ADVERTISEMENT

ಮಿಶ್ರ ಸಂಸ್ಕೃತಿಯ ಕೇಂದ್ರ ದಿಯು ಮತ್ತು ದಾಮನ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 19:30 IST
Last Updated 13 ನವೆಂಬರ್ 2019, 19:30 IST
ಸಿಲ್ವಾಸಾ
ಸಿಲ್ವಾಸಾ   

ಪ್ರವಾಸ ಎಂದಾಕ್ಷಣ ಸಾಮಾನ್ಯವಾಗಿ ಜನಪ್ರಿಯ ತಾಣಗಳೇ ಆಯ್ಕೆ ಪಟ್ಟಿಯಲ್ಲಿರುತ್ತವೆ. ಒಂದಷ್ಟು ಹುಡುಕಾಡಿದರೆ ಇವುಗಳ ಹೊರತಾದ ಸುಂದರ ತಾಣಗಳು ತಿಳಿಯುತ್ತವೆ.

ಇಂತಹ ತಾಣಗಳಲ್ಲಿ ಕೇಂದ್ರಾಡಳಿತ ಪ್ರದೇಶವಾದ ದಿಯು ಮತ್ತು ದಮನ್, ದಾದ್ರಾ ಮತ್ತು ನಗರ್ ಹವೇಲಿಯೂ(ಡಿಡಿಡಿಎನ್‌ಎಚ್) ಸೇರುತ್ತದೆ. ಈ ತಾಣಗಳಲ್ಲಿರುವ ಜೀವನಶೈಲಿ ಬುಡಕಟ್ಟು, ಭಾರತೀಯ ಹಾಗೂ ಐರೋಪ್ಯ ಸಂಸ್ಕೃತಿಯ ಮಿಶ್ರಣವಾಗಿದೆ. ಪುರಾತನ ಚರ್ಚ್‌ಗಳು, ಕೋಟೆಗಳು, ಅನಂತ ಅನುಭವ ಸೃಷ್ಟಿಸುವ ಸಮುದ್ರ ಜತೆಗೆ ಸ್ಥಳೀಯ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಬಹುದು. ಈ ಕೇಂದ್ರಾಡಳಿತ ಪ್ರದೇಶಗಳ ಪ್ರವಾಸಕ್ಕೆಂದೇ ವೆಬ್‌ಸೈಟ್ (https://www.tourismdddnh.in/)ಹೊಂದಿದ್ದು, ಪ್ರವಾಸಕ್ಕೆ ಸಲಹೆಗಳು, ಯೋಜನೆಗಳ ಜತೆಗೆ ಪ್ರವಾಸೋದ್ಯಮ ಕುರಿತ ಅನಿಸಿಕೆಗಳನ್ನು ಸಹ ಹಂಚಿಕೊಳ್ಳಲಾಗಿದೆ.

ಇಲ್ಲಿನ ಪ್ರಸಿದ್ಧ ತಾಣಗಳು, ಪ್ರಸಿದ್ಧ ತಿನಿಸುಗಳು ಹಾಗೂ ಹೋಟೆಲ್‌, ರೆಸಾರ್ಟ್‌ಗಳ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಪ್ರವಾಸಕ್ಕೆಂದು ಹೋದಾಗ ಯಾವ ತಾಣಗಳಿಗೆ ಹೇಗೆ ಭೇಟಿ ನೀಡುವುದು, ಆ ತಾಣಗಳ ವಿಶೇಷಣಗಳನ್ನು ತಿಳಿಯವುದು ಹೇಗೆಂಬ ಗೊಂದಲ ಮೂಡುತ್ತದೆ. ಇಲ್ಲಿ ಅಧಿಕೃತ ಮಾರ್ಗದರ್ಶಿಗಳು ಸುತ್ತಾಟಕ್ಕೆ ನೆರವಿಗೆ ಒದಗಲಿದ್ದಾರೆ. ಅಧಿಕೃತ ಮಾರ್ಗದರ್ಶಿಗಳ ವಿವರವನ್ನು ಸಹ ವೆಬ್‌ಸೈಟ್‌ನಲ್ಲಿ ನೀಡಿರುವುದು ವಿಶೇಷ.

ADVERTISEMENT

ನಾಯ್ದಾ ಗುಹೆಗಳು, ಪೋರ್ಚುಗೀಸರ ಕಾಲದ ಕೋಟೆಗಳು, ಸೇಂಟ್ ಥಾಮಸ್ ಚರ್ಚ್, ಬೊಮ್ ಜೀಸಸ್ ಚರ್ಚ್, ಗಂಗೇಶ್ವರ ಮಹಾದೇವ ದೇಗುಲ, ಐಎನ್ಎಸ್ ಖುಕ್ರಿ ಸ್ಮಾರಕ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಬಹುದು.

ಮಾಹಿತಿ: ರಾಧಿಕಾ ಎನ್‌. ಆರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.