ಬೋಸ್ಟನ್: ಅಧಿಕ ಪ್ರಮಾಣದಲ್ಲಿ ವಿಟಮಿನ್ ಡಿ ದೇಹಕ್ಕೆ ಸೇರುವುದರಿಂದ ಪ್ರೀಡಯಾಬಿಟಿಕ್ ರೋಗಿಗಳು ಟೈಪ್2 ಡಯಾಬಿಟಿಸ್‌ಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಕ್ಲಿನಿಕಲ್ ಟ್ರಯಲ್‌ನ ಅಧ್ಯಯನ ವರದಿಯೊಂದು ಹೇಳಿದೆ.
ವಿಟಮಿನ್ ಡಿ ಕೊಬ್ಬು ಕರಗಿಸುವ ವಿಟಮಿನ್ ಆಗಿದ್ದು, ಕೆಲವು ಆಹಾರ ಪದಾರ್ಥಗಳು, ಔಷಧಿ ಮೂಲಕವೂ ಪಡೆದುಕೊಳ್ಳಬಹುದಾಗಿದೆ. ಸೂರ್ಯನ ಕಿರಣಗಳು ಮನುಷ್ಯನ ಚರ್ಮಕ್ಕೆ ತಾಕಿದಾಗ ದೇಹದಲ್ಲಿ ವಿಟಮಿನ್ ಡಿ ಸ್ವಾಭಾವಿಕವಾಗಿ ಉತ್ಪಾದನೆ ಆಗುತ್ತದೆ.
ವಿಟಮಿನ್ ಡಿ ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆ ಮತ್ತು ಗ್ಲೂಕೋಸ್ ಚಯಾಪಚಯ ಕ್ರಿಯೆ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುತ್ತದೆ.
ರಕ್ತದಲ್ಲಿ ಕಡಿಮೆ ಮಟ್ಟದ ವಿಟಮಿನ್ ಡಿ ಹೊಂದಿರುವವರಲ್ಲಿ ಮಧುಮೇಹದ ಅಪಾಯ ಹೆಚ್ಚು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಅಮೆರಿಕದ ಟಫ್ಟ್ಸ್ ವೈದ್ಯಕೀಯ ಕೇಂದ್ರದ ತಂಡವು ಮಧುಮೇಹದ ಅಪಾಯದ ಮೇಲೆ ವಿಟಮಿನ್ ಡಿ ಪೂರಕ ಪರಿಣಾಮಗಳನ್ನು ಪರೀಕ್ಷಿಸುವ ಮೂರು ಕ್ಲಿನಿಕಲ್ ಪ್ರಯೋಗಗಳ ವ್ಯವಸ್ಥಿತ ವಿಮರ್ಶೆ ಮತ್ತು ಮೆಟಾ ವಿಶ್ಲೇಷಣೆಯನ್ನು ನಡೆಸಿದೆ.
ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ಅಧ್ಯಯನದ ವರದಿ ಪ್ರಕಟವಾಗಿದೆ. ವಿಶ್ವದಾದ್ಯಂತ 374 ಮಿಲಿಯನ್‌ಗಿಂತಲೂ ಹೆಚ್ಚು ವಯಸ್ಕರು ಪ್ರಿಡಯಾಬಿಟಿಕ್ ಆಗಿದ್ದಾರೆ ಎಂದೂ ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.