ಕೊರಳಲ್ಲಿ ಹೂ ಮಾಲೆ, ಹೆಗಲಲ್ಲಿ ಕಾವಡಿ ಕೋಲು ಹೊತ್ತು ನಡೆಯುವ ಹುಡುಗನಿಗೆ ಭಕ್ತಿಯೇ ಶಕ್ತಿಯ ನೆಲೆ. ಸಾಷ್ಟಾಂಗ ಬಿದ್ದವರ ದಾಟಿ ಜಿಗಿಯುವ ಹೆಂಗಸಿನ ಆವೇಶಕ್ಕೆ ದಕ್ಕಿದೆ ಅನುಭಾವದ ಕಳೆ. ಮಡಿಬಟ್ಟೆ ತೊಟ್ಟು, ಪುಷ್ಪದಂಡವ ಹೊತ್ತ ಹುಡುಗಿಯ ಕಣ್ಣಲ್ಲಿ ದೈವ ಭಕ್ತಿಯ ಬಿಂಬ. ಮುಗ್ಧತೆಯ ಹೂ ಅರಳಿದೆ ತಂದೆಯ ತೆಕ್ಕೆಯಲ್ಲಿನ ಮಗುವಿನ ಕಣ್ಣತುಂಬ... ಬಣ್ಣ ಬಣ್ಣದ ಬಳೆಯ ಕೊಳ್ಳುವ ಹೆಣ್ಣಿನ ಖುಷಿಗೂ ಭಕ್ತಿಗೂ ಎಲ್ಲಿಂದೆಲ್ಲಿಯೋ ಸಂದಿದೆ ಸಂಬಂಧ... ಹನುಮಂತನಗರದ ಕುಮಾರಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ಕಾವಡಿ ಉತ್ಸವದಲ್ಲಿ ದೇವಸ್ಥಾನದ ಆಸುಪಾಸಿನಲ್ಲಿ ಕಂಡು ಬಂದ ಈ ಎಲ್ಲ ಭಕ್ತಿ ಬಿಂಬಗಳನ್ನು ಸೆರೆಹಿಡಿದವರು ಆನಂದ್ ಬಕ್ಷಿ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.