ಕೋವಿಡ್-19 ಎರಡನೆಯ ಅಲೆಯು ಜನರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ವರ್ಕ್ ಫ್ರಂ ಹೋಮ್ ಟ್ರೆಂಡ್ ಮುಂದುವರಿಯುತ್ತಲೇ ಇದೆ. ಈ ಒಂದು ಟ್ರೆಂಡ್‌ನಿಂದ ಪ್ರಾರಂಭವಾಗುತ್ತಿದೆ ‘ಕ್ವಾರಂಟೈನ್
ಮೆದುಳು’ ಎಂಬ ಮಾನಸಿಕ ತುಮುಲ.
ದೀರ್ಘ ಕಾಲ ಮನೆಯಲ್ಲೇ ಉಳಿಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಂದ ದೂರ ಉಳಿಯುವುದು , ಒಂಟಿತನ ಇಂತಹ ಒಂದು ಮಾನಸಿಕ ಸ್ಥಿತಿಗೆ ತರಬಹುದಾಗಿದೆ. ಇದನ್ನು ಬ್ರೈನ್ ಲಾಕ್ ಡೌನ್ ಮೋಡ್ ಎನ್ನಬಹುದಾಗಿದೆ. ನಾಲ್ಕು ಗೋಡೆಗಳ ಮಧ್ಯದ ಮಾನಸಿಕ ತುಮುಲವನ್ನು ಕ್ವಾರಂಟೈನ್ ಬ್ರೈನ್ ಎನ್ನಬಹುದಾಗಿದೆ. ಇಂತಹ ಮನಃಸ್ಥಿತಿ ಇರುವ ವ್ಯಕ್ತಿಗಳಲ್ಲಿ ಮೆದುಳು ತಾತ್ಕಾಲಿಕ ಸೂಚನೆಗಳನ್ನು ಕೊಡುವುದನ್ನು ನಿಲ್ಲಿಸಬಹುದಾಗಿದೆ. ಮನಸ್ಸಿಗೆ ಆಹ್ಲಾದ ನೀಡುತ್ತಿದ್ದ ವೀಕೆಂಡ್ ಕೂಡ ಆಹ್ಲಾದ ನೀಡದಂತಹ ಪರಿಸ್ಥಿತಿಯನ್ನು ತಲುಪುತ್ತದೆ. ಸಾಮಾಜಿಕ ಸಂಬಂಧಗಳಿಂದ ಕಡಿತಗೊಳ್ಳುವುದರಿಂದ, ಸಾಮಾಜಿಕ ಪ್ರತ್ಯೇಕತೆಯಿಂದ, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಲ್ಲದ್ದಾಗಿದೆ. ಈ ಒಂದು ಸಂದರ್ಭವು ವ್ಯಕ್ತಿಯ ಬೌದ್ಧಿಕ ಹಾಗೂ ಭಾವನಾತ್ಮಕ ಚಿಂತನೆಗಳ ಮೇಲೆ ನಕಾರಾತ್ಮಕವಾದ ಪ್ರಭಾವ ಬೀರಬಲ್ಲದ್ದಾಗಿದೆ.
ಇದು ಮಾನಸಿಕ ಆರೋಗ್ಯವಲ್ಲದೆ, ದೈಹಿಕವಾಗಿ ಅಧಿಕ ತೂಕ, ಪಚನ ಕ್ರಿಯೆಯಲ್ಲಿ ಏರುಪೇರು ಮುಂತಾದ ದೈಹಿಕ ಸಮಸ್ಯೆಯನ್ನು ಉಲ್ಭಣಿಸಬಹುದಾಗಿದೆ. ದೀರ್ಘಕಾಲ ಪ್ರತ್ಯೇಕತೆಯಿಂದ ಸೋಮಾರಿತನ, ನಿದ್ರಾಹೀನತೆ, ಖಿನ್ನತೆಯಂತಹ ಸಹ ಎದುರಿಸಬೇಕಾಬಹುದಾಗಿದೆ.
ಇದರಿಂದ ಹೊರಬರಲು ಮಾಡಬಹುದಾದ್ದೇನು ?
● ಮೆದುಳನ್ನು ಹುರುಪು ಹಾಗೂ ಚುರುಕುಗೊಳಿಸಲು ದಿನವೂ ಸ್ಥಿರವಾದ ಪ್ರಯತ್ನ ಅವಶ್ಯಕ.
● ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಆನ್ ಲೈನ್ ಮೂಲಕವೇ ಸಂವಹನ ಮಾಡಬಹುದಾಗಿದೆ.
● ಮಾನಸಿಕ ಹಾಗೂ ದೈಹಿಕ ಸ್ವಸ್ಥತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ.
● ತನ್ನದೇ ಆದ ಸ್ವಲ್ಪ ಸಮಯವನ್ನು ದಿನದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಅದನ್ನು ‘ಮೈ ಟೈಮ್’
ಎನ್ನಬಹುದು.
● ಮಾನಸಿಕ ಸಾವಧಾನವನ್ನು ಕಾಪಾಡಿಕೊಳ್ಳುವುದು ಅವಶ್ಯಕ.
● ಸ್ವಯಂ ಆರೈಕೆಯ ಅವಶ್ಯಕತೆಯನ್ನು ಅರಿಯುವುದು.
● ದೈನಂದಿನ ಚಟುವಟಿಕೆಗೆ ಮರಳಲು ಪ್ರಯತ್ನಿಸಬೇಕು.
● ದೈನಂದಿನ ಜೀವನವನ್ನು ಆಶಾದಾಯಕವಾಗಿ, ಚೈತನ್ಯದೊಂದಿಗೆ ಕಳೆಯಲು ಪ್ರಯತ್ನಿಸಬೇಕು.
● ಸಮತೋಲನ ಆಹಾರ , ದೈಹಿಕ ಚಟುವಟಿಕೆಗಳು, ಉಸಿರಾಟದ ವ್ಯಾಯಾಮಗಳು ದೈಹಿಕ ಹಾಗೂ
ಮಾನಸಿಕ ಆರೋಗ್ಯಕ್ಕೆ ಪೂರಕ.
-ಡಾ. ಸ್ಮಿತಾ ಜೆ ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.