ADVERTISEMENT

ಅಪ್ಪ ಆಗೋ ಆಸೆ ಇದ್ರೆ ಒಳ ಉಡುಪು ಸಡಿಲವಾಗಿರಲಿ

ಏಜೆನ್ಸೀಸ್
Published 11 ಆಗಸ್ಟ್ 2018, 6:49 IST
Last Updated 11 ಆಗಸ್ಟ್ 2018, 6:49 IST
   

ಪ್ಯಾರಿಸ್‌:ಸಾಂಪ್ರದಾಯಿಕ ಶೈಲಿಯಲ್ಲಿ ತಂದೆಯಾಗಲು ಪ್ರಯತ್ನಿಸುತ್ತಿರುವ ಪುರುಷರು ಸಡಿಲವಾದ ಒಳ ಉಡುಪು ಧರಿಸುತ್ತಾರೆ ಎಂದು ಗುರುವಾರ ಪ್ರಕಟವಾದ ಅಧ್ಯಯನ ವರದಿಯೊಂದುಹೇಳಿದೆ.

ಬಿಗಿಯಾದ ಒಳ ಉಡುಪು ಧರಿಸುವ ವ್ಯಕ್ತಿಗಳಿಗೆ ಹೋಲಿಸಿದರೆ ಸಡಿಲವಾದ ಒಳ ಉಡುಪು (ಚಡ್ಡಿ, ಅರ್ಧ ಚಣ್ಣ) ಧರಿಸುವ ವ್ಯಕ್ತಿಗಳಲ್ಲಿ ವೀರ್ಯಾಣು ಗಣನೀಯವಾಗಿ ಅಧಿಕ ಸಂಖ್ಯೆಯಲ್ಲಿದ್ದು, ಹೆಚ್ಚಿನ ಸಾಂದ್ರತೆ ಇರುತ್ತದೆ ಎಂದು ಸಂಶೋಧಕರು ‘ಹ್ಯೂಮನ್‌ ರಿಪ್ರೊಡಕ್ಷನ್‌’ ನಿಯತಕಾಲಿಕದಲ್ಲಿ ಪ್ರಕಟಿಸಿರುವ ಲೇಖನದಲ್ಲಿ ತಿಳಿಸಿದ್ದಾರೆ.

ವೀರ್ಯವು ಹೆಚ್ಚು ಚುರುಕಾಗಿಯೂ ಮತ್ತು ಸಂತಾನೋತ್ಪತ್ತಿ ಹಾರ್ಮೋನುಗಳ ಗುಣಮಟ್ಟವು ಸಂತಾನ ಉತ್ಪತ್ತಿಗೆ ಹೆಚ್ಚು ಅನುಕೂಲಕರವಾಗಿರುವುದು ಕಂಡುಬಂದಿದೆ.

ADVERTISEMENT

‘ಹಾರ್ವರ್ಡ್‌ಟಿ.ಎಚ್‌. ಚಾನ್‌ ಸ್ಕೂಲ್‌ ಆಫ್‌ ಬೋಸ್ಟನ್‌ ಪಬ್ಲಿಕ್‌ ಹೆಲ್ತ್’ ಸಂಸ್ಥೆಯಲಿಡಿಯಾ ಮಿಂಗ್ಯುಜ್‌–ಅಲಾರ್ಕನ್‌ ಅವರ ನೇತೃತ್ವದ ಸಂಶೋಧಕರ ತಂಡ 18ರಿಂದ 56 ವರ್ಷಯ ವಯೋಮಾನದ, ಸಾಮಾನ್ಯ ತೂಕದ 656 ಪುರುಷರನ್ನು ಪರೀಕ್ಷೆಗೊಳಪಡಿಸಿದೆ. ಅವರುಗಳ ಸಂಗಾತಿಗಳು ಆಸ್ಪತ್ರೆಯಲ್ಲಿ ಬಂಜೆತನ ಸಂಬಂಧ ಚಿಕಿತ್ಸೆ ಪಡೆಯಬಯಸಿದ್ದರು.

ಈ ಮೊದಲು ನಡೆದ ಸಣ್ಣ ಪ್ರಮಾಣದ ಮಾದರಿ ಪರೀಕ್ಷೆಗಳು ಇದೇ ನಿರ್ಧಾರಕ್ಕೆ ಬಂದಿದ್ದವು. ಆದರೆ, ಎಫ್‌ಎಸ್‌ಎಚ್‌ ಎಂದು ಕರೆಯಲ್ಪಡುವ ಹಾರ್ಮೋನುಗಳ ಮೇಲಿನ ಮಾಹಿತಿಯ ದೃಢೀಕರಣವು ಹೊಸದಾಗಿತ್ತು.

ಉತ್ತಮ, ಯಶಸ್ವಿ ವೀರ್ಯದ ಉತ್ಪಾದನೆಗೆ ದೇಹದ ಉಷ್ಣಾಂಶಕ್ಕಿಂತ ಕಡಿಮೆ ಅಂದರೆ 3ರಿಂದ 4 ಡಿಗ್ರಿ ಸೆಲ್ಸಿಯಸ್‌ (5.6ರಿಂದ 7.2 ಪ್ಯಾರನ್‌ ಹೀಟ್‌) ಉಷ್ಣಾಂಶದ ವಾತಾವರಣ ಅವಶ್ಯಕ. ಇದು ಮುಕ್ತವಾಗಿ ನೇತಾಡುವ ಪುರುಷರಲ್ಲಿನ ಪುಂಬೀಜ ಉತ್ಪಾದನಾ ಸ್ಥಾನದ (ಸ್ಕ್ರೋಟಮ್‌’ scrotum) ವಿನ್ಯಾಸವನ್ನು ವಿವರಿಸುತ್ತದೆ. ದೇಹದಿಂದ ಹೊರಗಿರುವ ಭಾಗ ಇದಾಗಿದ್ದು, ವೀರ್ಯಗಳ ಉತ್ಪಾದನೆಗೆ ತಂಪು ಒದಗಿಸುವ ವ್ಯವಸ್ಥೆಯಾಗಿದೆ. ತಂಪು ವ್ಯವಸ್ಥೆಗೆ ವಿರುದ್ಧವಾದ ಯಾವುದೇ ಪ್ರಕ್ರಿಯೆಯು ವೀರ್ಯಾಣು ಉತ್ಪಾದನೆ ಮತ್ತು ಗುಣಮಟ್ಟವನ್ನು ದುರ್ಬಲಗೊಳಿಸುತ್ತದೆ.

ಪುರುಷರು ಧರಿಸುವ ಸಡಿಲ ಮತ್ತು ಬಿಗಿಯಾದ ಒಳ ಉಡುಪುಗಳ ಕುರಿತಾದ ವಿಷಯವು ವೈದ್ಯಕೀಯಕ್ಕಿಂತ ಸೌಂದರ್ಯಕ್ಕೆ ಹೆಚ್ಚು ಹೊತ್ತುಕೊಡುತ್ತಾ ಬಹಳಕಾಲದಿಂದ ಬೆಳೆದುಬಂದಿದೆ. ದೇಹದ ಆ ಭಾಗಕ್ಕೆ ಅತಿಯಾಗಿ ಬಿಸಿಯನ್ನುಂಟು ಮಾಡುವ ಬಿಗಿ ಉಡುಪುಗಳನ್ನು ಧರಿಸುವುದು ‘ಅಮೂಲ್ಯ’ವಾದ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ.

‘ಅತಿಯಾದ ಬಿಗಿ ಉಡುಪು ಧರಿಸುವ ಪುರುಷರಲ್ಲಿ ತೀಕ್ಷಣವಲ್ಲದ, ದುರ್ಬಲವಾದ ವೀರ್ಯ ಉತ್ಪಾದನೆಗೆ ಕಾರಣವಾಗಬುದು ಎಂದು ಈ ಅಧ್ಯಯನವು ಸಮರ್ಥವಾಗಿ ದೃಢವಾದ ಸಾಕ್ಷ್ಯವನ್ನು ಒದಗಿಸುತ್ತದೆ’ ಎಂದು ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಗೌರವ ಪ್ರಧ್ಯಾಪಕ ರಿಚರ್ಡ್‌ ಸಾರ್ಪ್‌ ಹೇಳಿದ್ದಾರೆ.

ಈ ವಿಷಯವನ್ನು ಒ‍ಪ್ಪಿರುವ ‘ಆಕ್ಸ್‌ಫರ್ಡ್‌ ಸೆಂಟರ್‌ ಫಾರ್‌ ಡಯಾಬಿಟಿಸ್‌, ಎಂಡೋಕ್ರೈನಾಲಜಿ ಮತ್ತು ಮೆಟಾಬಾಲಿಸಂ’ನ ಪ್ರಾಧ್ಯಾಪಕ ಅಶೆಲಿ ಗ್ರಾಸ್ಮನ್‌, ‘ಫಲಿತಾಂಶಗಳು ಜೀವನಶೈಲಿಯ ಬದಲಾವಣೆ ಬಗೆಗಿನ ಅನುಮಾನಗಳು ಸಾಕಷ್ಟು ಸಮರ್ಥವಾಗಿವೆ’ ಎಂದಿದ್ದಾರೆ.

‘ಫಲವತ್ತತೆಯ ಬಗ್ಗೆ ಅನಿಶ್ಚಿತತೆಯಿದ್ದಾಗ ಸಡಿಲ ಒಳ ಉಡುಪುಗಳನ್ನು ಧರಿಸುವುದು ಅತ್ಯಂತ ಸರಳ ಮಾನದಂಡವಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಅತ್ಯಂತ ಬಿಗಿಯಾದ ಒಳ ಉಡುಪು ಧರಿಸುವ ಪುರುಷರಲ್ಲಿ ಸಾಮಾನ್ಯ ವ್ಯಕ್ತಿಗಿಂತ ಕಡಿಮೆ ವೀರ್ಯಾಣು ಉತ್ಪಾದನೆಯನ್ನು ಹೊಂದಿರುವುದು ಗೊತ್ತಾಗಿದೆ. ಹೊಸ ಅಧ್ಯಯನದಲ್ಲಿ ಹಲವು ಅನಿರ್ಧರಿತ ವಿಷಯಗಳು ಗಮನಕ್ಕೆ ಬಂದಿವೆ ಮತ್ತು ಸಂಶೋಧನೆಯ ಅಗತ್ಯತೆಯನ್ನು ಎತ್ತಿ ತೋರಿದೆ.

ಸಂಶೋಧನೆ ವೇಳೆ ಪ್ರತಿ ವ್ಯಕ್ತಿಯ ವೀರ್ಯ ಮತ್ತು ರಕ್ತ ಮಾದರಿಗಳ ಪರೀಕ್ಷೆ ಹಾಗೂ ಒಳ ಉಡುಪು ಧರಿಸುವ ಕ್ರಮದ ಕುರಿತು ವಿಶ್ಲೇಷಣೆ ಮಾಡಲಾಗಿದೆ.

ಈ ಅಧ್ಯಯನವು ವೈದ್ಯಕೀಯ ಪ್ರಯೋಗದಲ್ಲಿ ಮಾನಸಿಕ ಪರೀಕ್ಷೆಯಾಗಿರಲಿಲ್ಲ. ಆದರೆ, ಸಂಶ್ಯಾಶಾಸ್ತ್ರೀಯವಾಗಿ ಮಹತ್ವದ ಮತ್ತು ಪರಸ್ಪರ ಸಂಬಂಧಗಳನ್ನು ಅನ್ವೇಷಿಸುತ್ತದೆ, ಇದು ಸಾಧ್ಯವಿರುವ ಕಾರಣಗಳನ್ನು ಮಾತ್ರ ಸೂಚಿಸುತ್ತದೆ.

ಅಲ್ಲದೆ, ಈ ಸಂಶೋಧನೆಯಲ್ಲಿ ನಿಜವಾದ ಗರ್ಭಾವಸ್ಥೆಯ ಪರಿಣಾಮಗಳನ್ನು ಅಧ್ಯಯನ ಮಾಡಲಾಗಿಲ್ಲ. ಆದ್ದರಿಂದ, ವೀರ್ಯಾಣು ಮತ್ತು ಗುಣಮಟ್ಟದಲ್ಲಿನ ವ್ಯತ್ಯಾಸಗಳು, ಫಲಿತಾಂಶದಲ್ಲಿ ಮೂಲ ವ್ಯತ್ಯಾಸಗಳಾಗುವ ಬಗ್ಗೆ ಅಸ್ಪಷ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.