ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಈ ಸೋಂಕು ಭಾರತಕ್ಕೂ ವ್ಯಾಪಿಸುತ್ತಿದೆ. ಚೀನಾದಲ್ಲಿ ಇಲ್ಲಿಯವರೆಗೂ 3000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಭಾರತದಲ್ಲಿ 21ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವುದು ದೃಡಪಟ್ಟಿದೆ.
ಕೊರೊನಾ ವೈರಸ್ ಸೋಂಕಿನಲಕ್ಷಣಗಳು...
* ಕೆಮ್ಮು
* ಜ್ವರ
* ಸೀನುವುದು
* ಉಸಿರಾಟ ಸಮಸ್ಯೆ
* ವಾಂತಿ ಮತ್ತು ಭೇಧಿ (ಕೆಲವು ರೋಗಿಗಳಲ್ಲಿ ಮಾತ್ರ)
* ರೋಗಿಗಳಲ್ಲಿಸೋಂಕುನಿಯಂತ್ರಣಕ್ಕೆ ಬಾರದಿದ್ದಾಗ ನ್ಯುಮೋನಿಯಾ ಹಾಗೂ ಕಿಡ್ನಿ ವೈಪಲ್ಯ ಉಂಟಾಗಿಸಾವು ಸಂಭವಿಸುತ್ತದೆ.
ಹರಡುವ ವಿಧಾನ
* ಸೋಂಕಿತರ ನೇರ ಸಂಪರ್ಕದಿಂದ ಈ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು
* ಸೋಂಕಿತರ ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಇತರರಿಗೆ ಹಬ್ಬುವುದು
* ಸೋಂಕಿತರು ಬಳಸಿದ ವಸ್ತುಗಳನ್ನು ಇತರರು ಬಳಸಿದರೆ (ಕರವಸ್ತ್ರ, ಟವೆಲ್, ವಸ್ತ್ರ, ಇತ್ಯಾದಿ) ಅವರಿಗೂ ಹರಡುವ ಸಾಧ್ಯತೆ
* ಮೂಗು, ಬಾಯಿ, ಕಣ್ಣಿನ ಮೂಲಕ ಕೊರೊನಾ ವೈರಸ್ ಸುಲಭವಾಗಿ ದೇಹ ಸೇರುವುದು
ಮುನ್ನೆಚ್ಚರಿಕೆ ಕ್ರಮಗಳು...
* ಪದೇ ಪದೇ ಸಾಬೂನು ಬಳಸಿ ಕೈಗಳನ್ನು ಸ್ವಚ್ಛಗೊಳಿಸುವುದು.
* ಕೈ ತೊಳೆಯದೇ ಕಣ್ಣು, ಬಾಯಿ, ಮೂಗನ್ನು ಮುಟ್ಟದೇ ಇರುವುದು.
* ಸೋಂಕಿತರಿಂದ ಸಾಧ್ಯವಾದಷ್ಟು ದೂರ ಇರುವುದು.
* ಮುಖಗವಸು ಅಥವಾ ಮಾಸ್ಕ್‌ಬಳಕೆ ಮಾಡುವುದು
* ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಬೇಕು
* ವನ್ಯಜೀವಿಗಳು ಹಾಗೂ ಫಾರ್ಮ್‌ಗಳಲ್ಲಿ ಬೆಳೆಸಿರುವ ಪ್ರಾಣಿಗಳನ್ನು ಮುಟ್ಟುವಾಗ ಸುರಕ್ಷಿತಾ ಕವಚಗಳನ್ನು ಬಳಕೆ ಮಾಡುವುದು.
* ಶೀತ, ನೆಗಡಿ, ಜ್ವರ ಕಾಣಿಸಿಕೊಂಡರೆ ಮನೆಯಲ್ಲಿ ವಿಶ್ರಾಂತಿ ಪಡೆಯುವುದು.
* ಮೇಲಿನ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿಸುವುದು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ)ವುಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಪೋಸ್ಟರ್‌ಗಳನ್ನು ಟ್ವೀಟ್ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ, ಚೀನಾ, ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳುಕೊರೊನಾ ವೈರಸ್ ಕುರಿತಂತೆ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಇದುವರೆಗೂ ಪರಿಣಾಮಕಾರಿ ಲಸಿಕೆ ಅಥವಾ ಔಷಧಿಯನ್ನು ಸಂಶೋಧನೆ ಮಾಡಲಾಗಿಲ್ಲ. ಪ್ರಸ್ತುತ ಆ್ಯಂಟಿಬಯೋಟಿಕ್ ಮಾದರಿಯ ಔಷಧಿಗಳು ಮತ್ತು ಇತರೆ ಜೀವರಕ್ಷಕ ಸಾಧನಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.