ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗಿ ಸಾಗಬೇಕೆಂದರೆ ‘ಯಕೃತ್’ (ಲಿವರ್) ಆರೋಗ್ಯಕರವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಅವಶ್ಯ. ಪ್ರತಿ ವರ್ಷ ಏಪ್ರಿಲ್ 19ರಂದು ವಿಶ್ವ ಲಿವರ್ ದಿನವನ್ನಾಗಿ ಆಚರಿಸಲಾಗುತ್ತಿದೆ. ನಿಮ್ಮ ಯಕೃತ್ತನ್ನು ಆರೋಗ್ಯವಾಗಿಟ್ಟುಕೊಳ್ಳಲು ಒಂದಷ್ಟು ಸಲಹೆಯನ್ನು ವೈದ್ಯರು ನೀಡಿದ್ದಾರೆ.
ಆರೋಗ್ಯಕರ ಆಹಾರ ಸೇವಿಸಿ: ಲಿವರ್ ಆರೋಗ್ಯ ಕಾಪಾಡುವಲ್ಲಿ ಸೂಕ್ತ ಆಹಾರ ಸೇವನೆ ಅತ್ಯವಶ್ಯಕ. ಆಹಾರದಲ್ಲಿ ಕಡಿಮೆ ಸ್ಯಾಚುರೇಟೆಡ್ ಕೊಬ್ಬಿನಾಮ್ಲ ಇರುವ ಆಹಾರವನ್ನು ಕಡಿಮೆ ಮಾಡುವುದು ಉತ್ತಮ. ಉದಾ: ಗೋಮಾಂಸ, ಹಂದಿಮಾಂಸ ಮತ್ತು ಮಟನ್‌ನಲ್ಲಿ ಹೆಚ್ಚು ಕೊಬ್ಬಿನಾಂಶವಿದ್ದು, ಇದು ನಿಮ್ಮ ಲಿವರ್ ಮೇಲೆ ಪರಿಣಾಮ ಬೀರಬಹುದು. ಇನ್ನು, ತರಕಾರಿ, ಶುದ್ಧ ಎಣ್ಣೆ, ಮೀನು,ಹಣ್ಣು ಹಾಗೂ ಇತರೆ ಪೌಷ್ಠಿಕ ಆಹಾರ ಸೇವನೆ ಲಿವರ್‌ಗೆ ಒಳ್ಳೆಯ ಕೊಬ್ಬನ್ನು ನೀಡಲಿದೆ. ಹೆಚ್ಚು ಕಾರ್ಬೋಹೈಡ್ರೇಟ್ ತೆಗೆದುಕೊಳ್ಳುವುದು ಯಕೃತ್‌ಗೆ ಒಳ್ಳೆಯದಲ್ಲ. ಹೆಚ್ಚಿನ ಫೈಬರ್ ಆಹಾರವು ಕೊಬ್ಬಿನ ಪಿತ್ತಜನಕಾಂಗವನ್ನು ಹಿಮ್ಮೆಟ್ಟಿಸುತ್ತದೆ.
ನಿಯಮಿತ ವ್ಯಾಯಾಮವಿರಲಿ: ನಿಯಮಿತ ವ್ಯಾಯಾಮವು ಚಯಾಪಚಯವನ್ನು ಸರಾಗವಾಗಿ ನಡೆಸಲು ಅನುವು ಮಾಡಿಕೊಡಲಿದೆ. ಯಕೃತ್ ನಮ್ಮ ದೇಹ ಸೇವಿಸುವ ಎಲ್ಲಾ ಬಗೆಯ ಆಹಾರವನ್ನು ಒಂದು ಕ್ಷಣವೂ ಬಿಡುವಿಲ್ಲದೇ ಚಯಾಪಯಚ ಕ್ರಿಯೆ ನಡೆಸುವುದರಿಂದ ನಾವು ಮಾಡುವ ವ್ಯಾಯಾಮ ಲಿವರ್ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿರಲಿದೆ. ಯಕೃತ್‌ನಲ್ಲಿ ಈಗಾಗಲೇ ಕೊಬ್ಬಿನಾಂಶ ತುಂಬಿದ್ದರೆ, ಸೂಕ್ತ ಪರೀಕ್ಷೆ ನಡೆಸಿ, ಸಂಬಂಧಿಸಿ ಚಿಕಿತ್ಸೆ ಪಡೆಯಬಹುದು, ಇಲ್ಲವಾದರೆ, ಒಂದಷ್ಟು ವ್ಯಾಯಾದ ಮೂಲಕ ಹಾಗೂ ಸೂಕ್ತ ಆಹಾರ ಸೇವನೆಯ ಡಯೆಟ್ ಮೂಲಕ ಯಕೃತ್ತನ್ನು ಆರೋಗ್ಯವಾಗಿಟ್ಟುಕೊಳ್ಳಿ.
ನಿಮ್ಮ ತೂಕವನ್ನು ವೀಕ್ಷಿಸಿ: ನಿಮ್ಮ ಸೊಂಟದ ಸುತ್ತಳತೆಯು 90cm (ಪುರುಷರಲ್ಲಿ) ಅಥವಾ 80cm (ಹೆಣ್ಣುಗಳಲ್ಲಿ) ಗಿಂತ ಹೆಚ್ಚಿದ್ದರೆ, ಯಕೃತ್‌ನಲ್ಲಿ ಕೊಬ್ಬಿನಾಂಶ ಹೆಚ್ಚಿದೆ ಎನ್ನುವುದನ್ನು ಸೂಚಿಸಲಿದೆ. ಕೊಬ್ಬಿನ ಪಿತ್ತಜನಕಾಂಗದಿಂದ ಬಳಲುತ್ತಿರುವವರಿಗೆ, ತಮ್ಮ ತೂಕದಲ್ಲಿ ಶೇ.10ರಷ್ಟು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯ.
ನೈರ್ಮಲ್ಯ ಕಾಪಾಡಿಕೊಳ್ಳಿ: ಅಶುದ್ಧ ನೀರು ಹಾಗೂ ಅಶುದ್ಧ ಆಹಾರ ಸೇವನೆ ಯಕೃತ್‌ನ ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ಹೆಪಟೈಟಿಸ್ ವೈರಸ್‌ಗಳಾದ ಹೆಪಟೈಟಿಸ್ ಎ ಮತ್ತು ಇ ಬರುವ ಸಾಧ್ಯತೆ ಇದೆ. ಇದು ನಿಮ್ಮ ಯಕೃತ್‌ನ ಆರೋಗ್ಯವನ್ನು ಹಾಳು ಮಾಡಲಿದೆ. ಹೀಗಾಗಿ ಹೊರಗಡೆ ನೀರು ಕುಡಿಯುವುದು ಅಥವಾ ಸ್ವಚ್ಛತೆ ಕಾಪಾಡಿಕೊಳ್ಳದೇ ಇರುವ ಕಡೆ ತಿನ್ನುವುದು ಅಥವಾ ಕುಡಿಯುವುದನ್ನು ನಿಯಂತ್ರಿಸಿ.
ಆಲ್ಕೋಹಾಲ್: ಆಲ್ಕೋಹಾಲ್ ಸೇವನೆಯುವ ಲಿವರ್ ಡ್ಯಾಮೇಜ್ ಮಾಡಲಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈಗಾಗಲೇ ಫ್ಯಾಟಿ ಲಿವರ್ ಹೊಂದಿದ್ದರೆ, ಅಂಥವರಿಗೇ ಆಲ್ಕೋಹಾಲ್ ಸೇವನೆ ಹೆಚ್ಚು ಅಪಾಯ ಉಂಟು ಮಾಡಲಿದೆ. ಇದರಿಂದ ಲಿವರ್ ಫೇಲ್ಯೂರ್ ಆಗುವ ಸಾಧ್ಯತೆ ಇದೆ.
ಅನಿಯಂತ್ರಿತ ಗಿಡಮೂಲಿಕೆ ತಪ್ಪಿಸಿ: ನೀವು ತೆಗೆದುಕೊಳ್ಳುವ ಯಾವುದೇ ಔಷಧಿಯು ಯಕೃತ್ತಿನ ಮೂಲಕ ಹಾದುಹೋಗುತ್ತದೆ. ಸಾಕಷ್ಟು ಪ್ರಯೋಜನಕಾರಿ ದೇಹದ ಇತರೆ ಭಾಗಗಳಿಗೆ ಉಪಯೋಗಕಾರಿಯಾಗಿದ್ದರೂ ಅದು ಯಕೃತ್‌ಗೆ ಒಳ್ಳೆಯದೇ ಎಂಬುದನ್ನು ಒಮ್ಮೆ ವೈದ್ಯರೊಂದಿಗೆ ಪರಿಶೀಲಿಸಿಕೊಳ್ಳಿ. ಇಲ್ಲವಾದರೆ, ಯಕೃತ್ ಆರೋಗ್ಯ ಕೆಡಬಹುದು.
ರಕ್ತದಿಂದ ಹರಡುವ ಯಕೃತ್ ಸೋಂಕನ್ನು ತಪ್ಪಿಸಿ: ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ರಕ್ತ ಮತ್ತು ದೇಹದ ಸ್ರವಿಸುವಿಕೆಯ ಮೂಲಕ ಹರಡುತ್ತದೆ. ಅತ್ಯಂತ ಸಾಮಾನ್ಯ ಕಾರಣಗಳೆಂದರೆ ಇಂಟ್ರಾವೆನಸ್ ಡ್ರಗ್ ದುರುಪಯೋಗ, ಅಸುರಕ್ಷಿತ ಸಂಭೋಗ ಮತ್ತು ಅಸುರಕ್ಷಿತ ರಕ್ತ ದಾನ. ಈ ಸಂದರ್ಭದಲ್ಲಿ ನಿಮ್ಮ ದೇಹಕ್ಕೆ ಚುಚ್ಚುವ ಸೂಜಿ ಹೊಸದೇ ಅಥವಾ ಈಗಾಗಲೇ ಬಳಕೆಯಾಗಿದೆಯೇ ಒಮ್ಮೆ ಪರೀಕ್ಷಿಸಿಕೊಳ್ಳಿ. ಸಾಧ್ಯವಾದಷ್ಟು ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವುದು ಉತ್ತಮ.
ವ್ಯಾಕ್ಸಿನೇಷನ್ ಹಾಕಿಸಿ: ಹೆಪಟೈಟಿಸ್ ಬಿ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತದೆ. ಇದರಿಂದ ಸಂಭವಿತ ಹೆಪಟೈಟಿಸ್ ನಿಯಂತ್ರಿಸಬಹುದು.
ನಿಯಮಿತ ಆರೋಗ್ಯ ತಪಾಸಣೆ: ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ. ವಿಶೇಷವಾಗಿ ಮಧುಮೇಹ, ಹೈಪರ್ಲಿಪಿಡೆಮಿಯಾ, ಬೊಜ್ಜು ಅಥವಾ ಹೃದ್ರೋಗದ ಕುಟುಂಬದ ಇತಿಹಾಸ ಹೊಂದಿದ್ದವರು ತಪ್ಪದೇ ತಪಾಸಣೆ ಮಾಡಿಸಿಕೊಳ್ಳಿ. ಲಿವರ್ ಸ್ಕ್ರೀನಿಂಗ್ ರಕ್ತ ಪರೀಕ್ಷೆಗಳು ಮತ್ತು ಅಲ್ಟ್ರಾಸೌಂಡ್ ಸಹ ಅವಶ್ಯಕ.
ಲೇಖಕರು: ಫೋರ್ಟಿಸ್ ಆಸ್ಪತ್ರೆಯ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕ ಡಾ.ಕಿಶೋರ್ ಜಿಎಸ್‌ಬಿ ಹಾಗೂ ಡಾ. ಪಿಯುಶ್ ಕುಮಾರ್ ಸಿನ್ಹಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.