಿ ಡೈಪರ್‌ ಅನ್ನು ಸಾವಯವ ಹತ್ತಿಯಿಂದ ತಯಾರಿಸಲಾಗಿದ್ದು, ಪುನರ್‌ ಬಳಕೆ ಮಾಡಬಹುದು. ಬಟ್ಟೆಯಿಂದ ತಯಾರಿಸಿದ ಯುಎನ್‌ಒ 2.0 ಡೈಪರ್‌ ಅನ್ನು ಮೂರು ತಿಂಗಳ ಮಗುವಿನಿಂದ ಮೂರು ವರ್ಷ ವಯೋಮಾನದವರೆಗಿನ ಮಕ್ಕಳಿಗೆ ತೊಡಿಸಬಹುದು.

ಈ ಡೈಪರ್‌ ತೇವ ನಿರೋಧಕವಾಗಿದ್ದು, ರಾತ್ರಿವೇಳೆ ಮಗುವಿನ ಉತ್ತಮ ನಿದ್ದೆಗೂ ಸಹಕರಿಸುತ್ತದೆ.

ADVERTISEMENT

‘ಸೂಪರ್ ಬಾಟಮ್‌ ಉತ್ಪನ್ನಗಳು ನನಗೆ ನಿಜಕ್ಕೂ ಬಹಳ ಮೆಚ್ಚುಗೆಯಾಗಿವೆ. ಇದರಲ್ಲಿ ಒಂದನ್ನು ಆಯ್ಕೆ ಮಾಡಿ ಹೇಳುವುದು ಕಷ್ಟ. ಇದರಲ್ಲಿರುವ ಎಲ್ಲಾ ಉತ್ಪನ್ನಗಳು ನನಗೆ ಇಷ್ಟ. ನನಗೆ ಮಗಳು ಹುಟ್ಟಿದಾಗಿನಿಂದಲೂ ಆಕೆಗೆ ಸೂಪರ್‌ಬಾಟಮ್ ಡೈಪರ್‌ ಬಳಸಿದ್ದೆ. ಈಗ ಅವಳಿಗೆ ತೊಡಿಸುವ ಒಳ ಉಡುಪುಗಳು ಕೂಡ ಇದೇ ಬ್ರ್ಯಾಂಡ್‌ನದ್ದು. ಸೂಪರ್‌ಬಾಟಮ್‌ ಉತ್ಪನ್ನಗಳು ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇದರೊಂದಿಗೆ ಅವರ ಗ್ರಾಹಕ ಸೇವೆಯೂ ಕೂಡ ಬಹಳ ಚೆನ್ನಾಗಿದೆ’ ಎನ್ನುವುದು ಸೂಪರ್‌ ಬಾಟಮ್‌ ಡೈಪರ್ ಮತ್ತು ಇತರ ಉತ್ಪನ್ನಗಳನ್ನು ಬಳಸುತ್ತಿರುವ ನಾಲ್ಕು ವರ್ಷದ ಮಗುವಿನ ತಾಯಿ ಪ್ರಜ್ಞಾ ಈಶ್ವರ್ ಅವರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.