ಶೀತಗಾಳಿಗೆ ನಡುಗುತ್ತಿರುವ ನಗರವಾಸಿಗಳಿಗೆ ಅಭಯ ನೀಡಲೆಂದು ವಾನರ ಸೇನೆಯೇ ಶುಕ್ರವಾರ ಬೆಂಗಳೂರಿಗೆ ಇಳಿದಿತ್ತು. ನಗರಕ್ಕೆ ಬರುವ ಅವರ ಆಸೆಗೆ ಹನುಮ ಜಯಂತಿ ಒಂದು ನೆಪ.
ಜಿಟಿಜಿಟಿ ಮಳೆಗೆ ಕೊಡೆ ಹಿಡಿದು ನಡೆದ ಹನುಮ ವೇಷಧಾರಿಗಳು ಹಾಡಿ–ಕುಣಿದು–ನೆಗೆದು ಮಕ್ಕಳನ್ನು ರಂಜಿಸಿದರು. ಕಪಿಸೇನೆ ಬಂದ ಮೇಲೆ ರಾಮದೇವರು ಬಾರದಿರಲು ಸಾಧ್ಯವೇ? ಆದರೆ ಮೈಗೆ ನೀಲಿಬಣ್ಣ ಪೂಸಿಕೊಂಡಿದ್ದ ಈ ರಾಮ ರಾಜನಂತಿರಲಿಲ್ಲ. ವನವಾಸದ ನೆನಪಿನಲ್ಲಿ ಬಸವಳಿದಂತೆ ಕಾಣುತ್ತಿದ್ದ ಜಟಾಧಾರಿಯಾಗಿದ್ದ. ಆನಂದರಾವ್ ವೃತ್ತದ ಸಮೀಪ ಕಂಡುಬಂದ ವಾನರಸೇನೆಯ ಹುಡುಗಾಟಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದವರು ಎಂ.ಎಸ್. ಮಂಜುನಾಥ್
**
**
**
**
**
**
**
**
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.