ಚಿತ್ರಕಲಾ ಪರಿಷತ್ತಿನಲ್ಲಿ ಅಕ್ಟೋಬರ್ 11ರಿಂದ ಆರಂಭವಾಗುವ ‘ಬೆಂಗಳೂರು ಉತ್ಸವ’ದಗ್ರಾಂಡ್ ಫ್ಲಿಯಾ ಮಾರ್ಕೆಟ್‌ನಲ್ಲಿ ದೀಪಾವಳಿಗಾಗಿ ದೀಪಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.
ಅಂಧಕಾರ ಹೋಗಲಾಡಿಸುವ ದೀಪಗಳಿಗೆ ವಿಶೇಷವಾದ ಅಲಂಕಾರ ಮಾಡಿ, ಬೆಳಕು ಹೊತ್ತಿಸುವ ಸಂಸ್ಕೃತಿ ದೇಶದ ಹಲವು ಭಾಗಗಳಲ್ಲಿದೆ. ಬೇರೆ ಬೇರೆ ರಾಜ್ಯದ ವಿವಿಧ ವಿನ್ಯಾಸದ ಹಣತೆಗಳನ್ನು ಒಂದೇ ಕಡೆ ಕೊಳ್ಳಲು ಸಿಕ್ಕರೆ ಗ್ರಾಹಕರ ಖುಷಿಗೆ ಪಾರವೇ ಇಲ್ಲ.
ಒಂದೊಂದು ರಾಜ್ಯದಲ್ಲೂ ಒಂದೊಂದು ರೀತಿಯ ಹಣತೆಗಳನ್ನು ಬೆಳಗಿಸುತ್ತಾರೆ. ಅವುಗಳಿಗೆ ಅಲಂಕಾರ ಮಾಡಲು ಬಳಸುವ ವಸ್ತುಗಳು ಕೂಡ ಬೇರೆ ಬೇರೆ. ಕೆಲವರು ನೈಸರ್ಗಿಕವಾಗಿ ಸಿಗುವ ಮಾವಿನ ಎಲೆ, ಹೂವುಗಳಿಂದ ಅಲಂಕಾರ ಮಾಡಿದರೆ, ಇನ್ನು ಕೆಲವರು ಹಣತೆಯ ಸುತ್ತ ಅಲಂಕಾರ ಮಾಡಲು ಮಾರುಕಟ್ಟೆಯಲ್ಲಿ ಸಿಗುವ ಆಲಂಕಾರಿಕ ವಸ್ತುಗಳನ್ನು ಬಳಸುತ್ತಾರೆ.
ದೀಪಾವಳಿಗಾಗಿ ವಿಶೇಷವಾಗಿ ತಯಾರಿಸಿದ ಕರಕುಶಲ ಮತ್ತು ಆಲಂಕಾರಿಕ ವಸ್ತುಗಳು ಲಭ್ಯ.ಕರಕುಶಲಕರ್ಮಿಗಳು ತಾವೇ ತಯಾರಿಸಿದ ಹಣತೆಗಳನ್ನು ಇಲ್ಲಿ ಮಾರಾಟ ಮಾಡುತ್ತಾರೆ. ಮಣ್ಣಿನ ಹಣತೆ, ಲೋಹದ ಹಣತೆ, ತರಹೇವಾರಿ ಲೈಟಿಂಗ್ ಬಳಸಿ ಮಾಡಿದ ದೀಪಗಳು ಇಲ್ಲಿನ ಆಕರ್ಷಣೆ.100ಕ್ಕೂ ಹೆಚ್ಚು ಅಂಗಡಿಗಳಿದ್ದು ಸೀರೆ, ಕುರ್ತಾ, ಆಭರಣ, ಮಕ್ಕಳ ಆಟಿಕೆ ಸಿಗುತ್ತವೆ.
ಸ್ಥಳ–ಕರ್ನಾಟಕ ಚಿತ್ರಕಲಾ ಪರಿಷತ್, ಶಿವಾನಂದ ಸರ್ಕಲ್ ಬಳಿ, ಅಕ್ಟೋಬರ್ 11ರಿಂದ 20ರವರೆಗೆ ಮೇಳ ನಡೆಯಲಿದೆ. ಸಮಯ: ಬೆಳಿಗ್ಗೆ 11ರಿಂದ ರಾತ್ರಿ 7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.