ಬೆಂಗಳೂರು: ವಿಶ್ವದಾದ್ಯಂತ ಪ್ರತಿ ವರ್ಷ ಏಪ್ರಿಲ್ 17ರಂದುವಿಶ್ವ ಹಿಮೋಫಿಲಿಯಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಮಾನ್ಯತೆ ನೀಡಿದೆ.
ವಿಶ್ವ ಹಿಮೋಫಿಲಿಯಾ ಸಂಸ್ಥೆ(ಡಬ್ಲ್ಯುಎಫ್‌ಎಚ್)ಯನ್ನು ಸ್ಥಾಪನೆ ಮಾಡಿದಫ್ರ್ಯಾಂಕ್ ಸ್ಕಾನ್ಬೆಲ್ ಅವರ ಸ್ಮರಣೆಯೊಂದಿಗೆ ವಿಶ್ವ ಹಿಮೋಫಿಲಿಯಾ ದಿನವನ್ನು ಆಚರಿಸಲಾಗುತ್ತದೆ. ಇದನ್ನು1989ರಿಂದ ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳು ಈ ಆಚರಣೆ ಮಾಡುತ್ತವೆ.
ರಕ್ತದ ವಿವಿಧ ಘಟಕಗಳಲ್ಲಿನ ಯಾವುದಾದರೊಂದು ಒಂದು ಅಂಶ ಸರಿಯಾಗಿ ಕೆಲಸ ಮಾಡದೇ ಇರುವಾಗ ಅಥವಾ ಅದರಲ್ಲಿ ಏನಾದರೂ ಕೊರತೆ ಇದ್ದಾಗ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಹೀಗೆ ರಕ್ತ ಹೆಪ್ಪುಗಟ್ಟದೆ ಇರುವುದನ್ನು ಹಿಮೋಫಿಲಿಯಾ ಎನ್ನುತ್ತಾರೆ.
ಗಂಟಲು, ಕೀಲು, ಮೂಗು,ವಸಡು,ಮಲ, ಮೂತ್ರ,ಮಿದುಳು, ಸ್ನಾಯು ಮತ್ತು ಮಾಂಸಖಂಡಗಳಲ್ಲಿ ರಕ್ತಸ್ರಾವವಾಗುವುದು ಪ್ರಮುಖ ಲಕ್ಷಣಗಳು. ಇವುಗಳಲ್ಲಿ ಮಿದುಳಿನ ರಕ್ತಸ್ರಾವ ಮಾರಣಾಂತಿಕವಾಗಿದೆ. ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.
ಹಿಮೋಫಿಲಿಯಾದಲ್ಲಿ ಎ,ಬಿ, ಸಿ ಎಂಬ ಮೂರು ವಿಧಗಳಿವೆ. ಇದು ಅನುವಂಶಿಕವಾಗಿಯೂ ಕಾಣಿಸಿಕೊಳ್ಳುತ್ತದೆ. ತಾಯಿಯಿಂದ ಮಗನಿಗೂ ಇದು ಬಳುವಳಿಯಾಗಿಯೂ ಬರುತ್ತದೆ. ಸಾಮಾನ್ಯವಾಗಿ ಪುರುಷರಲ್ಲಿ ಈ ರೋಗ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ
ಜನರಲ್ಲಿ ಹಿಮೋಫಿಲಿಯಾ ಕುರಿತು ಜಾಗೃತಿ ಮೂಡಿಸಿ ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಉತ್ತಮಗೊಳಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಈ ದಿನದಂದು ಆರೋಗ್ಯ ಇಲಾಖೆ, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ವಿಚಾರ ಸಂಕಿರಣಗಳು, ಚರ್ಚೆಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಜನರಲ್ಲಿಹಿಮೋಫಿಲಿಯಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.