ಕೋವಿಡ್-19 ಮಹಾಮಾರಿಯು ಸಾಮಾನ್ಯವಾಗಿ ಒಂದು ವೈರಾಣು ಸೋಂಕಾಗಿದ್ದು, ಅನೇಕ ಜನರಲ್ಲಿ ಕೇವಲ ಫ್ಲೂನಂತಹ ರೋಗ ಲಕ್ಷಣಗಳನ್ನು ಪ್ರದರ್ಶಿಸಿದರೂ ಸಹ 5%ರಷ್ಟು ಜನರಲ್ಲಿ ತೀವ್ರತರವಾದ ಉಸಿರಾಟದ ತೊಂದರೆಯನ್ನು ಪ್ರದರ್ಶಿಸುತ್ತದೆ. ಇದಕ್ಕೆ ಮುಖ್ಯ ಕಾರಣ ವ್ಯಕ್ತಿಯು ಆಂತರಿಕ ರೋಗ ನಿರೋಧಕ ಶಕ್ತಿ ಆದ್ದರಿಂದ ವ್ಯಕ್ತಿಯ ಆಂತರಿಕ ಶಕ್ತಿಯು ಪ್ರಮುಖ ಪಾತ್ರವಹಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ವಿಟಮಿನ್ ‘ಸಿ’ನ ಪಾತ್ರ ಪ್ರಮುಖವಾದದ್ದು.
ಕೋವಿಡ್-19 ಸೋಂಕಿನಲ್ಲಿ ವಿಟಮಿನ್ ‘ಸಿ’ಯ ಪಾತ್ರ:
ವಿಟಮಿನ್ ‘ಸಿ’ಯ ಒಂದು ಪ್ರಮುಖ ಉತ್ಕರ್ಷಣ ನಿರೋಧಕ ( Antioxident ) ಇದನ್ನು ದೇಹವು ಶೇಖರಿಸಿಡಲು ಸಾಧ್ಯವಿಲ್ಲ. ದೈನಂದಿನ ಆಹಾರದಲ್ಲಿ ಸೇವನೆಯಾಗಬೇಕಿದೆ. ಧೂಮಪಾನ, ಕಳಪೆ ಜೀವನಶೈಲಿ, ಪೌಷ್ಠಿಕ ಆಹಾರದ ಕೊರತೆಯಿಂದ ಅನೇಕರಿಗೆ ಸರಿಯಾದ ಪ್ರಮಾಣದ ವಿಟಮಿನ್ ‘ಸಿ’ ಲಭ್ಯವಾಗುವುದಿಲ್ಲ. ಕೋವಿಡ್-19 ಸೋಂಕಿಗೆ ಒಳಗಾದ ವ್ಯಕ್ತಿಯು ಶ್ವಾಸಕೋಶದ ಹಾನಿಗೆ ಒಳಗಾಗುವುದಕ್ಕೆ ಮುಖ್ಯ ಕಾರಣ ಆಕ್ಸಿಡೇಟಿವ್ ಹಾನಿ ಅಂದರೆ ಉತ್ಕರ್ಷಣ ನಿರೋಧಕ ಶಕ್ತಿಯು ಕುಂದಿದಾಗ ಶ್ವಾಸಕೋಶವು ಹಾನಿಗೆ ಒಳಗಾಗುತ್ತದೆ. ಉತ್ಕರ್ಷಣ ನಿರೋಧಕ ಅಂಶವು ಹೆಚ್ಚಲು ಹಾಗೂ ಹಾನಿಯನ್ನು ತಡೆಯಲು ವಿಟಮಿನ್ ‘ಸಿ’ಯ ಪಾತ್ರ ಪ್ರಮುಖವಾದುದು. ವಿಟಮಿನ್ ‘ಸಿ’ಯು ಪ್ರತಿ ಲಕ್ಷಣ ಕೋಶಗಳನ್ನು ಸಂರಕ್ಷಿಸಲು, ಬ್ಯಾಕ್ಟೀರಿಯಾ ಹಾಗೂ ವೈರಾಣುಗಳನ್ನು ದೇಹದಿಂದ ಹೊರಹಾಕಲು ಪ್ರಮುಖ ಪಾತ್ರವಹಿಸುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾಡಬಹುದಾದ್ದೇನು ?
* ನೈಸರ್ಗಿಕವಾಗಿ ಸಿಗುವಂತಹ ಹಣ್ಣುತರಕಾರಿಗಳಾದ ನೆಲ್ಲಿಕಾಯಿ, ಪಪ್ಪಾಯ, ಕ್ಯಾಪ್ಸಿಕಂ, ಸೀಬೆ ಹಾಗೂ ನಿಂಬೆಹಣ್ಣುಗಳನ್ನು ಆಹಾರದಲ್ಲಿ ಯಥೇಚ್ಛವಾಗಿ ಬಳಸುವುದು.
* ತೈಮ್, ಪಾಸ್ಲಿ, ಪಾಲಕ್, ಬ್ರಾಕಲಿ ಮುಂತಾದ ತರಕಾರಿಗಳಲ್ಲು ಸಹ ವೈಟಮಿನ್ ‘ಸಿ’ ಯನ್ನು ಕಾಣಬಹುದು.
* ಇವುಗಳಲ್ಲದೆ ವಿಟಮಿನ್ ‘ಸಿ’ಯುಕ್ತ ಚೀಪುವ ಮಾತ್ರಗಳು, ಗಮ್‌ಗಳು, ಲಿಕ್ವಿಡ್‌ಗಳು ಮಾರ್ಕೆಟ್‌ನಲ್ಲಿ ಲಭ್ಯ. ಅವುಗಳನ್ನು ಸೇವಿಸಬಹುದಾಗಿದೆ.
ವೈಟಮಿನ್ ‘ಸಿ’ ಅತಿಯಾದ ಸೇವನೆಯಿಂದಾಗುವ ಅಡ್ಡ ಪರಿಣಾಮಗಳು:
* ಅತಿಯಾದ ಸೇವನೆಯಿಂದ ಎದೆಯುರಿ, ತಲೆನೋವು, ಹೊಟ್ಟೆನೋವು ಹಾಗೂ ಬೇಧಿಯಾಗಬಹುದು.
* ವಿಟಮಿನ್ ‘ಸಿ’ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸಬಹುದಾಗಿದ್ದು ವೈದ್ಯರ ಸಲಹೆಯ ಮೇರೆಗೆ ಮಧುಮೇಹಿಗಳು ವೈಟಮಿನ್ ‘ಸಿ’ ಮಾತ್ರಗಳನ್ನು ಸ್ಏವಿಸುವುದು ಉತ್ತಮ.
* ಗರ್ಭಿಣಿ ಸ್ತ್ರೀಯರು ಹಾಗೂ ಹಾಲುಣಿಸುವ ತಾಯಂದಿರು ವೈದ್ಯರೊಂದಿಗೆ ಸಮಾಲೋಚಿಸಿ ಸೇವಿಸುವುದು ಉತ್ತಮ.
ಕೋವಿಡ್ ಮಹಾಮಾರಿ ದೂರ ಉಳಿಯಲು ಹಾಗೂ ಅದರಿಂದಾಗುವ ಹಾನಿಯ ತೀವ್ರತೆಯನ್ನು ಕಡಿಮೆ ಮಾಡಲು ವಿಟಮಿನ್ ‘ಸಿ’ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ ಮುಖಗವಸು, ಕೈಗಳ ಸ್ವಚ್ಛತೆ, ಪೌಷ್ಠಿಕ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.