ಮಧುಮೇಹದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ತುಮಕೂರು ರಸ್ತೆಯ ಪ್ರಕ್ರಿಯಾ ಆಸ್ಪತ್ರೆ ಭಾನುವಾರ ಸೈಕ್ಲಥಾನ್ ಆಯೋಜಿಸಿತ್ತು.
ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ಸೈಕ್ಲಥಾನ್‍ಗೆ ಚಾಲನೆ ನೀಡಲಾಯಿತು. ವೈದ್ಯರು ಸೇರಿದಂತೆ 100 ಕ್ಕೂ ಹೆಚ್ಚು ಸೈಕ್ಲಿಸ್ಟ್‍ಗಳು ಭಾಗಿಯಾದರು. ಸೈಕಲ್ ತುಳಿಯಿರಿ, ಆರೋಗ್ಯ ಕಾಪಾಡಿಕೊಳ್ಳಿ' ಎಂದು ಘೋಷಣೆ ಕೂಗುತ್ತಾ ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹ ತಡೆಗಟ್ಟಬಹುದು ಎಂಬ ಸಂದೇಶ ಸಾರಿದರು. 8.5 ಕಿ.ಮೀ ಸಾಗಿದ ಬಳಿಕ ಆಸ್ಪತ್ರೆ ಬಳಿ ಸೈಕ್ಲಿಂಗ್ ಕೊನೆಗೊಂಡಿತು.
ಜಾಲಹಳ್ಳಿಯ ಪೊಲೀಸ್ ಅಧಿಕಾರಿ ಸುಧೀರ್ ಹಾಗೂ ಪೀಣ್ಯದ ಪೊಲೀಸ್ ಅಧಿಕಾರಿ ರವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ದಿನದಲ್ಲಿ 30ರಿಂದ 60 ನಿಮಿಷ ಸೈಕ್ಲಿಂಗ್ ಮಾಡಿದರೆ ಮಧುಮೇಹವನ್ನು ದೂರ ಇಡಬಹುದು. ಈಗಾಗಲೇ ಮಧುಮೇಹದಿಂದ ಬಳಲುತ್ತಿರುವವರಿಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದು ವೈದ್ಯರು ಹೇಳಿದರು.
ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. 2045ರ ಹೊತ್ತಿಗೆ ಭಾರತ ಮೊದಲನೇ ಸ್ಥಾನ ತಲುಪುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಸಿಇಒ ಡಾ.ಸಿ.ಶ್ರೀನಿವಾಸ್ಆ ತಂಕ ವ್ಯಕ್ತಪಡಿಸಿದರು.
ವೇಗದ ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹ ಬರುತ್ತಿದೆ. ಟೈಪ್ 2 ಮಧುಮೇಹಿ ರೋಗಿಗಳು ಹೆಚ್ಚುತ್ತಿದ್ದಾರೆ. ಇನ್ಸುಲಿನ್ ಕೊಡುವ ಹಂತಕ್ಕೆ ಬೇಗ ತಲುಪುತ್ತಾರೆ. ಬೊಜ್ಜು, ವ್ಯಾಯಾಮ ಇಲ್ಲದಿರುವುದು, ಸರಿಯಾದ ಆಹಾರ ಕ್ರಮ ಅನುಸರಿಸದೇ ಇರುವುದು ಇದಕ್ಕೆ ಕಾರಣ ಎಂದು ಡಾ. ಛಾಯಾ ಹಾಗೂ ಡಾ.ಸತೀಶ್ ರಮಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.