ADVERTISEMENT

ವೈವಿಧ್ಯಮಯ ಪ್ರವಾಸಕ್ಕೆ ಎಸ್ಒಟಿಸಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 19:30 IST
Last Updated 25 ಡಿಸೆಂಬರ್ 2019, 19:30 IST
ಎಸ್‌ಒಟಿಸಿ
ಎಸ್‌ಒಟಿಸಿ   

ಥಾಮಸ್ ಕುಕ್ ಇಂಡಿಯಾದ ಅಂಗ ಸಂಸ್ಥೆಯಾಗಿರುವ ಎಸ್ಒಟಿಸಿ ಟ್ರಾವೆಲ್ ಲಿ. ವೈವಿಧ್ಯಮಯ ಪ್ರವಾಸಿ ಪ್ಯಾಕೇಜ್‌ಗಳನ್ನು ನೀಡುತ್ತದೆ.

ವಿರಾಮದ ಪ್ರವಾಸದಲ್ಲಿ ಗುಂಪು ಪ್ರವಾಸ, ಸಿದ್ಧ ಮಾದರಿ, ಐಷಾರಾಮಿ ಹಾಗೂ ಭಾರತ ಪ್ರವಾಸ ಎಂದು ನಾಲ್ಕು ರೀತಿಯ ಪ್ಯಾಕೇಜ್‌ಗಳಿವೆ. ದೇಶಿ ಹಾಗೂ ಅಂತರರಾಷ್ಟ್ರೀಯ ‘ಗುಂಪು ಪ್ರವಾಸ’ಗಳನ್ನು ಪ್ರೋತ್ಸಾಹಿಸಲು ಹಾಲಿಡೆ ಬಜಾರ್‌ ಎನ್ನುವ ಒಂದು ದಿನದ ರೋಡ್ ಶೋಗಳನ್ನು ಆಯೋಜಿಸುತ್ತಿದೆ.

ಅಧ್ಯಾತ್ಮ ದರ್ಶನ

ADVERTISEMENT

ಪ್ರವಾಸದಲ್ಲಿ ಆಧ್ಯಾತ್ಮಿಕ ಅನುಭವಗಳನ್ನು ಪಡೆಯಲು ಬಯಸುವವರಿಗಾಗಿ ಇಲ್ಲೊಂದು ವಿಭಿನ್ನ ಅವಕಾಶವಿದೆ. ‘ದರ್ಶನ’ ಹೆಸರಿ ನಲ್ಲಿ ಆಯೋಜಿಸುವ ಪ್ರವಾಸಗಳಲ್ಲಿ ವಿರಾಮದ ಜತೆಗೆ ಅಧ್ಯಾತ್ಮಿಕ ಅಂಶಗಳೂ ಮಿಳಿತಗೊಂಡಿರುತ್ತದೆ. 'ಭಾರತೀಯರಿಗೆ ಪ್ರವಾಸವನ್ನು ಆದ್ಯತೆಯಾಗಿ ಪರಿಗಣಿಸುವಂತೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ವಿನೂತನ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ' ಎಂದು ಸಂಸ್ಥೆ ಹೇಳಿಕೊಳ್ಳುತ್ತದೆ. ಅಮೆರಿಕ, ಬ್ರಿಟನ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದಲ್ಲಿರುವ ಭಾರತೀಯರಿಗೂ ಸಹ ಎಸ್ಒಟಿಸಿ ಪ್ರವಾಸಗಳನ್ನು ಆಯೋಜಿಸುತ್ತದೆ.

ಮೀಟಿಂಗ್ ಇಂಡಸ್ಟ್ರಿ

ಉದ್ದಿಮೆ ವಲಯದಲ್ಲಿ ಮೀಟಿಂಗ್ ಗಳು, ಸಮಾವೇಶಗಳು ಹಾಗೂ ಕಾರ್ಯಕ್ರಮಗಳನ್ನು ಕೇಂದ್ರೀಕರಿಸಿದ ಪ್ರವಾಸಗಳ ಟ್ರೆಂಡ್ ಈಚೆಗೆ ಹೆಚ್ಚು ಚಾಲ್ತಿಯಲ್ಲಿದೆ. ಇದನ್ನು ಮೀಟಿಂಗ್ ಇಂಡಸ್ಟ್ರಿ ಎನ್ನಲಾಗುತ್ತದೆ. ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ 100 ಕ್ಕೂ ಹೆಚ್ಚು ಜನರ ತಂಡ ಸಂಸ್ಥೆಯಲ್ಲಿದ್ದು, ದೇಶದಾದ್ಯಂತ ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ಸೇವೆಗಳನ್ನು ಒದಗಿಸುತ್ತದೆ.

ಉದ್ಯಮ ಪ್ರವಾಸ

ಹೊಸ ತಂತ್ರಜ್ಞಾನಗಳು ಹಾಗೂ ಗ್ರಾಹಕಸ್ನೇಹಿ ಸಾಫ್ಟ್ ವೇರ್ ಗಳನ್ನು ಬಳಸಿಕೊಂಡು ಗ್ರಾಹಕರ ಆದ್ಯತೆಗಳನ್ನು ಸಂಸ್ಥೆ ಪೂರೈಸುತ್ತದೆ.
ವಿರಾಮಕ್ಕೂ, ಉದ್ಯೋಗ ನಿಮಿತ್ತ ಪ್ರವಾಸಕ್ಕೂ ತಕ್ಕುದಾಗಿ ಒದಗುವ ಎಸ್ ಒಟಿಸಿ ಸೇವೆಗಳನ್ನು ಪಡೆಯಲು https://www.sotc.in/ ಕ್ಲಿಕ್ ಮಾಡಿ ನೋಡಬಹುದು.

ಮಾಹಿತಿ: ರಾಧಿಕಾ ಎನ್‌. ಆರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.