ವೇದ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಸಮಗ್ರ ಕವಿತೆಗಳು ‘ಇನ್ನಷ್ಟು ಹೇಳದೆ ಉಳಿದದ್ದು’ ಮತ್ತು ವಿಷ್ಣು ಪುರಾಣದ ಕನ್ನಡ ರೂಪ ‘ಪರಾಶರ ಕಂಡ ಪರತತ್ವ’ ಕೃತಿಗಳ ಬಿಡುಗಡೆ ಕಾರ್ಯಕ್ರಮ ಬುಧವಾರ ನಡೆಯಲಿದೆ. ಇದೇ ಸಂದರ್ಭ ಕವಿ, ಅವಧಾನಿ ಮತ್ತು ಮನಶಾಸ್ತ್ರಜ್ಞ ಡಾ. ಶಂಕರ ರಾಜಾರಾಮನ್ ಅವರಿಗೆ ‘ಬನ್ನಂಜೆ ಪುರಸ್ಕಾರ’ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ– ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಕೃತಿ ಕುರಿತು ಮಾತು– ಸಂಸ್ಕೃತ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ, ವಿಶೇಷ ಉಪನ್ಯಾಸ– ಸತ್ಸಂಗ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಎಂ., ಪ್ರತಿಕ್ರಿಯೆ– ಬನ್ನಂಜೆ ಗೋವಿಂದಾಚಾರ್ಯ. ಇದೇ ಸಂದರ್ಭ ಲಿಂಗಂಗುಂಟ್ಲು ಸುಬ್ಬರಾವ್ ಅವರಿಂದ ದ್ರೋಣಾಚಾರ್ಯರ ಕಾಲದ ಬಿಲ್ವಿದ್ಯೆ ಪ್ರದರ್ಶನ ನಡೆಯಲಿದೆ.
ಆಯೋಜನೆ–ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಸ್ಥಳ– ಜೆಎಸ್‌ಎಸ್ ಸಭಾಂಗಣ, ಜಯನಗರ. ಸಂಜೆ 5. ಮೊ 98450 89047, 77605 88545
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.