ADVERTISEMENT

World Diabetes Day | ಔಷಧವಿಲ್ಲದೆ ಡಯಾಬಿಟಿಸ್‌ ರಿವರ್ಸ್ ಸಾಧ್ಯವೇ?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 21:30 IST
Last Updated 14 ನವೆಂಬರ್ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸರಿಯಾದ ಆಹಾರ ಪದ್ಧತಿ ಹಾಗೂ ವ್ಯಾಯಾಮದಿಂದ ಔಷಧಗಳಿಲ್ಲದೆ ಡಯಾಬಿಟಿಸ್‌ ಅನ್ನು ರಿವರ್ಸ್‌ ಮಾಡಬಹುದು. ಭಾರತ ಸರ್ಕಾರದ ವೈದ್ಯಕೀಯ ಸಂಸ್ಥೆ (ಐಸಿಎಂಆರ್‌) 18 ಸಾವಿರ ರೋಗಿಗಳ ಮೇಲೆ ಸಂಶೋಧನೆ ಮಾಡಿ ಔಷಧಗಳಿಲ್ಲದೆ ಮಧುಮೇಹವನ್ನು ಗುಣಪಡಿಸಿದ್ದಾರೆ. ಅಮೆರಿಕದ ಗ್ಲಾಸ್‌ ಗೋವ್‌ ಯುನಿವರ್ಸಿಟಿ ವೈದ್ಯರು, ವರ್ಮೊಂಟ್‌ ಯುನಿವರ್ಸಿಟಿ ವೈದ್ಯರು ಹಾಗೂ ಹುಬ್ಬಳ್ಳಿಯ ಜೀವಿನಿ ಅರೋಗ್ಯ ಪ್ರತಿಷ್ಠಾನ ವೈದ್ಯರು ಮಧುಮೇಹ ರೋಗಿಗಳಿಗೆ ಔಷಧವನ್ನು ನಿಲ್ಲಿಸಿ ಡಯಾಬಿಟಿಸ್‌ ರಿವರ್ಸ್‌ ಮಾಡಿಸಿದ್ದಾರೆ.

*ಹಾಗಾದರೆ ಔಷಧಗಳಿಲ್ಲದೆ ಡಯಾಬಿಟಿಸ್‌ ಅನ್ನು ಹೇಗೆ ರಿವರ್ಸ್‌ ಪಡಿಸಬಹುದು?

ಸರಿಯಾದ ಆಹಾರಪದ್ಧತಿ ಹಾಗೂ ವ್ಯಾಯಾಮದ ಮೂಲಕ ಡಯಾಬಿಟಿಸ್‌ ಅನ್ನು ರಿವರ್ಸ್‌ ಮಾಡಬಹುದು. ಆದರೆ ಈ ಮೂರು ಕ್ರಮಗಳನ್ನು ಪಾಲಿಸಲೇಬೇಕು.ಮೊದಲನೇಯದಾಗಿ ಮಧುಮೇಹಿ ಇನ್ಸುಲಿನ್‌ ಔಷಧಗಳನ್ನು (Insulin Secretagogues), ಅಂದರೆ ಹಸಿವು ಹೆಚ್ಚಿಸುವ ಮಧುಮೇಹದ ಔಷಧಗಳನ್ನು ನಿಲ್ಲಿಸಬೇಕು.

ADVERTISEMENT

ಸ್ಯಾನ್ ಫ್ರಾನ್ಸಿಸ್ಕೊ ಹಾಗೂ ಬೋಸ್ಟನ್ ಯುನಿವರ್ಸಿಟಿ ವೈದ್ಯರ ಪ್ರಕಾರ ಈಗಿನ ಮಧುಮೇಹ ಔಷಧಗಳು ಇನ್ಸುಲಿನ್‌ ಉತ್ಪತ್ತಿ ಮಾಡುವ ಬೇಟಾ ಸೆಲ್ಸ್‌ ಅನ್ನು ಕೊಲ್ಲುತ್ತದೆ ಹಾಗೂ ಮಧುಮೇಹವನ್ನು ಕಾಲ ಕ್ರಮೇಣ ಹೆಚ್ಚಿಗೆ ಮಾಡುತ್ತವೆ. ಆದ್ದರಿಂದ ಮಧುಮೇಹಿಗಳು ಕಾಲ ಕ್ರಮೇಣ ಹೆಚ್ಚು ಹೆಚ್ಚು ಔಷಧಗಳನ್ನು ಸೇವಿಸುತ್ತಾರೆ.

ಎರಡನೆಯದಾಗಿ, ಸರಿಯಾದ ಆಹಾರ ಕ್ರಮವನ್ನು ಪಾಲಿಸಬೇಕು. ಹೆಚ್ಚು ಸಕ್ಕರೆ ಅಂಶ ಇರುವ ಆಹಾರಗಳಾದ (High glycemic foods) ಬೀಟ್ ರೂಟ್, ಆಲೂಗಡ್ಡೆ, ರಾಗಿ, ಅನ್ನ, ಮೈದಾ, ಜಂಕ್‌ ಫುಡ್‌ ಸೇವಿಸಲೇಬಾರದು. ನಿಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣಕ್ಕನುಗುಣವಾಗಿ (Blood Sugar) ಊಟ ಮಾಡಬೇಕು.

ಮೂರನೆಯದಾಗಿ, ಬೆಳಗಿನ ನಡಿಗೆಯನ್ನು (ಮಾರ್ನಿಂಗ್ ವಾಕ್)ನಿಲ್ಲಿಸಿ ಊಟದ ಒಂದು ತಾಸಿನ ನಂತರ Anti gravity exercise (ಆ್ಯಂಟಿ ಗ್ರ್ಯಾವಿಟಿ ಎಕ್ಸರ್‌ಸೈಜ್‌) ಮಾಡಬೇಕು. Anti gravity muscles ನಿಮ್ಮ ಆಹಾರದಲ್ಲಿನ ಸಕ್ಕರೆ ಅಂಶವನ್ನು ಉಪಯೋಗಿಸಿ ನಿಮ್ಮ PPBS (ಊಟದ ನಂತರದ ಸಕ್ಕರೆ ಪ್ರಮಾಣ) ಕಡಿಮೆ ಮಾಡುತ್ತದೆ.

*ಡಯಾಬಿಟಿಸನ್ನು ಔಷಧಿಗಳಿಲ್ಲದೆ ಗುಣಪಡಿಸುವ ವಿಧಾನಗಳನ್ನು ಹೇಗೆ ಪಾಲಿಸಬೇಕು?

ಡಯಾಬಿಟಿಸ್‌ ರಿಸರ್ವ್‌ ಪದ್ಧತಿಯ ನುರಿತ ವೈದ್ಯರ ಮೇಲ್ವಿ ಚಾರಣೆಯಲ್ಲಿ ಈ ವಿಧಾನಗಳನ್ನು ಪಾಲಿಸಬೇಕು. ನಿಯಮಿತವಾಗಿ ತಮ್ಮ ರಕ್ತದಲ್ಲಿನ ಸಕ್ಕರೆ ಪರೀಕ್ಷೆಯ ವರದಿಗೆ (Blood sugar test report) ಅನುಗುಣವಾಗಿ ಔಷಧಗಳಿಲ್ಲದೆ ತಮ್ಮ ಮಧುಮೇಹವನ್ನು ವೈದ್ಯರು
ಸರಿಪಡಿಸುತ್ತಾರೆ.

*ಡಯಾಬಿಟಿಸ್‌ ರಿವರ್ಸ್‌ ಮಾಡಲು ಎಷ್ಟು ಸಮಯ ಬೇಕಾಗುತ್ತದೆ?

ತಮ್ಮ ಮಧುಮೇಹ ಯಾವ ಹಂತದಲ್ಲಿದೆ ಎಂಬುದರ ಮೇಲೆ ಮೂರರಿಂದ ಆರು ತಿಂಗಳ ಸಮಯ ಬೇಕಾಗುತ್ತದೆ.

*ಡಯಾಬಿಟಿಸ್ ರಿವರ್ಸ್‌ ಪದ್ಧತಿ ಯಾರಿಗೆ ಸೂಕ್ತ?

ಡಯಾಬಿಟಿಸ್ ರಿವರ್ಸ್‌ ಪದ್ಧತಿ ಪಾಲಿಸಲು 60 ವರ್ಷಗಳ ಒಳಗಿರಬೇಕು. ಮೂತ್ರಪಿಂಡ ಮತ್ತು ಯಕೃತ್ತಿನ ಸಮಸ್ಯೆಗಳು ಇರಬಾರದು. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಆಸಕ್ತಿ ಇರಬೇಕು. ಟೈಪ್ 1 ಡಯಾಬಿಟಿಸ್‌ನವರಿಗೂ ಸೂಕ್ತವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.