ADVERTISEMENT

ಎಂಜಿನಿಯರ್‌ಗಳ ಹೈ5 ‘ಅವತಾರಗಳು’ !

ನವೀನ್‌ ಕುಮಾರ್‌ ಎ.ಎಂ
Published 1 ಅಕ್ಟೋಬರ್ 2015, 19:30 IST
Last Updated 1 ಅಕ್ಟೋಬರ್ 2015, 19:30 IST
ಕಿರುನಾಟಕದ ಪಾತ್ರವೊಂದರಲ್ಲಿ ಜಯಂತ್‌
ಕಿರುನಾಟಕದ ಪಾತ್ರವೊಂದರಲ್ಲಿ ಜಯಂತ್‌   

ಬೆಂಗಳೂರಿನಲ್ಲಿ ಹವ್ಯಾಸಿ ರಂಗ ತಂಡಗಳಿಗೆ ಕೊರತೆಯಿಲ್ಲ. ಅಂತಹ ರಂಗತಂಡಗಳಲ್ಲಿ ಹೈ5 ತಂಡವೂ ಒಂದು. ಕಳೆದ ವರ್ಷ ಬೆಂಗಳೂರಿನಲ್ಲಿ ಇದೇ ತಂಡದವರಿಂದ ‘ಅವತಾರಗಳು’ ಎಂಬ ಕಿರು ನಾಟಕಗಳನ್ನು ಏರ್ಪಡಿಸಿ ಬೆಂಗಳೂರಿಗರ ಮನಗೆದ್ದಿದ್ದವು. ಈಗ ಅದೇ ತಂಡವು ಗಾಂಧಿ ಜಯಂತಿ ಪ್ರಯುಕ್ತ ‘ಅವತಾರ್– 2014’ ಮುಂದುವರಿದ ಭಾಗ ‘ಅವತಾರ್‌– 2015’  ಕಿರುನಾಟಕಗಳ ಹಬ್ಬವನ್ನು ಅಕ್ಟೋಬರ್‌ 02 ಹಾಗೂ 03 ಎರಡು ದಿನಗಳು ಏರ್ಪಡಿಸಿದೆ.

ಸ್ಥಳ: ನಗರದ ಎಂ.ಜಿ. ರಸ್ತೆಯ ರಂಗೋಲಿ ಮೆಟ್ರೋದ ರಂಗಸ್ಥಳ. ಸಂಜೆ  4ರಿಂದ 6 ಗಂಟೆಯವರೆಗೆ ಹಾಗೂ ಸಂಜೆ 7ರಿಂದ 9ರವರೆಗೆ ಎರಡು ಪ್ರದರ್ಶನಗಳಿರುತ್ತವೆ.  ಟಿಕೆಟ್‌ ದರ ಪ್ರತಿ ಪ್ರದರ್ಶನಕ್ಕೆ ತಲಾ ₹ 250. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಹಾಗೂ ರಂಗಸ್ಥಳದ ಬಳಿಯೂ ಖರೀದಿಸಬಹುದಾಗಿದೆ.

ಹತ್ತರಿಂದ ಹದಿನೈದು ನಿಮಿಷದ ಸಣ್ಣ ಅವಧಿಯ  ಕನ್ನಡದ ಐದು ನಾಟಕಗಳು  ಹಾಗೂ ಇಂಗ್ಲೀಷ್‌ನ ಆರು  ಹಾಗೂ ಹಿಂದಿ ಭಾಷೆಯ ನಾಲ್ಕು ಕಿರು ನಾಟಕಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.

ಹೈ5 ಹಿನ್ನೆಲೆ
ಸುಮಾರು 40 ಜನರಿರುವ ಈ ಹವ್ಯಾಸಿ ಕಿರುನಾಟಕ ತಂಡದಲ್ಲಿ  ಇರುವ ಬಹುತೇಕರು ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಿಡುವಿನ ಅವಧಿಯಲ್ಲಿ ಕಿರುನಾಟಕಗಳನ್ನು ರಚಿಸಿ, ಕೆಲವೇ ದಿನಗಳಲ್ಲಿ ತಾಲೀಮು ನಡೆಸಿ, ವೇದಿಕೆಗೆ ತರುತ್ತಾರೆ.

ಕಳೆದ 15 ವರ್ಷಗಳಿಂದ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಸೇವೆ ಸಲ್ಲಿಸಿ ಸದ್ಯ ಎಂಜಿನಿಯರ್‌ ಕೆಲಸಕ್ಕೆ ರಾಜಿನಾಮೆ ನೀಡಿ, ಸ್ವಯಂ ಆಸಕ್ತಿಯಿಂದ ಪೂರ್ಣಾವಧಿ ವೃತ್ತಿಯಾಗಿ ರಂಗಭೂಮಿಯನ್ನೇ ಆರಿಸಿಕೊಂಡಿರುವುದಾಗಿ ಹೈ5 ಹವ್ಯಾಸಿ ರಂಗತಂಡದ ನಿರ್ದೇಶಕ ವಿ.ಎಚ್‌. ಜಯಂತ್‌ ಹೇಳುತ್ತಾರೆ.

‘ಕಳೆದ ಸಲಕ್ಕಿಂತ ಮಾತಿನಲ್ಲಿ ಹೆಚ್ಚು ಪಂಚ್‌ಗಳು ಹಾಗೂ ನವರಸಗಳ ಹದವನ್ನು ಒದಗಿಸಲಿದ್ದೇವೆ’ ಎನ್ನುತ್ತಾರೆ ಜಯಂತ್‌. ‘ನಗರದ ಪ್ರೇಕ್ಷಕರು ಐದಾರು ಗಂಟೆಗಳ ದೊಡ್ಡ ನಾಟಕಗಳನ್ನು ನೋಡುವುದಕ್ಕಿಂತ 10–15 ನಿಮಿಷಗಳ ಕಡಿಮೆ ಅವಧಿಯ ಕಿರುನಾಟಕಗಳೆಡೆಗೆ ಹೆಚ್ಚಿನ ಒಲವು ತೋರಿಸುತ್ತಾರೆ’ ಎಂದು ಅಭಿಪ್ರಾಯಪಡುತ್ತಾರೆ ನಿರ್ದೇಶಕ ಜಯಂತ್‌ . 
*
ಪ್ರದರ್ಶನದಲ್ಲಿರುವ ನಾಟಕಗಳು
* ಎವರ್‌ ಲಾಸ್ಟಿಂಗ್‌
* ಸೂಪರ್‌ ಹೀರೋ
* ಪ್ರಾಕ್ಟಿಕಲ್‌ ಇಂಗ್ಲೀಷ್‌
* ಮಿಸ್‌ಫಾರ್ಚೂನ್‌
* ತ್ರೈಸಿಸ್‌
* ಬಾಯ್ಸ್‌ ಆರ್‌ ಬಾಯ್ಸ್‌
* ಯಮಧರ್ಮ
* ಅಭ್ಯಂತ
* ಬೋರಿಸ್‌ ದ ಬುಲ್‌ ಡಾಗ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.