ಪ್ರತಿವರ್ಷ ಮೇ 3 ರಂದು ವಿಶ್ವ ಅಸ್ತಮಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇತೀಚಿನ ದಿನಗಳಲ್ಲಿ ಅಸ್ತಮಾ ಸರ್ವೇ ಸಾಮಾನ್ಯವಾಗಿದೆ. ಎಲ್ಲಾ ವಯಸ್ಸಿನವರಿಗೂ ಅಸ್ತಮಾ ಸಮಸ್ಯೆ ಕಾಡುತ್ತಿದೆ. ಇದೊಂದು ಅಪಾಯಕಾರಿ ಕಾಯಿಲೆಯೂ ಹೌದು.
ಇದು ಸಾಮಾನ್ಯವಾಗಿ ಕಲುಶಿತ ವಾತಾವರಣ ಹಾಗೂ ಗಾಳಿಯಿಂದ ಹಬ್ಬುವ ಕಾಯಿಲೆಯಾಗಿದ್ದು, ಪ್ರತಿದಿನ ಸುಮಾರು 40 ರೋಗಿಗಳು ಅಸ್ತಮಾ, ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶೇ, 60 ರಷ್ಟು ಪುರುಷರಲ್ಲಿಯೇ ಹೆಚ್ಚಾಗಿ ಇದು ಕಂಡುಬರುತ್ತದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೆ ಇದೆ. (ಪ್ರತಿ ತಿಂಗಳು 25 ರಿಂದ 30 ಮಕ್ಕಳಲ್ಲೂ ಸಹ ಅಸ್ತಮಾ ಬರುತ್ತಿರುವುದನ್ನು ವೈದ್ಯರು ನೋಡಿದ್ದಾರೆ ) ಕಳೆದ ವರ್ಷಕ್ಕೆ ಹೋಲಿಸಿದ್ದರೆ ಈ ಬಾರಿ ಶೇ 5 ರಷ್ಟು ಹೆಚ್ಚಿನ ಜನರು ಅಸ್ತಮಾದಿಂದ ನರಳುತ್ತಿದ್ದಾರೆ.
ಅಸ್ತಮಾದ ರೋಗಲಕ್ಷಣ ಹಾಗೂ ಮುಂಜಾಗ್ರತೆ...
ಇತ್ತೀಚಿನ ಕೆಲ ವರ್ಷಗಳಲ್ಲಿ ಇನ್ಹಲೇಷನ್ ಥೆರಪಿ ಬಳಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ವಾಯುಮಾಲಿನ್ಯ, ಧೂಮಪಾನ, ಮಕ್ಕಳಲ್ಲಿ ಸರಿಯಾದ ಚಿಕಿತ್ಸೆ ನೀಡದಿರುವುದು, ಹವಾಮಾನ ವೈಫರೀತ್ಯದಿಂದ ಹರಡುವ ಜ್ವರ ಮತ್ತಿತರ ಕಾರಣಗಳಿಂದ ಅಸ್ತಮಾ ಬರಲಿದೆ. ಜೊತೆಗೆ ವಿಪರೀತ ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಅಥವಾ ದೌರ್ಬಲ್ಯ, ವ್ಯಾಯಾಮ-ಪ್ರೇರಿತ ಅಸ್ತಮಾ, ಆಯಾಸ, ಕಿರಿಕಿರಿ, ಮುಂಗೋಪ, ಅಲರ್ಜಿ, ಸೀನುವಿಕೆ, ಕೆಮ್ಮು, ಮೂಗು ಕಟ್ಟಿಕೊಳ್ಳುವುದು, ಗಂಟಲು ನೋವು ಇತ್ಯಾದಿ ಪರಿಣಾಮಗಳು ಸಹ ಅಸ್ತಮ ಇರುವವರನ್ನು ಬಾಧಿಸುತ್ತವೆ.
ಇನ್ನು, ಅಸ್ತಮಾ ನಿಯಂತ್ರಿಸುವಲ್ಲಿ ಇನ್ಹಲೇಷನ್ ಚಿಕಿತ್ಸೆ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಶ್ವಾಸಕೋಶಕ್ಕೆ ನೇರವಾಗಿ ಔಷಧ ಪೂರೈಸುವಲ್ಲಿ ಇನ್ಹಲೇಷನ್ ಚಿಕಿತ್ಸೆ ನೆರವಾಗುತ್ತದೆ. ಆದರೆ, ರೋಗಿಗಳು ನಿಯಮಿತವಾಗಿ ಔಷಧ ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಅಸ್ತಮಾವನ್ನು ತಡೆಗಟ್ಟಹುದು.
ಅಸ್ತಮಾ ಚಿಕಿತ್ಸೆ ಬಗ್ಗೆ ತಪ್ಪು ತಿಳುವಳಿಕೆಗಳು...
ಅಸ್ತಮಾ ಚಿಕಿತ್ಸೆ ಪಡೆಯುವ ಕೆಲವರು ಕೆಲ ದಿನಗಳಲ್ಲಿಯೇ ಈ ಲಕ್ಷಣ ಕಡಿಮೆಯಾದ ಕೂಡಲೇ ಅದರ ಚಿಕಿತ್ಸೆಯನ್ನೂ ಪೂರ್ಣಗೊಳಿಸದೇ ನಿಲ್ಲಿಸಿಬಿಡುತ್ತಾರೆ. ಲಕ್ಷಣ ಇಲ್ಲ ಅಂದ ಮಾತ್ರಕ್ಕೆ ಅಸ್ತಮಾದಿಂದ ಮುಕ್ತಿ ಹೊಂದಿದ್ದೇವೆ ಎಂಬರ್ಥವಲ್ಲ, ಇದರ ಗುಣಲಕ್ಷಣಗಳು ಕಡಿಮೆಯಾಗಿದೆ ಎಂದು ಔಷಧಿ ತೆಗೆದುಕೊಳ್ಳುವುದು ಕಡಿಮೆ ಮಾಡಿದರೆ ಮತ್ತೆ ಅಸ್ತಮಾ ನಿಯಂತ್ರಿಸಲು ಭಾರೀ ತ್ರಾಸದಾಯಕವಾಗುತ್ತದೆ. ಇಂತಹ ಕ್ರಮ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. ಅಸ್ತಮಾ ಕಾಯಿಲೆಗೆ ಧೀರ್ಘಾವಧಿಯ ಚಿಕಿತ್ಸೆ ಅಗತ್ಯವಾಗಿದೆ. ಅನೇಕ ರೋಗಿಗಳು ಚೆನ್ನಾಗಿದ್ದೇವೆ ಎಂದು ಅನ್ನಿಸಿದರೆ ಇನ್ ಹೆಲರ್ ನಿಲ್ಲಿಸಿಬಿಡುತ್ತಾರೆ ಇದು ತುಂಬಾ ಅಪಾಯಕಾರಿಯಾದದ್ದು, ಇಂತಹ ರೋಗಿಗಳು ಎಲ್ಲಾದಕ್ಕೂ ವೈದ್ಯರ ಬಳಿ ಸಲಹೆ ಪಡೆದು ನಂತರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ವೈದ್ಯರನ್ನು ಭೇಟಿ ನೀಡಿ...
ಅಸ್ತಮಾ ಬರುವ ಮುನ್ನವೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಮುಖ್ಯ. ಮುಖಕ್ಕೆ ಮಾಸ್ಕ್ ಧರಿಸುವುದು, ವಾಯುಮಾಲಿನ್ಯ ಇರುವ ಪ್ರದೇಶವನ್ನು ನಿಯಂತ್ರಿಸುವುದು, ನಿರ್ಮಲ ಗಾಳಿ ಸೇವನೆ, ತಂಬಾಕು ಸೇದದಿರುವುದು, ಉತ್ತಮ ಆಹಾರ ಕ್ರಮ ಅನುಸರಿಸಿದರೆ ಅಸ್ತಮಾ ಬರುವುದನ್ನು ತಡೆಯಬಹುದು. ಕೆಲವರಲ್ಲಿ ಅಸ್ತಮಾ ವಿಪರೀತಕ್ಕೆ ತಲುಪಿದರೂ ನಿರ್ಲಕ್ಷದಿಂದ ವೈದ್ಯರನ್ನು ಕಾಣುವುದಿಲ್ಲ. ಇದು ಅಪಾಯಕಾರಿ. ಅಸ್ತಮಾದ ತೀವ್ರತೆ ಇದ್ದರೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ಇದರಿಂದ ಮುಂದಾಗುವ ಅನಾಹುತ ತಪ್ಪಿಸಲು ಸಹಕಾರಿಯಾಗಲಿದೆ.
ಲೇಖಕರು:ಫೋರ್ಟಿಸ್ ಆಸ್ಪತ್ರೆ ಶ್ವಾಸಕೋಶಶಾಸ್ತ್ರ ನಿರ್ದೇಶಕ ಡಾ.ವಿವೇಕ್ ಆನಂದ್ ಪಡೆಗಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.