‘ಮಾನಾ ಕಿ ಹಮ್ ಯಾರ್ ನಹೀ’ ಎಂದು ಹಾಡಿ ಬಾಲಿವುಡ್ ಮಂದಿ ಹುಬ್ಬೇರಿಸುವಂತೆ ಮಾಡಿದ್ದ ಮಾದಕ ಸುಂದರಿ ಪರಿಣೀತಿ ಚೋಪ್ರಾ ಈಗ ಮತ್ತೊಮ್ಮೆ ಹಾಡುವ ಉಮೇದು ತೋರಿದ್ದಾರೆ.
ಪರಿಣೀತಿ ಪ್ರಸ್ತುತ, ರೋಹಿತ್ ಶೆಟ್ಟಿಯ ‘ಗೋಲ್‌ಮಾಲ್ ಅಗೇನ್’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣ ತಾಣಕ್ಕೆ ಭೇಟಿ ನೀಡಿದ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಈ ಚಿತ್ರದಲ್ಲಿ ಇದುವರೆಗೂ ಹಾಡಲು ಅವಕಾಶ ಸಿಕ್ಕಿಲ್ಲ.
ಆದರೆ ರೋಹಿತ್ ಸರ್‌ಗೆ ಬೆಣ್ಣೆ ಹಚ್ಚುತ್ತಿದ್ದೇನೆ, ಹಾಡಲು ನನಗೂ ಅವಕಾಶ ಕೊಡಿ’ ಎಂದು. ಅವರೊಂದು ವೇಳೆ ಅವಕಾಶ ಕೊಡದಿದ್ದರೂ ನನ್ನ ಎರಡನೇ ಹಾಡನ್ನು ಸದ್ಯದಲ್ಲೇ ಕೇಳಲಿದ್ದೀರಿ. ಅದು ಹಿಂದಿನ ಹಾಡಿಗಿಂತ ಉತ್ತಮವಾಗಿರುತ್ತದೆ ಎಂದು ಈಗಲೇ ಆಶ್ವಾಸನೆ ಕೊಡುತ್ತೇನೆ’ ಎಂದು ಈ ಸುಂದರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.