ಆರೋಗ್ಯ ಪೂರ್ಣ ಮನಸ್ಸು ಮತ್ತು ದೇಹ ವೃದ್ಧಿಸಿಕೊಳ್ಳಲು ಯೋಗದ ಹಾದಿ ಹಾಗೂ ಸತ್ವಯುತ ಆಹಾರ ಪದ್ಧತಿ ಅನುಸರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ (46), ತಮ್ಮ ಮನೆಯ ಹಿತ್ತಲಲ್ಲಿ ಬೆಳೆದಿರುವ ಸ್ಟಾರ್ ಫ್ರ್ಯೂಟ್‌ಗಳನ್ನು ಸಂಗ್ರಹಿಸುತ್ತಿರುವ ವಿಡಿಯೊ ಹಂಚಿಕೊಂಡಿದ್ದಾರೆ.
ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆಗೆ ಹಾಗೂ ಸೋಂಕಿಗೆ ಒಳಗಾದವರು ಗುಣಮುಖರಾಗಲು 'ವಿಟಮಿನ್ ಸಿ' ಸಹಾಯಕ ಎಂಬುದು ಪ್ರಚಲಿತದಲ್ಲಿದ್ದು, ಸ್ಟಾರ್ ಫ್ರ್ಯೂಟ್‌ಗಳಲ್ಲೂ 'ಸಿ ವಿಟಮಿನ್' ಹೇರಳವಾಗಿರುತ್ತದೆ.
ದಾರೆ ಹುಳಿ ಹಣ್ಣು ಅಥವಾ ಸ್ಟಾರ್ ಫ್ರ್ಯೂಟ್ ಸಂಗ್ರಹಿಸುತ್ತಿರುವ ವಿಡಿಯೊ ತುಣುಕನ್ನು ಶಿಲ್ಪಾ ಶೆಟ್ಟಿ ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮನೆಯ ತೋಟದಲ್ಲಿ ದಾರೆ ಹುಳಿ ಹಣ್ಣಿನ ಮರವನ್ನು ಬೆಳೆಸಿರುವುದು, ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ನಸುಗೆಂಪು ಬಣ್ಣದ ಉಪ್ಪಿನ (ಪಿಂಕ್ ಸಾಲ್ಟ್) ಜೊತೆಗೆ ಅದನ್ನು ತಿನ್ನಲು ಬಹಳ ಇಷ್ಟ,...ಎಂದು ಬರೆದುಕೊಂಡಿದ್ದಾರೆ.
ಹಣ್ಣು ಸಂಗ್ರಹಿಸುವ 54 ಸೆಕೆಂಡ್‌ಗಳ ವಿಡಿಯೊ ಹಂಚಿಕೊಂಡಿರುವ ಅವರು, 'ಸ್ವತಃ ನೀವೇ ಹಾಕಿರುವ ಸಸಿಯು ಬೆಳೆದು ದೊಡ್ಡ ಮರವಾಗಿ, ಅದು ಹಣ್ಣನ್ನೂ ಕೊಡುವುದನ್ನು ಕಾಣುವುದೆಂದರೆ....ಆ ಅನುಭವಕ್ಕೆ ಸಮನಾದುದಿಲ್ಲ...' ಎಂದಿದ್ದಾರೆ.
ಅಧಿಕ ಪ್ರಮಾಣದಲ್ಲಿ ನೀರಿನ ಅಂಶ, ನಾರಿನ ಅಂಶ, ವಿಟಮಿನ್ ಸಿ ಒಳಗೊಂಡಿರುವ ದಾರೆ ಹುಳಿ ಹಣ್ಣು ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಿಸುತ್ತದೆ. ತೂಕ ಇಳಿಸುವ ಡಯೆಟ್‌ನಲ್ಲೂ ಈ ಹಣ್ಣು ಪ್ರಮುಖ ಸ್ಥಾನ ಪಡೆದಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.