ಡಾರ್ಕ್ ಚಾಕೊಲೇಟ್ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ಈಗಾಗಲೇ ನಮಗೆಲ್ಲರಿಗೂ ತಿಳಿದಿರುವ ವಿಚಾರ. ಡಾರ್ಕ್ ಚಾಕೊಲೇಟನ್ನು ಸ್ವಲ್ಪ ತಿಂದರೆ ಸಾಕು ತಿನ್ನಬೇಕೆನ್ನುವ ಅತಿಯಾದ ಬಯಕೆಯನ್ನು ಕಡಿಮೆ ಮಾಡುವ ಮತ್ತು ಹಸಿವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಪ್ರಪಂಚದಾದ್ಯಂತ ನಡೆದ ವಿವಿಧ ಅಧ್ಯಯನಗಳಲ್ಲಿ ಸಾಬೀತಾಗಿದೆ. ಆದರೆ ವೈಟ್ ಚಾಕೊಲೇಟ್ ಕೂಡ ತೂಕ ಇಳಿಸಲು ಸಹಕಾರಿ ಎಂಬುದು ನಿಮಗೆ ಗೊತ್ತಾ?
ಹೌದು, ಮುಂಜಾನೆ ವೇಳೆ ಹಾಲಿನ ಚಾಕೊಲೇಟ್ ತಿನ್ನುವುದರಿಂದಾಗಿ ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ. ಇದಲ್ಲದೆ, ಮಾಸಿಕ ಋತುಚಕ್ರ ನಿಂತ ಮಹಿಳೆಯರ ಗುಂಪಿನ ಮೇಲೆ ನಡೆಸಿದ ಅಧ್ಯಯನದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿರ್ವಹಿಸಲು ಸಹ ಸಹಾಯ ಮಾಡುತ್ತದೆ ಎಂಬುದು ತಿಳಿದುಬಂದಿದೆ. ಈ ಸಂಶೋಧನೆಗಳನ್ನು ದಿ ಎಫ್‌ಎಎಸ್‌ಇಬಿ (FASEB) ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಈ ಅಧ್ಯಯನವನ್ನು ಬ್ರಿಗ್‌ಹ್ಯಾಮ್‌ನ ಸಂಶೋಧಕರು ಮತ್ತು ಸ್ಪೇನ್‌ನ ಮರ್ಸಿಯಾ ವಿಶ್ವವಿದ್ಯಾಲಯದ ತಜ್ಞರು ಜಂಟಿಯಾಗಿ ನಡೆಸಿದ್ದಾರೆ. ಮುಟ್ಟು ನಿಂತ 19 ಜನ ಮಹಿಳೆಯರು ಬೆಳಗ್ಗೆ (ಮುಂಜಾನೆ ನಿದ್ದೆಯಿಂದ ಎದ್ದ ಒಂದು ಗಂಟೆಯೊಳಗೆ) ಅಥವಾ ರಾತ್ರಿಯಲ್ಲಿ (ಮಲಗುವ ಮುನ್ನ ಒಂದು ಗಂಟೆಯೊಳಗೆ) 100 ಗ್ರಾಂ ಚಾಕೊಲೇಟ್ ತಿನ್ನುತ್ತಿದ್ದರು. ಸಂಶೋಧನೆಯ ನಂತರ, ತಜ್ಞರು ನಾಲ್ಕು ಆಸಕ್ತಿದಾಯಕ ವಿಚಾರಗಳನ್ನು ಕಂಡುಕೊಂಡಿದ್ದಾರೆ.
ತೂಕ ಇಳಿಕೆಗೆ ಚಾಕೊಲೇಟ್ ಹೇಗೆ ಸಹಕಾರಿ
1. ಬೆಳಿಗ್ಗೆ ಅಥವಾ ರಾತ್ರಿ ಬಿಳಿ ಚಾಕೊಲೇಟ್ ತಿನ್ನುವುದರಿಂದಾಗಿ ತೂಕ ಹೆಚ್ಚಳವಾಗುವುದಿಲ್ಲ.
2. ಬೆಳಿಗ್ಗೆ ಅಥವಾ ಸಂಜೆ ಚಾಕೊಲೇಟ್ ತಿನ್ನುವುದು ಹಸಿವು, ನಿದ್ರೆ, ಮೈಕ್ರೋಬಯೋಟಾ ಸಂಯೋಜನೆ (ಕರುಳು-ಆರೋಗ್ಯ) ಮತ್ತು ಹೆಚ್ಚಿನದನ್ನು ಪ್ರಭಾವಿಸುತ್ತದೆ.
3. ಬೆಳಿಗ್ಗೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾಕೊಲೇಟ್ ಸೇವಿಸುವುದರಿಂದ ಕೊಬ್ಬನ್ನು ಕರಗಿಸಲು ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4. ಸಂಜೆ ಅಥವಾ ರಾತ್ರಿ ಚಾಕೊಲೇಟ್ ತಿನ್ನುವುದರಿಂದ ಮರುದಿನ ಬೆಳಗಿನ ವಿಶ್ರಾಂತಿ ಮತ್ತು ವ್ಯಾಯಾಮದ ಚಯಪಚಯವನ್ನು ಬದಲಾಯಿಸುತ್ತದೆ.
ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ, ತೂಕ ಇಳಿಸುವ ಡೆಯೆಟ್‌ನಲ್ಲಿ ಸ್ವಲ್ಪ ಬಿಳಿ ಚಾಕೊಲೇಟ್ ಅನ್ನು ಸೇರಿಸಿ ಎಂದು ನಾವು ಹೇಳುತ್ತೇವೆ. ಆದರೆ ಯಾವಾಗಲೂ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಮಿತವಾಗಿರುವುದು ಅಷ್ಟೇ ಮುಖ್ಯ! ಅಲ್ಲದೆ, ನಿಮ್ಮ ಡಯಟ್‌ನಲ್ಲಿ ಹೊಸದನ್ನು ಸೇರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.