ADVERTISEMENT

ಚಳಿಗಾಲದಲ್ಲಿ ಚರ್ಮ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 0:30 IST
Last Updated 2 ಡಿಸೆಂಬರ್ 2023, 0:30 IST
<div class="paragraphs"><p>ಕೊಬ್ಬರಿ ಎಣ್ಣೆ ಆರೈಕೆ</p></div>

ಕೊಬ್ಬರಿ ಎಣ್ಣೆ ಆರೈಕೆ

   

ಮೂಗಿನ ತುದಿ ಉರಿಯತೊಡಗಿದರೆ, ಮೀನಖಂಡಗಳ ಬಳಿ ಕೆರೆತ ಶುರುವಾದರೆ, ಎಮ್ಮೆಯಾಗಿರಬೇಕಿತ್ತು ದೇವರೆ, ಈ ಬೆನ್ನಿನ ಕೆರತಕ್ಕೆ ಗೋಡೆಗಳಿಗೆ ಉಜ್ಜಿಕೊಳ್ಳಬಹುದಿತ್ತು ಅಂತನಿಸುತ್ತಿದ್ದರೆ.. ಚಳಿಗಾಲದ ಕೆರೆತ ಆರಂಭವಾಗಿದೆ ಎಂತಲೇ ಅರ್ಥ.

ಚಳಿಗಾಲದಲ್ಲಿ ನೀರು ಕುಡಿಯುವುದು ಕಡಿಮೆಯಾಗುತ್ತದೆ. ಚರ್ಮ ಶುಷ್ಕವಾಗುತ್ತ ಹೋಗುತ್ತದೆ. ಚರ್ಮದಲ್ಲಿ ತೇವಾಂಶ ಕಡಿಮೆ ಆದಷ್ಟೂ ಚರ್ಮ ಬಿರುಕುಬಿಡುವುದು, ಕೆರೆಯುವುದು ಶುರುವಾಗುತ್ತದೆ. ಇದನ್ನು ನಿಯಂತ್ರಣದಲ್ಲಿಡಲು ಎರಡು ಸರಳವಾದ ಮನೆ ಮದ್ದುಗಳಿವೆ.

ADVERTISEMENT

ಒಂದು, ಸೋಪುಗಳನ್ನು ಬಳಸುವುದು ನಿಲ್ಲಿಸಬೇಕು. ಇಲ್ಲವೇ ಗ್ಲಿಸರಿನ್‌ ಯುಕ್ತ ಸೋಪುಗಳನ್ನು ಬಳಸಬೇಕು. ಸ್ನಾನಕ್ಕೆ ಮುನ್ನ ಮೈಗೆ ಕೊಬ್ಬರಿ ಎಣ್ಣೆ ಲೇಪಿಸಿಕೊಳ್ಳಬೇಕು. ಒಂದೆರಡು ನಿಮಿಷಗಳ ನಂತರ ಉಗುರುಬೆಚ್ಚಿಗಿನ ನೀರಿನಿಂದ ಸ್ನಾನ ಮಾಡಬೇಕು. ಚಳಿಗೆ ಹೆದರಿ ಸುಡುಸುಡುವ ನೀರಿನಿಂದ ಸ್ನಾನ ಮಾಡಿದರೆ ಶುಷ್ಕತನ ಹೆಚ್ಚುವುದು. ಸೋಪಿನ ಬದಲು ಕಡಲೆ ಹಿಟ್ಟು ಬಳಸಿದರೂ ಚರ್ಮದ ತೇವಾಂಶ ಕಾಪಾಡಿಕೊಳ್ಳಬಹುದು. ಕಡಲೆ ಹಿಟ್ಟಿಗೆ, ಮೊಸರು ಅಥವಾ ಹಾಲು ಏನೂ ಇಲ್ಲದಿದ್ದಲ್ಲಿ ನೀರು ಬೆರೆಸಿಯೂ ಲೇಪನ ಮಾಡಿಕೊಳ್ಳಬಹುದು. 

ಚರ್ಮದ ತೇವಾಂಶ ಕಾಪಿಟ್ಟು ಮೃದುಗೊಳಿಸುವ ಈ ಎರಡು ಸೂತ್ರಗಳು, ಚಳಿಗಾಲವನ್ನು ಸುಸೂತ್ರವಾಗಿ ಕಳೆಯುವಂತೆ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.