ಪ್ರವಾಸದ ಕ್ಷಣಗಳು ಹಲವು ಕಾಲದ ಬಳಿಕವೂ ನೆನಪಿನಲ್ಲಿ ಉಳಿಯುವಂತಾಗಬೇಕು ಎಂದರೆ, ಸ್ಥಳಗಳ ಆಯ್ಕೆಯಂತೆ ಸಿದ್ಧತೆ, ಅಲ್ಲಿನ ವ್ಯವಸ್ಥೆಗಳು ಸಹ ಮುಖ್ಯ. ಇದಕ್ಕಾಗಿ ಅತ್ಯುತ್ತಮ ಎನಿಸುವಂತೆ ಪ್ರವಾಸದ ಯೋಜನೆ ಸಿದ್ಧಪಡಿಸಿಕೊಳ್ಳುವುದು ಅವಶ್ಯ. ಈ ನಿಟ್ಟಿನಲ್ಲಿ ‘ಲೋನ್ಲಿ ಪ್ಲಾನೆಟ್’ ಪ್ರವಾಸಿ ಸಂಸ್ಥೆ ನೆರವಾಗಬಲ್ಲದು.
‘ಪೂರ್ಣಾವಧಿ ಉದ್ಯೋಗ ಮಾಡುವವರು ತಮ್ಮ ರಜೆಯ ಅವಧಿಯನ್ನು ಪ್ರವಾಸಕ್ಕೆ ಗರಿಷ್ಠಮಟ್ಟದಲ್ಲಿ ಬಳಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಅಮೂಲ್ಯ ಸಲಹೆಗಳನ್ನು ನೀಡುತ್ತೇವೆ. ಎಲ್ಲಾ ಖಂಡಗಳಲ್ಲಿಯೂ ಕ್ರೀಡೆ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮಾಹಿತಿಯನ್ನು ನಮ್ಮ ಪ್ರವಾಸಿ ಮಾರ್ಗದರ್ಶಕರು ಒದಗಿಸುತ್ತಾರೆ’ ಎಂದು ವೆಬ್‌ಸೈಟ್ ಹೇಳಿಕೊಳ್ಳುತ್ತದೆ.
ಮೊಬೈಲ್ ಆ್ಯಪ್
‘ಲೋನ್ಲಿ ಪ್ಲಾನೆಟ್’ನ ಪ್ರವಾಸ ಮಾಹಿತಿಗಳು ಅಂಗೈಯೊಳಗೇ ದೊರಕುವಂತೆ ಬಳಸಲು ಸುಲಭವಾದ ಮೊಬೈಲ್ ಆ್ಯಪ್ ಅನ್ನು ಸಹ ಸಂಸ್ಥೆ ಅಭಿವೃದ್ಧಿಪಡಿಸಿದೆ.
ಆಧುನಿಕ ತಂತ್ರಜ್ಞಾನಗಳಲ್ಲಿ ಮಾತ್ರವಲ್ಲದೆ ಮುದ್ರಣ ಮಾಧ್ಯಮದಲ್ಲಿಯೂ ಇದರ ಅಸ್ತಿತ್ವ ಇದೆ. ಪ್ರವಾಸಿ ಮಾರ್ಗದರ್ಶಿಗಳು, ಇ-ಬುಕ್‌ಗಳು, ನಿಯತಕಾಲಿಕೆಗಳನ್ನು ಸಂಸ್ಥೆ ಪ್ರಕಟಿಸುತ್ತದೆ.
ಪ್ರವಾಸಕ್ಕೆ ಪ್ರೇರಣೆ
ಪ್ರವಾಸದ ಸಂಕಲ್ಪಗಳನ್ನು ಸದಾ ಜೀವಂತವಾಗಿಡಲು ಮತ್ತು ಹೆಚ್ಚು ಪ್ರವಾಸ ಕೈಗೊಳ್ಳಲು ಪ್ರೇರೇಪಿಸಲು ಪ್ರತಿ ತಿಂಗಳು ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ.
ಐಷಾರಾಮಿ ಪ್ರವಾಸ, ಆರೋಗ್ಯ, ಆಹಾರ, ಪ್ರವಾಸ ಪ್ರೇಮ ಮತ್ತು ಮಾರಾಟ ಎನ್ನುವ ವಿಭಾಗಗಳಲ್ಲಿ ಹಲವಾರು ಮಾಹಿತಿಗಳನ್ನು ನೀಡಲಾಗಿದೆ. ಪ್ರವಾಸಕ್ಕೆ ಉತ್ತೇಜಿಸುವಂತಹ ಹಲವಾರು ಲೇಖನಗಳು ಸಹ ಇಲ್ಲಿವೆ. ಲೇಖನಗಳನ್ನು ಓದಿ ಪ್ರವಾಸಕ್ಕೆ ಸ್ಫೂರ್ತಿ ಪಡೆಯುವುದಾದರೆ ತಡವೇಕೆ https://www.lonelyplanet.com/ ಲಿಂಕ್ ಕ್ಲಿಕ್ ಮಾಡಿ. ರಜೆಯ ಮೋಜಿಗೆ ಸಿದ್ಧರಾಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.