ಬೆಟ್ಟದ ಸುತ್ತಲಿನ ಪರಿಸರವನ್ನು ಕಣ್ತುಂಬಿಕೊಂಡು ಎರಡೂ ಕೈಗಳನ್ನು ಚಾಚಿ, ಆಗಸದತ್ತ ಮುಖಮಾಡಿ ಕಣ್ಣು ಮುಚ್ಚಿ ದೀರ್ಘ ಉಸಿರೆಳೆದುಕೊಂಡು ಒಂದಷ್ಟು ಹೊತ್ತು ನಿಂತರೆ, ದೇಹವನ್ನು ಸೋಕುವ ಹಿಮಗಾಳಿ, ಮೈಯನ್ನು ಸ್ಪರ್ಶಿಸುವ ಎಳೆ ಬಿಸಿಲು, ಆಗಾಗ ಕೇಳಿ ಬರುವ ದೇವಾಲಯದ ಗಂಟಾನಾದ ನಮ್ಮ ಇರುವಿಕೆಯನ್ನೇ ಮರೆಸುತ್ತದೆ. ಕಾಯವೆಲ್ಲ ಹಗುರವಾಗಿ ಆಕಾಶದಲ್ಲಿ ತೇಲುತ್ತಿರುವ ಅನುಭವವಾಗುತ್ತದೆ. ಒತ್ತಡ, ಕಷ್ಟ, ಬೇಸರ, ನೋವು ಎಲ್ಲವೂ ಕಳೆದು ಮನಸ್ಸು ನಿರಾಳವಾಗುತ್ತದೆ. ಮನೋತ್ಸಾಹ, ಉಲ್ಲಾಸವೆಲ್ಲ ಮತ್ತೆ ಚೈತನ್ಯಗೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.