ADVERTISEMENT

ಆರೋಗ್ಯ: ಗರ್ಭಿಣಿಯರ ವ್ಯಾಯಾಮಗಳು

ಪ್ರಜಾವಾಣಿ ವಿಶೇಷ
Published 6 ಸೆಪ್ಟೆಂಬರ್ 2024, 23:30 IST
Last Updated 6 ಸೆಪ್ಟೆಂಬರ್ 2024, 23:30 IST
   
ಗರ್ಭಾವಸ್ಥೆಯನ್ನು ಮೂರು ತ್ರೈಮಾಸಿಕಗಳಾಗಿ ವಿಂಗಡಿಸಲಾಗಿದೆ ಅಲ್ಲದೆ, ಪ್ರತಿ ಹಂತದಲ್ಲಿ ವಿಭಿನ್ನ ವಿಧದ ವ್ಯಾಯಾಮಗಳನ್ನು ಶಿಪಾರಸು ಮಾಡಲಾಗಿದೆ. ಶಿಶುವಿನ ಅಭಿವೃದ್ಧಿ ಜೊತೆಗೆ ತಾಯಿಗೂ ಕೂಡ ಈ ವ್ಯಾಯಾಮಗಳು ಲಾಭದಾಯಕವಾಗಿರುತ್ತವೆ.

 ಮೊದಲ ತ್ರೈಮಾಸಿಕ (ಮೊದಲ ಮೂರು ತಿಂಗಳು)

 ಗರ್ಭಾವಸ್ಥೆಯ ಪ್ರಥಮ ತ್ರೈಮಾಸಿಕದಲ್ಲಿ ದೈಹಿಕ ಚಟುವಟಿಕೆಗಳು ಹಗುರ ಮತ್ತು ಅನುಕೂಲಕರವಾಗಿರಬೇಕು. ಈ ಕೆಳಗೆ ಶಿಫಾರಸು ಮಾಡಿರುವ ಕೆಲವು ವ್ಯಾಯಾಮಗಳನ್ನು ಆವಿಷ್ಕರಿಸಬಹುದು:

 • ನಡಿಗೆ: ಗರ್ಭಾವಸ್ಥೆಯ ಮೊದಲ ಮೂರು ತಿಂಗಳ ಅವಧಿಯಲ್ಲಿ ಕೆಲಕಾಲ ನಡೆಯುವುದು ರಕ್ತ ಪರಿಚಲನೆಯನ್ನು ಸುಧಾರಿಸಲು ಲಾಭದಾಯಕವಾಗಿರುತ್ತದೆ. ಅಲ್ಲದೆ, ದೇಹದ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ADVERTISEMENT

ಸೊಂಟ ಭಾಗಿಸುವುದು: ಈ ವ್ಯಾಯಾಮದ ಮೂಲಕ ಬೆನ್ನಿನ ನೋವು ಕಡಿಮೆಯಾಗುವುದು ಅಲ್ಲದೆ, ಬೆನ್ನಿನ ಮಾಂಸಖAಡಗಳು ಸದೃಢಗೊಳ್ಳುತ್ತವೆ. ಗರ್ಭಾಶಯದ ಮಮ್ಸಕಂಡಗಳನ್ನು ಕೂಡ ಇದು ಬಲಪಡಿಸುತ್ತದೆ.

ಮಮ್ಸಕಂಡಗಳನ್ನು ಹಿಗ್ಗಿಸುವುದು: ಸ್ಟ್ರೆಚಿಂಗ್ ಅಂದರೆ ಮಮ್ಸಕಂಡಗಳನ್ನು ಹಿಗ್ಗಿಸುವ ವ್ಯಾಯಾಮದಿಂದ ನೋವು ಮತ್ತು ಒತ್ತಡ ಕಡಿಮೆಯಾಗುತ್ತದೆ ಅಲ್ಲದೆ, ದೇಹವನ್ನು ಸಡಿಲವಾಗಿಟ್ಟುಕೊಳ್ಳಲು ಸಹಾಯವಾಗುತ್ತದೆ.

 ಎರಡನೇ ತ್ರೈಮಾಸಿಕ (ಮೂರರಿಂದ ಆರು ತಿಂಗಳು)

ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಮಹಿಳೆಯ ದೇಹದಲ್ಲಿನ ಶಕ್ತಿಯ ಮಟ್ಟ ಹೆಚ್ಚುತ್ತದೆ. ಸ್ವಲ್ಪ ಹೆಚ್ಚಿಗೆ ಚಟುವಟಿಕೆ ಕೈಗೊಳ್ಳಲು ಇದು ಸೂಕ್ತ ಸಮಯವಾಗಿರುತ್ತದೆ. ಈ ತ್ರೈಮಾಸಿಕ ಅವಧಿಗೆ ಕೆಳಗೆ ನೀಡಲಾದ ಕೆಲವು ವ್ಯಾಯಾಮಗಳನ್ನು ಶಿಫಾರಸು ಮಾಡಲಾಗುತ್ತಿದೆ :

ಈಜುವುದು: ದೇಹಕ್ಕೆ ಅತ್ಯಂತ ಉಪಯೋಗಿ ಚಟುವಟಿಕೆ ಎಂದರೆ ಅದು ಈಜುವುದಾಗಿದೆ. ದೇಹದ ಪ್ರತಿ ಭಾಗಕ್ಕೆ ಅದು ವ್ಯಾಯಾಮ ನೀಡುವುದಲ್ಲದೆ, ತೂಕ ಕಡಿಮೆಯಾಗಲು ಮತ್ತು ಒತ್ತಡ ನಿವಾರಿಸುವಲ್ಲಿ ಅದು ಸಹಾಯಕವಾಗಿದೆ.

ಯೋಗ: ಮಹಿಳೆಯರು ಗರ್ಭಾವಸ್ಥೆಯ ಸಮಯದಲ್ಲಿ ಅತ್ಯಂತ ಹೆಚ್ಚಿನ ಮಾನಸಿಕ ಒತ್ತಡದಲ್ಲಿರುತ್ತಾರೆ. ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಯೋಗ ಸಹಾಯಕವಾಗಿದೆ. ದೇಹದ ಸಡಿಲತೆ ಮತ್ತು ಸಮತೋಲನವನ್ನು ಉಳಿಸಿಕೊಳ್ಳಲು ಇದು ನೆರವಾಗುತ್ತದೆ.

ತೂಕ ಎತ್ತುವ ವ್ಯಾಯಾಮ: ಹಗುರವಾದ ತೂಕಗಳನ್ನು ಎತ್ತುವ ವ್ಯಾಯಾಮವು ದೇಹದ ಮಮ್ಸಕಂಡಗಳನ್ನು ಬಲಪಡಿಸಲು ಮುಖ್ಯವಾಗಿರುತ್ತದೆ. ತೂಕ ಅತಿಯಾಗಿರಬಾರದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.

ಮೂರನೇ ತ್ರೈಮಾಸಿಕ (ಆರರಿಂದ ಒಂಬತ್ತು ತಿಂಗಳು)

ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ ದೇಹದ ತೂಕ ಹೆಚ್ಚುತ್ತದೆ. ಆದ್ದರಿಂದ ಈ ಸಮಯದಲ್ಲಿ ಹಗುರವಾದ ಮತ್ತು ಸುರಕ್ಷಿತ ವ್ಯಾಯಾಮಗಳ ಕಡೆಗೆ ಗಮನ ನೀಡಬೇಕು. ಈ ಕೆಳಗಿನ ವ್ಯಾಯಾಮಗಳನ್ನು ಈ ತ್ರೈಮಾಸಿಕದಲ್ಲಿ ಮಾಡಬಹುದಾಗಿದೆ.

ಕೆಗಲ್ ವ್ಯಾಯಾಮ: ಈ ವ್ಯಾಯಾಮವನ್ನು ದಿನಾಲೂ ಮಾಡುವ್ಯದರಿಂದ ಸೊಂಟದ ತಳಭಾಗದ ಮಾಂಸಖAಡಗಳು ಬಲಗೊಳ್ಳುತ್ತವೆ. ಇದು ಹೆರಿಗೆಯ ಸಮಯದಲ್ಲಿ ಸಹಾಯಕವಾಗುತ್ತದೆ.

ದೀರ್ಘ ಉಸಿರಾಟ: ಆಳವಾಗಿ ಉಸಿರಾಡುವುದು ಅಥವ ಸುದೀರ್ಘ ಉಸಿರಾಟದಿಂದ ಒತ್ತಡ ಕಡಿಮೆಯಾಗಲು ಹಾಗೂ ಮಾನಸಿಕ ಸಮತೋಲನವನ್ನು ಉಳಿಸಿಕೊಳ್ಳಲು ಸಹಾಯ ಲಭಿಸುತ್ತದೆ. ಹೆರಿಗೆಯ ಸಮಯದಲ್ಲೂ ಇದು ಲಾಭದಾಯಕವಾಗಿರುತ್ತದೆ.

ಒಂದು ಪಕ್ಕಕ್ಕೆ ಮಲಗಿ ಕಾಲು ಎತ್ತುವುದು: ಈ ವ್ಯಾಯಾಮ ಮುಖ್ಯವಾಗಿ ಮಾಂಸಖAಡಗಳನ್ನು ಗುರಿಯಾಗಿಟ್ಟುಕೊಂಡಿರುತ್ತದೆ. ಜೊತೆಗೆ ದೇಹದ ಮಾಂಸಖAಡಗಳನ್ನು ಬಲಗೊಳಿಸುವುದಲ್ಲದೆ, ಕಾಲುಗಳಿಗೆ ರಕ್ತದ ಪರಿಚಲನೆ ಉತ್ತಮವಾಗುವಂತೆ ಮಾಡುತ್ತದೆ.

ಅಂತಿಮ ತೀರ್ಮಾನ

ಗರ್ಭಾವಸ್ಥೆಯಲ್ಲಿ ಸಮಯಕ್ಕೆ ಸರಿಯಾದ ವ್ಯಾಯಾಮ ಮಾಡುವುದು ತಾಯಿ ಮತ್ತು ಇನ್ನು ಜನಿಸದ ಆಕೆಯ ಶಿಶುವಿಗೆ ಲಾಭದಾಯಕವಾಗಿರುತ್ತದೆ. ತ್ರೈಮಾಸಿಕಗಳ ಉದ್ದಕ್ಕೂ ಸೂಕ್ತ ವ್ಯಾಯಾಮದ ದಿನಚರಿಯನ್ನು ಅನುಸರಿಸುವುದು, ಗರ್ಭಾವಸ್ಥೆಯ ಜೊತೆಗೆ ಹೆರಿಗೆಯ ಸಂದರ್ಭದಲ್ಲೂ ಬಹಳ ಸಹಾಯಕವಾಗಿರುತ್ತದೆ. ಸುರಕ್ಷತೆ ಮತ್ತು ಪರಿಣಾಮಕಾರಿತನದ ಖಾತ್ರಿ ಮಾಡಿಕೊಳ್ಳಲು ಯಾವುದೇ ನೂತನ ವ್ಯಾಯಾಮದ ದಿನಚರಿಯನ್ನು ಆರಂಭಿಸುವ ಮುನ್ನ ಪರಿಣತರೊಂದಿಗೆ ಸಮಾಲೋಚನೆ ಕೈಗೊಳ್ಳುವುದು ಮುಖ್ಯವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.