ಅರ್ಥಪೂರ್ಣ ಓದು ಉತ್ತಮ ಬದುಕು ರೂಪಿಸುತ್ತದೆ. ಹಾಗಾಗಿ, ಓದು ಪರೀಕ್ಷೆಗಾಗಿ ಅಲ್ಲ; ಬದುಕಿಗಾಗಿ ಎಂಬುದು ಅತ್ಯಂತ ಮಹತ್ವದ್ದು. ಅಂಕ ಗಳಿಕೆಯ ಬೆನ್ನುಬಿದ್ದು ಓದಿನಲ್ಲಿ ತೊಡಗುವ ವಿದ್ಯಾರ್ಥಿಗಳು ನಡೆಸುವ ಅಭ್ಯಾಸ ಪರೀಕ್ಷೆಗೆ ಮಾತ್ರ ಸೀಮಿತವಾಗುತ್ತದೆ.
ಮೇಲಾಗಿ, ಕೆಲವರಿಗೆ ಪರೀಕ್ಷೆ ಬರೆಯುವಾಗ ಹಿಂದೆ ಓದಿದ್ದು ನೆನಪಿಗೇ ಬರುವುದಿಲ್ಲ. ಮರೆತುಹೋಗಿ ಕಡಿಮೆ ಅಂಕ ಗಳಿಸಿ ಬೇಸರವನ್ನೂ ಮೂಡಿಸುತ್ತದೆ.
ಇದಕ್ಕೆಲ್ಲ ಕಾರಣ ತಾಳ್ಮೆಯ ಕೊರತೆ, ಆತಂಕ, ಭಯ, ಗೊಂದಲ, ಓದಿನಲ್ಲಿ ನಿರಾಸಕ್ತಿ, ಪರೀಕ್ಷೆ ಬೆಗೆಗಿನ ಪೂರ್ವಾಗ್ರಹ ನಿಲುವುಗಳು, ಪೋಷಕರ ಒತ್ತಡ ಇತ್ಯಾದಿ...
ಇವುಗಳಿಂದ ಉಂಟಾಗುವ ಮರೆಗುಳಿತನವನ್ನು ತೊಡೆದು, ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಆಸನಗಳು, ಧ್ಯಾನ ಹಾಗೂ ಪ್ರಣಾಯಾಮಗಳು ನೆರವಿಗೆ ನಿಲ್ಲುತ್ತವೆ. ಅವುಗಳ ಪಟ್ಟಿ ಇಲ್ಲಿದೆ.
* ಶೀರ್ಷಾಸನ ಮತ್ತು ಮುಂದುವರಿದ ಹಂತಗಳು, ಶೀರ್ಷಾಸನಯುಕ್ತ ಆಸನಗಳು
* ಸರ್ವಾಂಗಾಸನ ಮತ್ತು ಮುಂದುವರಿದ ಹಂತಗಳು, ಸರ್ವಾಂಗಾಸನಯುಕ್ತ ಆಸನಗಳು
* ಉತ್ಥಾನಾಸನ
*ಪಶ್ಚಿಮೋತ್ತಾನಾಸನ,ಊರ್ಧ್ವಮುಖ ಪಶ್ಚಿಮೋತ್ತಾನಾಸನ ಹಾಗೂ ಪಶ್ಚಿಮೋತ್ತಾನಾಸನಯುಕ್ತ ಆಸನಗಳು
*ಧ್ಯಾನ; ನಿಮ್ಮ ನೆಚ್ಚಿನ ಗುರು, ದೇವರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ತದೇಕಚಿತ್ತದಿಂದ ಉಪಾಸನೆ ಮಾಡಿ
*ತ್ರಾಟಕ; ಮೂಗಿನ ತುದಿ ಅಥವಾ ಹುಬ್ಬುಗಳ ನಡುತಾಣ ಭ್ರೂಮಧ್ಯದಲ್ಲಿ ದೃಷ್ಟಿಯನ್ನು ಕೇಂದ್ರೀಕರಿಸಿ ಅಭ್ಯಾಸ ನಡೆಸಿ
* ನಾಡಿಶೋಧನ ಪ್ರಾಣಾಯಾಮ
*ಪೂರಕ ಮತ್ತು ಅಂತರಕುಂಭಕ ಒಳಗೊಂಡು ಭಸ್ತ್ರಿಕಾ ಪ್ರಣಾಯಾಮ
ಇವನ್ನೂ ಪಾಲಿಸಿ
ಇಲ್ಲಿ ತಿಳಿಸಿರುವ ಅಭ್ಯಾಸಗಳ ಜತೆಗೆ ಆಟೋಟ ಹಾಗೂ ದೈಹಿಕ ಚಟುವಟಿಕೆ ಒಳಗೊಂಡ ಕಾರ್ಯಗಳಲ್ಲಿ ತೊಡಗಿ. ಸುಂದರ ಪರಿಸರದಲ್ಲಿ ವಿಹರಿಸಿ, ಹಸಿರು, ಹೂವು, ನಳನಳಿಸುವ ಚಿಗುರನ್ನು ನೋಡಿ ಸಂತಸ ಪಡಿ. ಓದಿದ್ದನ್ನು ಪುನರ್ ಮನನ ಮಾಡಿ.
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.