ADVERTISEMENT

ಕಂಕಣವಾಡಿಯ ಗುಹೇಶ್ವರ

ಡಾ.ಟಿ.ಪಿ ಗಿರಡ್ಡಿ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST
ಕಂಕಣವಾಡಿಯ ಗುಹೇಶ್ವರ
ಕಂಕಣವಾಡಿಯ ಗುಹೇಶ್ವರ   

ಧಾರ್ಮಿಕ ಭಾವನೆ ಹೆಚ್ಚಿಸುವ ಹಾಗೂ ಶಿಲ್ಪ ಕಲಾಕೃತಿಯ ವೈಶಿಷ್ಟ್ಯತೆ ಸಾರುವ ಪ್ರಾಚೀನ ಕಾಲದ ಅನೇಕ ಕಲಾತ್ಮಕ ದೇವಾಲಯಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿವೆ. ಇವೆಲ್ಲ ಪೌರಾಣಿಕ, ಐತಿಹಾಸಿಕ ಮಹತ್ವ ಪಡೆದ ಜಾಗೃತ ಸ್ಥಾನಗಳು.

ಈ ಸಾಲಿನಲ್ಲಿ ಉಲ್ಲೇಖಿಸಬಹುದಾದ ಪ್ರಮುಖ ಮಂದಿರವೇ ಕಂಕಣವಾಡಿ ಗ್ರಾಮದ ಗುಹೇಶ್ವರ. ಜಮಖಂಡಿ ತಾಲ್ಲೂಕಿನಲ್ಲಿ ಪೂರ್ವಾಭಿ ಮುಖವಾಗಿ ಹರಿಯುವ ಕೃಷ್ಣಾ ನದಿ ಕಂಕಣವಾಡಿಗೆ ಮೊದಲು ಎರಡು ಕವಲುಗಳಾಗಿದೆ.
 
ಒಂದು ಕವಲು ಕಂಕಣವಾಡಿ, ಇನ್ನೊಂದು ತುಬಚಿ ಗ್ರಾಮದ ಹತ್ತಿರ ಹರಿದು ಶೂರ್ಪಾಲಿ ಗ್ರಾಮದ ಹತ್ತಿರ ಮತ್ತೆ ಒಂದಾಗಿ ಮುಂದೆ ಸಾಗುತ್ತವೆ. ನದಿಯ ಎರಡೂ ಕವಲಿನ ನಡುವೆ ಸುಮಾರು 500 ಎಕರೆ ಪ್ರದೇಶದಲ್ಲಿ ಅತ್ಯಂತ ಪ್ರಶಾಂತ ಹಾಗೂ ನಿಸರ್ಗ ರಮಣೀಯ ನಡುಗಡ್ಡೆ ನಿರ್ಮಾಣವಾಗಿದೆ. ಅದೇ ಗುಹೇಶ್ವರ ಗಡ್ಡೆ. ಅಲ್ಲಿರುವುದೇ ಗುಹೇಶ್ವರ ಎಂಬ ಪುರಾತನ ವೀರಶೈವ ದೇವಾಲಯ.

ಇದು ಸ್ವಯಂಭೂ ಲಿಂಗ ಎಂಬ ಪ್ರತೀತಿ. `ಜಂಬೂ ದ್ವೀಪೇ ದಂಡಕಾರಣ್ಯೇ, ಕೃಷ್ಣಾ ಗರ್ಭಾವತಾರೇ, ಜಲದುರ್ಗವಾಸೇ, ಜಂಭುಖಂಡೀ ಸಂಸ್ಥಾನೇ ಕೃಷ್ಣಾತೀರೇ, ಉತ್ತರವಿನಂ ಭಾಗ್ಯೇ, ಸುಕ್ಷೇತ್ರ ಕಂಕಣವಾಡಿ ಗ್ರಾಮ ವಾಸ್ತವ್ಯ ಜಗದಾದಿ ಜಗದ್ಗುರು ಗುಹೇಶ್ವರ~ ಎಂದು `ವೀರಾಗಮ~ದಲ್ಲಿ ಗುಹೇಶ್ವರನ ಕುರಿತು ಉಲ್ಲೇಖವಿದೆ.

`ಸಿದ್ಧಾಂತ ಶಿಖಾಮಣಿ~ಯಲ್ಲಿ ಸಹ ಗುಹೇಶ್ವರನ ಕುರಿತು ಪ್ರಸ್ತಾಪವಾಗಿದೆ.
ಕೃತ ಯುಗದ ಆದಿಯಲ್ಲಿ ಇದ್ದ ಗುಹೇಶ್ವರನೇ ವೀರಶೈವ ಸಿದ್ಧಾಂತ ಶಿಖಾಮಣಿ. ಗುಹೇಶ್ವರನನ್ನು ಮೆಚ್ಚಿ ಪರಶಿವ ಪರಮಾತ್ಮನೇ ಗುಹೇಶ್ವರ ಗಡ್ಡೆಯಲ್ಲಿ ಧರೆಗವತರಿಸಿದ ಎಂಬ ನಂಬಿಕೆ ಇದೆ.

ದಕ್ಷಿಣದ ರಾಮೇಶ್ವರನ ದರ್ಶನ ಭಾಗ್ಯದಿಂದ ದೊರೆಯುವ ಪುಣ್ಯ ಗುಹೇಶ್ವರನ ದರ್ಶನದಿಂದ ಲಭ್ಯವಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಪ್ರತಿ ವರ್ಷ ಅವರಾತ್ರಿ ಅಮವಾಸೆ ಅರುಣೋದಯಕ್ಕೆ ಸರಿಯಾಗಿ ಪಾರಮಾರ್ಥಿಕೋತ್ಸವ ನಡೆಯುತ್ತದೆ.
 

ಸೇವಾ ವಿವರ
ಅಭಿಷೇಕ ರೂ. 101
ರುದ್ರಾಭಿಷೇಕ (ಶ್ರಾವಣದಲ್ಲಿ ಮಾತ್ರ) ರೂ. 250
ಜಮಖಂಡಿಯಿಂದ ಕೇವಲ 10 ಕಿಮಿ ದೂರದಲ್ಲಿದೆ ಕಂಕಣವಾಡಿ. ಇದರ ಹತ್ತಿರದ ವರೆಗೂ ಬಸ್‌ಗಳಿವೆ. ಶೂರ್ಪಾಲಿ, ತುಬಚಿ, ಮುತ್ತೂರ ಗ್ರಾಮಗಳ ಕಡೆಯಿಂದ ದೇವಸ್ಥಾನಕ್ಕೆ ತೆರಳಬಹುದು. ಆದರೆ ಎಲ್ಲಿಂದಲೇ ಹೋದರೂ ಕೃಷ್ಣಾ ನದಿ ದಾಟಲೇ ಬೇಕು. ಅದಕ್ಕಾಗಿ ಬೋಟ್‌ಗಳ ವ್ಯವಸ್ಥೆ ಇರುತ್ತದೆ. ದೇವಸ್ಥಾನದ ಆವರಣದಲ್ಲಿ ವಾಸ್ತವ್ಯಕ್ಕೆ ಯಾವುದೇ ಸೌಲಭ್ಯವಿಲ್ಲ.
ಮಾಹಿತಿಗೆ: ಪರಮಾನಂದ ಕವಟಗಿ (96324 24405) ಅಥವಾ ಈ್ವ೫ರ ಕರಬಸನವರ (94483 34797).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.