ADVERTISEMENT

ಹೊಟ್ಟೆಯ ಕ್ಯಾನ್ಸರ್: ತಿನ್ನುವ ಆಹಾರದ ಮೇಲೆ ಇರಲಿ ಎಚ್ಚರ

ಡಾ.ನಿತಿ ರೈ ಜಾಡಾ
Published 22 ನವೆಂಬರ್ 2022, 8:48 IST
Last Updated 22 ನವೆಂಬರ್ 2022, 8:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂದು ಹೆಚ್ಚಳವಾಗುತ್ತಿರುವ ಕ್ಯಾನ್ಸರ್‌ಗಳ ಪೈಕಿ ಹೊಟ್ಟೆ ಕ್ಯಾನ್ಸರ್‌ ಪ್ರಪಂಚದಲ್ಲಿ ಐದನೇ ಸ್ಥಾನದಲ್ಲಿದೆ. ಹೊಟ್ಟೆ ಕ್ಯಾನ್ಸರ್‌ ಅನ್ನು ಗ್ಯಾಸ್ಟ್ರೀಕ್‌ ಕ್ಯಾನ್ಸರ್‌ ಎಂದೂ ಗುರುತಿಸಲಾಗುತ್ತದೆ. ಗ್ಯಾಸ್ಟ್ರೀಕ್‌ ಹೆಚ್ಚಾಗಿ ಪುರುಷರಲ್ಲೇ ಕಾಣಿಸಿಕೊಳ್ಳುತ್ತಿದೆ. ನವೆಂಬರ್‌ ತಿಂಗಳನ್ನು ವಿಶ್ವ ಹೊಟ್ಟೆ ಕ್ಯಾನ್ಸರ್‌ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತಿದ್ದು, ಹೊಟ್ಟೆ ಕ್ಯಾನ್ಸರ್‌ನ ಕುರಿತ ಮಾಹಿತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ.

ಹೊಟ್ಟೆ ಕ್ಯಾನ್ಸರ್‌ನ ರೋಗಲಕ್ಷಣಗಳು
ಹೊಟ್ಟೆ ಕ್ಯಾನ್ಸರ್ ಪ್ರಾರಂಭದಲ್ಲಿ ಗ್ಯಾಸ್ಟ್ರಿಕ್‌ನ ಲಕ್ಷಣದೊಂದಿಗೆ ಗೋಚರಿಸುತ್ತದೆ. ಹಸಿವಾಗದೇ ಇರುವುದು, ತೂಕನಷ್ಟ, ಕಿಬ್ಬೊಟ್ಟೆ ನೋವು, ಎದೆಯುರಿ, ಅಜೀರ್ಣ, ವಾಕರಿಕೆ, ವಾಂತಿ, ಕಾಮಾಲೆ ಇತ್ಯಾದಿ ರೋಗ ಲಕ್ಷಣಗಳು ಹೊಟ್ಟೆ ಕ್ಯಾನ್ಸರ್‌ನದ್ದಾಗಿದೆ. ಕೆಲವರಿಗೆ ಈ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವೇನು?:

ADVERTISEMENT

ಹೊಟ್ಟೆ ಕ್ಯಾನ್ಸರ್‌ಗೆ ಬಹುತೇಕ ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮ ಪ್ರಮುಖವಾಗಿರುತ್ತದೆ. ಕೆಲವೊಮ್ಮೆ ಗ್ಯಾಸ್ಟ್ರೀಕ್‌ನಂತಹ ಲಕ್ಷಣಗಳು ಸಹ ಹೊಟ್ಟೆ ಕ್ಯಾನ್ಸರ್‌ ಆಗಿ ಬದಲಾಗಬಹುದು.ಇನ್ನೂ ಕೆಲವು ಪ್ರಕರಣಗಳಲ್ಲಿ ಅನುವಂಶಿಯವಾಗಿ ಸಹ ಹೊಟ್ಟೆ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ತಿಳಿಸಿವೆ.

ಇನ್ನೂ ಧೂಮಪಾನ ಕೂಡ ಗ್ಯಾಸ್ಟ್ರೀಕ್‌ ಕ್ಯಾನ್ಸರ್‌ಗೆ ಕಾರಣವಾಗಲಿದೆ. ಶೇ.60 ರಷ್ಟು ಪ್ರಮಾಣವೂ ಧೂಮಪಾನದಿಂದಲೂ ಗ್ಯಾಸ್ಟ್ರೀಕ್‌ ಗ್ಯಾನ್ಸರ್‌ ಬರಲಿದೆ. ಆಹಾರ ಸೇವನೆಯಲ್ಲಿ ಹೈಜಿನ್‌ ಇಲ್ಲದಿದ್ದರೆ, ಪೌಷ್ಠಿಕ ಆಹಾರ ಸೇವನೆ ಮಾಡದೇ ಹೋದರೂ ಸಹ ಹೊಟ್ಟೆ ಕ್ಯಾನ್ಸರ್‌ ಆಥವಾ ಗ್ಯಾಸ್ಟ್ರೀಕ್‌ ಕಾರಣವಾಗಬಹುದು. ಕೆಲವರು ಸಮರ್ಪಕ ನೀರು ಕುಡಿದೇ ಇರುವುದರಿಂದಲೂ ಗ್ಯಾಸ್ಟ್ರೀಕ್‌ ಸಮಸ್ಯೆಗೆ ಸಿಲುಕುತ್ತಾರೆ. ಅತಿಯಾದ ಉಪ್ಪು ಸೇವನೆ, ಕೆಂಪು ಮತ್ತು ಸಂಸ್ಕರಿಸಿದ ಮಾಂಸಗಳ ಅತಿಯಾದ ಸೇವನೆ, ಪ್ಯಾಕೇಜ್‌ ಆಹಾರಪದಾರ್ಥಗಳ ಅತಿಯಾದ ಸೇವನೆ ಕೂಡ ಈ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಹೊಟ್ಟೆಯ ಕ್ಯಾನ್ಸರ್ ನಿಯಂತ್ರಣ ಹೇಗೆ?
ಹೊಟ್ಟೆ ಕ್ಯಾನ್ಸರ್‌ ಬಾರದಂತೆ ನೋಡಿಕೊಳ್ಳಲು ಕೆಲವು ಆಹಾರ ಕ್ರಮಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅತಿಯಾದ ಉಪ್ಪು ಅಥವಾ ಉಪ್ಪಿನ ಕಾಯಿ ಸೇವನೆಯನ್ನು ನಿಲ್ಲಿಸುವುದು, ಅತಿಯಾದ ಖಾರ, ಹಸಿ ಮೆಣಸಿನಕಾಯಿ ಸೇವನೆ ಸಹ ಅಪಾಯಕಾರಿ. ಇನ್ನು ಕೆಂಪು ಮಾಂಸ ಹಾಗೂ ಸಂಸ್ಕರಿಸಿದ ಆಹಾರ ಸೇವನೆಯೂ ಸಹ ಅತ್ಯಂತ ಅಪಾಯಕಾರಿಯಾಗಿದ್ದು, ಇದರ ಸೇವನೆ ಮೇಲೆ ನಿಯಂತ್ರಣ ಹೊಂದಿರಬೇಕು.

ಯಾವ ವಯಸ್ಸಿನವರಲ್ಲಿ ಕಾಣಿಸಿಕೊಳ್ಳಲಿದೆ?
ಹೊಟ್ಟೆ ಕ್ಯಾನ್ಸರ್‌ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡು ಬರುತ್ತದೆ. ಹೊಟ್ಟೆ ಕ್ಯಾನ್ಸರ್‌ನ 10 ರೋಗಿಗಳ ಪೈಕಿ 6 ಜನ 65 ವರ್ಷ ಮೇಲ್ಪಟ್ಟವರಾಗಿದ್ದಾರೆ. ಹೀಗಾಗಿ 45 ವರ್ಷ ಮೀರಿದ ಬಳಿಕ ಆಹಾರ ಸೇವನೆಯಲ್ಲಿ ಹಿಡಿತ ಸಾಧಿಸುವುದುಒಳ್ಳೆಯದು.

ಫೋರ್ಟಿಸ್‌ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿ ಡಾ. ನಿತಿ ರೈಜಾಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.