ರುಚಿ–ಶುಚಿ ಜೊತೆಗೆ ಪೌಷ್ಠಿಕಾಂಶಯುಕ್ತಆಹಾರ ಬಯಸುವವರಿಗೆಂದೇ ‘ಫುಡ್ ಆ್ಯಸ್ ಎ ಸರ್ವಿಸ್’ ಎಂಬ ಹೊಸ ಸೇವೆಯನ್ನು ‘ನ್ಯೂಟಿ’ ಬ್ರಾಂಡ್ ಪರಿಚಯಿಸುತ್ತಿದೆ.
ಕಳೆದ 6 ವರ್ಷಗಳಿಂದ ಆನ್‌ಲೈನ್‌ನಲ್ಲಿ ಫುಡ್ ಡೆಲಿವರಿ ಆ್ಯಪ್ ಮೂಲಕ ಆಹಾರ ವಿತರಿಸುತ್ತಿದ್ದ ನ್ಯೂಟಿ ಇನ್ನು ಮುಂದೆ ಬೇಕರಿ ಹಾಗೂ ಚಿಲ್ಲರೆ ಅಂಗಡಿ ಸೇರಿದಂತೆ ಆಫ್‌ಲೈನ್ ಮೂಲಕವೂ ಗ್ರಾಹಕರನ್ನು ತಲುಪುವ ಪ್ರಯತ್ನಕ್ಕೆ ಕೈ ಹಾಕಿದೆ.ಸದ್ಯನಗರದಲ್ಲಿ ಚಿಲ್ಲರೆ ವ್ಯಾಪಾರಿಗಳು ಸೇರಿ ಒಟ್ಟು 163 ಫುಡ್ ಪಾಯಿಂಟ್‌ಗಳನ್ನು ನ್ಯೂಟಿ ಹೊಂದಿದೆ.
ದೊಡ್ಡ ಹೋಟೆಲ್ ಜೊತೆ ಕೈಜೋಡಿಸುವ ಬದಲು ಚಿಲ್ಲರೆ ವ್ಯಾಪಾರಿಗಳ ಜೊತೆಗೂಡಿ ತನ್ನ ಕಾರ್ಯಕ್ಷೇತ್ರ ವಿಸ್ತರಿಸುವ ಪ್ರಯತ್ನ ಮಾಡಿದೆ. ಆಹಾರದ ಬೆಲೆಯೂ ಕಡಿಮೆ.ಬೇಕರಿಯಲ್ಲಿ ಸಿಗುವ ಬಿರಿಯಾನಿಗಳ ಆರಂಭಿಕ ಬೆಲೆ ₹50.ಕರ್ನಾಟಕ, ಬಂಗಾಳಿ, ಆಂಧ್ರ ಶೈಲಿಯ ಕರಾವಳಿಯ ಸಮುದ್ರ ಆಹಾರ ನ್ಯೂಟಿಯ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.