ADVERTISEMENT

ಸೂರ್ಯನಿಗೆ ಕಂಕಣ ಗ್ರಹಣ ವೀಕ್ಷಣೆಯಲ್ಲಿ ಇರಲಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 5:50 IST
Last Updated 26 ಡಿಸೆಂಬರ್ 2019, 5:50 IST
ಕಂಕಣ ಸೂರ್ಯಗ್ರಹಣ
ಕಂಕಣ ಸೂರ್ಯಗ್ರಹಣ   

ಡಿ.26ರಂದು ಅಪರೂಪದ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ಈ ವಿಶಿಷ್ಟ ಸೂರ್ಯಗ್ರಹಣವನ್ನು ಜನಸಾಮಾನ್ಯರು ಯಾವುದೇ ಭಯವಿಲ್ಲದೆ ವೀಕ್ಷಿಸಬಹುದು. ಆದರೆ, ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಹಾಗಾಗಿ ಜನರಲ್ಲಿ ಸೂರ್ಯಗ್ರಹಣದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ‘ಸೂರ್ಯೋತ್ಸವ’ ಎಂಬ ಕಂಕಣ ಸೂರ್ಯಗ್ರಹಣ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಸೂರ್ಯಗ್ರಹಣ ವೀಕ್ಷಿಸಲು ಸುರಕ್ಷಿತ ಸೋಲಾರ್‌ ಫಿಲ್ಟರ್‌ ಕನ್ನಡಕಗಳನ್ನು ವಿಜ್ಞಾನ ಕೇಂದ್ರ ಉಚಿತವಾಗಿ ನೀಡಲಿದೆ. ಇದರ ಮೂಲಕ ಈ ನೈಸರ್ಗಿಕ ವಿದ್ಯಮಾನವನ್ನು ಜನರು ಯಾವುದೇ ಭೀತಿ ಇಲ್ಲದೇ ವೀಕ್ಷಿಸಬಹುದು. ಡಿ.26ರಂದು ಬೆಳಿಗ್ಗೆ 8.04 ರಿಂದ ರಾತ್ರಿ 11.30 ತನಕ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶವಿದೆ.

ಸುರಕ್ಷಿತ ಸೋಲಾರ್‌ ಫಿಲ್ಟರ್‌ ಕನ್ನಡಕಗಳನ್ನು ವಿಜ್ಞಾನ ಕೇಂದ್ರದಿಂದ ಪಡೆಯಲು ವಿಳಾಸ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ.24/2, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಸಂಪರ್ಕ– 26718939, 9483549159.

ADVERTISEMENT

ಮೂಢನಂಬಿಕೆ ವಿರೋಧಿ ಒಕ್ಕೂಟ

ಮೂಢನಂಬಿಕೆ ವಿರೋಧಿ ಒಕ್ಕೂಟ ಟೌನ್‌ಹಾಲ್‌ನಲ್ಲಿಡಿ.26 ರಂದು ‘ಸೂರ್ಯಗ್ರಹಣ’ ಕಾರ್ಯಕ್ರಮವನ್ನು ಆಯೋಜಿಸಿದೆ. ನೈಸರ್ಗಿಕವಾಗಿ ಆಗುವಂತಹ ಸೂರ್ಯಗ್ರಹಣದ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.‌‌ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆಹಣ್ಣು, ಚುರುಮುರಿ, ಬಿಸಿಬೇಳೆ ಬಾತ್‌, ಇಡ್ಲಿ, ವಡಾ, ಸಮೋಸ,ಉಪಾಹಾರ ನೀಡಲಾಗುತ್ತದೆ.

ಇದರಲ್ಲಿ ಇಂಡಿಯನ್‌ ಫೋಕ್‌ ಬ್ಯಾಂಡ್‌ ವತಿಯಿಂದ ಮನರಂಜನಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಸ್ಥಳ– ಟೌನ್‌ ಹಾಲ್‌, ಜೆ.ಸಿ ರಸ್ತೆ, ಬೆಳಿಗ್ಗೆ 9 ರಿಂದ ರಾತ್ರಿ 10

ಬ್ರೇಕ್‌ಥ್ರೋ ಸೈನ್ಸ್‌ ಸೊಸೈಟಿ

ರಾಜಾಜಿನಗರದ ಬ್ರೇಕ್‌ ಥ್ರೋ ಸೈನ್ಸ್‌ ಸೊಸೈಟಿ ಕಂಕಣ ಸೂರ್ಯಗ್ರಹಣ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದೆ. ಸೊಸೈಟಿಯ ರಾಜ್ಯ ಕಾರ್ಯದರ್ಶಿ ರಜನಿ ಕೆ.ಎಸ್‌ ಅವರು ಕಂಕಣ ಸೂರ್ಯಗ್ರಹಣ ಹಾಗೂ 375 ವರ್ಷಗಳಿಗೊಮ್ಮೆ ಘಟಿಸುವ ಅಪರೂಪದ ವಿದ್ಯಮಾನದ ಬಗ್ಗೆ ಮಾತನಾಡಲಿದ್ದಾರೆ.

ಬ್ರೇಕ್‌ಥ್ರೂ ಸೈನ್ಸ್‌ ಸೊಸೈಟಿ ನಗರದಾದ್ಯಂತ ಸೂರ್ಯಗ್ರಹಣವನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ. ರಾಜಾಜಿನಗರದ ಆರ್‌ಪಿಎ ಮೈದಾನ, ನವರಂಗ್‌ ಮೈದಾನ, ಆರ್‌.ಟಿ ನಗರದ ಎಚ್‌ಎಂಟಿ ಮೈದಾನ, ಲಗ್ಗೆರೆ, ಬಸವೇಶ್ವರ ನಗರ, ಕೆಂಗೇರಿ ಮೈದಾನಗಳಲ್ಲಿ ಗ್ರಹಣ ವೀಕ್ಷಣೆ ಆಯೋಜಿಸಿದೆ.

ಮುನ್ನೆಚ್ಚರಿಕಾ ಕ್ರಮಗಳು

*ಸೂರ್ಯನನ್ನು ಬರಿಗಣ್ಣಿನಿಂದ ವೀಕ್ಷಿಸಬೇಡಿ

* ಸೋಲಾರ್‌ ಫಿಲ್ಟರ್‌/ಸೌರ ಕನ್ನಡಕಗಳನ್ನು ಬಳಸಿಯೇ ಸೂರ್ಯನನ್ನು ವೀಕ್ಷಿಸಿ

* ಗ್ರಹಣ ವೀಕ್ಷಣೆಗಾಗಿ ತಜ್ಞರ ಸಲಹೆ ಪಾಲಿಸಿರಿ

* ಮಾರ್ಗದರ್ಶಕರ ಉಪಸ್ಥಿತಿಯಲ್ಲಿಯೇ ಮಕ್ಕಳು ಸೋಲಾರ್‌ ಫಿಲ್ಟರ್‌ಗಳನ್ನು ಬಳಸಿ, ವೀಕ್ಷಿಸುವುದು ಸೂಕ್ತ

* ಸೂರ್ಯನನ್ನು ಕೆಲವೇ ಸೆಕೆಂಡುಗಳು ಮಾತ್ರ ವೀಕ್ಷಿಸಿ, ಪದೇ ಪದೇ ವೀಕ್ಷಿಸಬೇಡಿ

* ಕಣ್ಣುಗಳ ಕಾಯಿಲೆ ಇರುವವರು ಸೂರ್ಯನನ್ನು ನೋಡಲೇಬೇಡಿ

* ಹಾಳಾದ ಸೋಲಾರ್‌ ಫಿಲ್ಟರ್‌ಗಳು ಬಳಸಬೇಡಿ

* ಸೋಲಾರ್‌ ಫಿಲ್ಟರ್‌ಗಳನ್ನು ಮುಟ್ಟಬಾರದು ಮತ್ತು ಮಡಚಬಾರದು.

ಸಂಪರ್ಕ: 9972392736, 9886310706, 9980540747

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.