ಇಂದಿರಾನಗರ ಸಂಗೀತ ಸಭೆ ನೀಡುವ ‘ಪುರಂದರ ಪ್ರಶಸ್ತಿ’ಗೆ ಈ ಬಾರಿ ಚಿತ್ರವೀಣೆ ಕಲಾವಿದ ಮೈಸೂರಿನ ಎನ್. ರವಿಕಿರಣ್ ಪಾತ್ರರಾಗಿದ್ದಾರೆ.
ಜನವರಿ 26ರ ಶುಕ್ರವಾರ ಎಚ್.ಎ.ಎಲ್. 2ನೇ ಹಂತದ ಪುರಂದರ ಭವನದಲ್ಲಿ ಸಾಂಸ್ಕೃತಿಕ ಹಬ್ಬ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ 9ಕ್ಕೆ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಯುವ ಪುರಂದರ ಪ್ರಶಸ್ತಿಯನ್ನು ಐಶ್ವರ್ಯ ವಿದ್ಯಾ ರಘುನಾಥ್ ಹಾಗೂ ಶ್ರೀರಂಜಿನಿ ಸಂತಾನಗೋಪಾಲನ್ ಸ್ವೀಕರಿಸಲಿದ್ದಾರೆ. ಉಪಸ್ಥಿತಿ– ಬಿ.ಆರ್. ಪ್ರಭಾಕರ್. ಅಧ್ಯಕ್ಷತೆ– ಎಸ್.ಎನ್.ಎಸ್. ಮೂರ್ತಿ.
ಸಂಜೆ ಸಂಗೀತ ಕಾರ್ಯಕ್ರಮ: ಶುಕ್ರವಾರ ಸಂಜೆ 5ಕ್ಕೆ ಸಂಧ್ಯಾ ಶಂಕರ್ ಗಾಯನ, ಎನ್.ರವಿಕಿರಣ್ ಚಿತ್ರವೀಣಾ ವಾದನ. ಪಿಟೀಲು- ಅಕ್ಕರೈ ಸುಬ್ಬುಲಕ್ಷ್ಮೀ, ಮೃದಂಗ- ಕೆ.ವಿ. ಪ್ರಸಾದ್ ಮತ್ತು ಘಟ - ಗಿರಿಧರ ಉಡುಪ.
ನಾಳೆ ಸಂಗೀತ ನೃತ್ಯೋತ್ಸವ
ಹಾರ್ಮೋನಿಯಂ ವಾದನ: ಸಂಜೆ 5ಕ್ಕೆ ಸಿ. ರಾಮದಾಸ್. ಪಿಟೀಲು- ವೆಂಕಟೇಶ ಜೋಶಿಯರ್, ಮೃದಂಗ - ಸಿ. ಚೆಲುವರಾಜು, ಘಟ - ದಯಾನಂದ ಮೋಹಿತೆ; ಸಂಜೆ 6ಕ್ಕೆ ಗಾಯನ - ರುದ್ರಪಟ್ಟಣ ಎಸ್. ರಮಾಕಾಂತ, ಪಿಟೀಲು - ಬಿ.ಯು. ಗಣೇಶ ಪ್ರಸಾದ್, ಮೃದಂಗ - ನೈವೇಲಿ ನಾರಾಯಣನ್, ಘಟ - ಸುಕನ್ಯಾ ರಾಂಗೋಪಾಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.