ADVERTISEMENT

ಕುದುರೆ ಸವಾರಿಗೆ ಸಹಕಾರಿ ಉತ್ಕಟಾಸನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 16:41 IST
Last Updated 19 ಜೂನ್ 2019, 16:41 IST
ಉತ್ಕಟಾಸನ
ಉತ್ಕಟಾಸನ   

ಶಿಷ್ಯ: ಒಂಟೆ ಮರಳುಗಾಡಿನ ಹಡಗು, ಆದರೆ ಕುದುರೆ ಯಾವುದಕ್ಕೆ ಲಾಯಕ್ಕು?

ಗುರು: ಗೊತ್ತಿದ್ದೂ ಮತ್ತೂ ಕೇಳ್ತಿಯಲ್ಲ. ಯಂತ್ರ ಜಗತ್ತು ಸೃಷ್ಟಿಯಾಗುವ ಮೊದಲು ಮಾನವನ ಸಂಚಾರ ಸಾಧನ ಕುದುರೆ. ರಾಜರ ಸೇನೆಯಲ್ಲಿ ಅಶ್ವಪಡೆಗೆ ಮೊದಲ ಪ್ರಾಶಸ್ತ್ಯ. ಪ್ರಸ್ತುತ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅಶ್ವ ಪಡೆ ಮುಂಚೂಣಿಯಲ್ಲಿದ್ದು ಗಮನ ಸೆಳೆಯುತ್ತದೆ. ಗಣ್ಯರಿಗೆ ಗೌರವ ವಂದನೆ ಸಲ್ಲಿಸುವಾಗಲೂ ಅಶ್ವಾರೋಹಿಯು ಮುಂಚೂಣಿಯಲ್ಲಿರುತ್ತಾರೆ. ಕ್ರೀಡಾಕೂಟದಲ್ಲಿ ಕುದುರೆ ಓಟ ಸ್ಪರ್ಧೆ ನಡೆದರೆ, ಜೂಜಿನಾಟದಲ್ಲಿ ಕುದುರೆ ‘ರೇಸ್’ ನಡೆಯುತ್ತದೆ. ಯಂತ್ರಗಳ ಶಕ್ತಿಯನ್ನು ಹಾರ್ಸ್‌ ಪವರ್(ಎಚ್‌ಪಿ–HP) ಎಂದು ಅಳೆಯುತ್ತಾರೆ. ಅದಕ್ಕೆ ‘ಅಶ್ವ ಶಕ್ತಿ’ ಎನ್ನುತ್ತಾರೆ.

ಶಿಷ್ಯ: ಕುದುರೆ ಓಡಿಸಲು ಕಲಿಯಬೇಕಿದೆ. ಈ ಕುರಿಮಂದಿಯವರ ಬಳಿ ಕುದುರೆ ಇದ್ದಾವಲ್ಲ ಅವರು ಹೇಳಿಕೊಡ್ತಾರಾ?

ADVERTISEMENT

ಗುರು: ಕುದುರೆ ಓಡಿಸುವವರಿಗೆ ನೆರವಾಗಬಲ್ಲ ಉತ್ಕಟಾಸನ ಇದೆ. ಇದನ್ನು ಅಭ್ಯಾಸ ಮಾಡು. ನಿನ್ನ ಕುದುರೆ ಸವಾರಿ ಕಲಿಕೆಗೆ ನೆರವಾಗುತ್ತೆ.

ಅಭ್ಯಾಸಕ್ರಮ

ಭಯಂಕರವಾದ, ಬಲವತ್ತರವಾದ ವ್ಯತ್ಯಾಸಗಳಿರುವುದೇ ಉತ್ಕಟ. ಈ ಆಸನದ ಅಂತಿಮ ಸ್ಥಿತಿಯು ಕಲ್ಪನಾ ಪೀಠದ ಮೇಲೆ ಕುಳಿತಂತೆ ಕಾಣುತ್ತದೆ.
ಎರಡೂ ಪಾದಗಳನ್ನು ಕೂಡಿಸಿ ನೇರವಾಗಿ ನಿಂತುಕೊಳ್ಳಿ. ಎರಡೂ ಕೈಗಳನ್ನು ಮೇಲೆತ್ತಿ ಅಂಗೈಗಳನ್ನು ಜೋಡಿಸಿ. ತೋಳುಗಳು ಕಿವಿಗೆ ತಾಗುವಂತೆ ಕೈಗಳನ್ನು ಮತ್ತಷ್ಟು ಮೇಲಕ್ಕೆ ಹಿಗ್ಗಿಸಿ. ಶ್ವಾಸವನ್ನು ಹೊರ ಹಾಕುತ್ತಾ ಮಂಡಿಗಳನ್ನು ಭಾಗಿಸಿ. ಮುಂಡವನ್ನು ಕೆಳಕ್ಕೆ ಭಾಗಿಸುತ್ತಾ ತೊಡೆಗಳು ನೆಲಕ್ಕೆ ಸಮಾನಾಂತರವಾಗಿ ಬರುವಂತೆ ನಿಲ್ಲಿಸಿ.
ಎದೆಯ ಭಾಗವನ್ನು ಹಿಂದಕ್ಕೆ ಎಳೆದು ದೇಹವು ಮುಂದೆ ಭಾಗದಂತೆ ನೋಡಿಕೊಳ್ಳಿ. ಅಂತಿಮ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತಾ 30 ಸೆಕೆಂಡು ನೆಲೆಸಿ ವಿರಮಿಸಿ.

ಫಲಗಳು

l ಕಾಲುಗಳಲ್ಲಿನ ಸಾಮಾನ್ಯ ತೊಂದರೆಗಳನ್ನು ನಿವಾರಿಸಿ ಭುಜಗಳಲ್ಲಿನ ಪೆಡಸುತನವನ್ನು ಇಲ್ಲವಾಗಿಸುತ್ತದೆ.

l ಎದೆಯ ಭಾಗವು ವಿಶಾಲವಾಗುವುದು. ಎದೆ ಒಳಭಾಗದ ವಪೆ ಎಂಬ ಪೊರೆ ಹಿಗ್ಗುವ ಮೂಲಕ ಎದೆಗೆ ಹಿತವಾದ ಅಂಗಮರ್ದನವನ್ನು ಉಂಟು ಮಾಡುತ್ತದೆ.

l ಕಿಬ್ಬೆಟ್ಟೊ, ಬೆನ್ನು ಹುರುಪುಗೊಳ್ಳುವುದು. ಈ ಎಲ್ಲಾ ಫಲಗಳು ದೊರೆಯುವುದರಿಂದ ಕುದುರೆ ಸವಾರಿ ಮಾಡುವವರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.