ADVERTISEMENT

GAPPY teeth| ಟ್ರೆಂಡ್ ಆಗುತ್ತಿದೆ ‘ಗ್ಯಾಪ್ ಟೀತ್‌’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 12:31 IST
Last Updated 19 ಏಪ್ರಿಲ್ 2022, 12:31 IST
   

ನಗು ಆತ್ಮವಿಶ್ವಾಸದ ಸಂಕೇತ. ಸುಂದರವಾದ ನಗುವಿಗೆ ಬೇಕು ಸುಂದರವಾದ ದಂತ ಪಂಕ್ತಿಗಳು. ಹಿಂದೆಲ್ಲ, ಸುಂದರವಾದ ದಂತ ಪಂಕ್ತಿಗಳೆಂದರೆ ಬೆಳ್ಳಗಿನ, ಉತ್ತಮವಾಗಿ ಜೋಡಣೆಯಾದ ಹಲ್ಲುಗಳೆಂಬ ಭಾವನೆಯನ್ನು ಇತ್ತು. ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಾಡೆಲ್‌ಗಳು , ಸೆಲೆಬ್ರೆಟಿಗಳು “ಗ್ಯಾಪ್ ಟೂತ್ ಟ್ರೆಂಡ್ ಗೆ” ಮಾರು ಹೋಗಿದ್ದಾರೆ.

ಮೇಲ್ದವಡೆಯ ಮುಂಬದಿಯ ಹಲ್ಲುಗಳ ನಡುವೆ ಇರುವ ಕಿಂಡಿಗಳು ಅಥವಾ ‘ಗ್ಯಾಪ್’ ಈಗಿನ ಟ್ರೆಂಡ್‌. ಹೀಗಾಗಿ ‘ಗ್ಯಾಪ್ ಟೂತ್’ ಜನಪ್ರಿಯವಾಗಿದೆ. ಇದು ಸ್ವಾಭಾವಿಕ ಸೌಂದರ್ಯದ ಸಂಕೇತ ಎಂದು ನಂಬಲಾಗಿದೆ. ಈ ಕಿಂಡಿಗಳನ್ನು ದಂತ ಚಿಕಿತ್ಸೆಗಳಿಂದ ಮುಚ್ಚುವುದರಿಂದ “ಫೇಕ್ ಟೀತ್” ಪ್ರದರ್ಶನವಾಗುತ್ತದೆಎಂಬುದು ಪ್ಯಾಷನ್ ಟ್ರೆಂಡ್ ಇರುವವರ ಅಭಿಪ್ರಾಯ.

ಇಪ್ಪತ್ತರ ಹರಯದ ಹದಿಹರಿಯದವರು ’ಗ್ಯಾಪ್ ಟೀತ್’ ಟ್ರೆಂಡ್‌ಗೆ ಮಾರುಹೋದರೆ, ನಲವತ್ತರ ಮೇಲ್ಪಟ್ಟು ಜನರು ಹಲ್ಲಿನ ಕಿಂಡಿಗಳನ್ನು ಮುಚ್ಚುವುದರಲ್ಲಿ ಉತ್ಸುಕರಾಗಿದ್ದಾರೆ ಎಂಬುದು ಪ್ಯಾಷನ್ ತಜ್ಞರ ಅಭಿಮತ.

ADVERTISEMENT

ಸ್ವಾಭಾವಿಕ ಮುಂದಿನ ಮೇಲ್ದವಡೆಯ ಬಾಚಿ ಹಲ್ಲುಗಳ ನಡುವಿನ ಗ್ಯಾಪ್ /ಕಿಂಡಿಯನ್ನು ‘ಮಿಡ್ ಲೈನ್ ಡೈಯಾಸ್ಟೀಮ’ ಎಂದು ಕರೆಯುತ್ತಾರೆ.

ಈ ಕಿಂಡಿಯು ಸ್ವಾಭಾವಿಕವಾಗಿದ್ದು, ಸಮನಾಗಿದ್ದರೆ ಯಾವುದೆ ಚಿಕಿತ್ಸೆಯ ಅವಶ್ಯಕತೆಯಿರುವುದಿಲ್ಲ.

ಕಿಂಡಿಯು ಕಡಿಮೆಯಿದ್ದು ಅದರ ಅಂತರವನ್ನು ಹೆಚ್ಚು ಮಾಡಬೇಕಾದ್ದಲ್ಲಿ ಬ್ರೇಸರ್‌ಗಳ ಉಪಯೋಗ ಮಾಡಿ ಹಲ್ಲಿನ ನಡುವಿನ ಅಂತರವನ್ನು ಹೆಚ್ಚುಮಾಡಬಹುದಾಗಿದೆ.

‘ಇನ್ವಿಸಲೈನ್’ ಎಂಬ ಡಿಜಿಟಲ್ ಪ್ಲಾನಿಂಗ್ ನೊಂದಿಗೆ ರಿಮೂವಬಲ್ ‘ರೀಟೈನರ್‌’ಗಳು ಲಭ್ಯವಿದ್ದು ಅದು ಹಲ್ಲುಗಳನ್ನು ನೇರವಾಗಿಸಿ ಸರಿಯಾದ ಪ್ರಮಾಣದ ಕಿಂಡಿಗಳನ್ನು ಡಿಜಿಟಲ್ ಪ್ಲಾನಿಂಗ್ ನೊಂದಿಗೆ ಸೃಷ್ಟಿ ಮಾಡಬಹುದಾಗಿದೆ.

ಸಾಂಪ್ರದಾಯಿಕವಾಗಿ ಹಲ್ಲುಗಳ ನಡುವಿನ ಕಿಂಡಿಗಳನ್ನು ಮುಚ್ಚಲು ಕಾಂಪೋಸಿಟ್ ದಂತ ಪುನಃಶ್ಚೇತನ ವಸ್ತು ವಿನೀರ್ ಗಳನ್ನು ಬಳಸಲಾಗುತ್ತಿತ್ತು. ಇದರಿಂದ ಮುಂದಿನ ಹಲ್ಲುಗಳು ಅತಿ ಅಗಲವಾಗಿ ಕಂಡು ನೊಡುಗರಿಗೆ ಅಹಿತಕರವಾಗಿ ಕಾಣಿಸುತ್ತಿತ್ತು.ಆದುದರಿಂದ ಕಿಂಡಿಗಳನ್ನು ಸ್ವಾಭಾವಿಕವಾಗಿ ಬಿಡುವುದು ಹೆಚ್ಚು ಸೂಕ್ತ ಎಂಬುದು ಹಲವರ ಅಭಿಮತ.

ಸ್ವಾಭಾವಿಕವಾಗಿ ಕಿಂಡಿಯಿಲ್ಲದಿದ್ದಲ್ಲಿ ಕಿಂಡಿಗಳನ್ನು ಸೃಷ್ಠಿ ಮಾಡಲು ಕೆಲವೊಮ್ಮೆ ಹಲ್ಲಿನ ಮೇಲ್ಪದರವಾದ ಇನಾಮೆಲ್ ಅನ್ನು ಕೊರೆದು ತೆಗೆದು ಕಿಂಡಿಗಳನ್ನು ಸೃಷ್ಟಿ ಮಾಡಬಹುದಾಗಿದೆ. ಆದರೆ ಇವೆಲ್ಲ ಚಿಕಿತ್ಸೆಗಳನ್ನು ಸೂಕ್ತ ಕಾಸ್ಮೆಟಿಕ್ ದಂತ ತಜ್ಞರ ಸಮಾಲೋಚನೆಯೊಂದಿಗೆ ಮಾಡಿಸಿಕೊಳ್ಳುವುದು ಸೂಕ್ತ.

ಗ್ಯಾಪ್ ಟೂತ್ ಟ್ರೆಂಡ್ ಸ್ತ್ರೀಯರಲ್ಲಿ ಹೆಚ್ಚು ಪ್ರಚಲಿತವಾಗಿದ್ದು ಪಾಶ್ಚಾತ್ಯ ದೇಶಗಳಲ್ಲಿ ಬಹು ಬೇಡಿಕೆಯಲ್ಲಿದೆ. ಆದುದರಿಂದ ಸ್ವಾಭಾವಿಕವಾಗಿ ಹಲ್ಲುಗಳ ನಡುವೆ ಕಿಂಡಿ ಇದ್ದವರು ಆತ್ಮವಿಶ್ವಾಸದ ನಗುವನ್ನು ಬೀರುವುದು ಒಳಿತು.

ಲೇಖಕರು:ಡಾ. ಸ್ಮಿತಾ ಜೆ ಡಿ, ಓರಲ್ ಮೆಡಿಸನ್ ಹಾಗೂ ರೆಡಿಯಾಲಜಿ ತಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.