ADVERTISEMENT

ಆಹಾರ ಪ್ರಿಯರಿಗಾಗಿ ‘ಈಸೋಟಿರ’ ಆಹಾರೋತ್ಸವ

esotera food festival

ಪ್ರಫುಲ್ಲ
Published 15 ಡಿಸೆಂಬರ್ 2019, 19:45 IST
Last Updated 15 ಡಿಸೆಂಬರ್ 2019, 19:45 IST
ಸುಮಂಗಳಿ ಸೇವಾ ಆಶ್ರಮದ ಮಕ್ಕಳು
ಸುಮಂಗಳಿ ಸೇವಾ ಆಶ್ರಮದ ಮಕ್ಕಳು   

ವಸಂತನಗರದ ಕೊಡವ ಸಮಾಜ ಸಭಾಂಗಣದಲ್ಲಿಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಶನ್‌ ಆಫ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌, ‘ಈಸೋಟಿರ’ ಆಹಾರೋತ್ಸವವನ್ನು ಇತ್ತೀಚೆಗೆ ಆಯೋಜಿಸಿತ್ತು.

ಸುಮಂಗಳಿ ಸೇವಾ ಆಶ್ರಮದ ಪುಟಾಣಿಗಳು ಆಹಾರೋತ್ಸವದ ಮುಖ್ಯ ಆಕರ್ಷಣೆಯಾಗಿದ್ದರು. ಸಭಾಂಗಣದ ಒಳ ಹೊಕ್ಕುತ್ತಿದ್ದಂತೆ ದೇಸಿ, ಅಮೆರಿಕನ್‌, ಇಟಾಲಿಯನ್‌ ಸೇರಿದಂತೆ ವಿವಿಧ ಬಗೆಯ ಖಾದ್ಯಗಳದ್ದೇ ಘಮಲು. ಮಕ್ಕಳಿಂದ ಸಭಾಂಗಣದಲ್ಲಿ ಖುಷಿಯ ವಾತಾವರಣವಿತ್ತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಫ್‌ಐಸಿಸಿಐ ಎಫ್‌ಎಲ್‌ಓ ಸಂಸ್ಥೆಯ ಅಧ್ಯಕ್ಷೆ ಶ್ರುತಿ ಮಿತ್ತಲ್‌ ಆಗಮಿಸಿದ್ದರು. 100 ಬಡ ಮಕ್ಕಳಿಗೆ ರುಚಿ–ರುಚಿಯಾದ ಆಹಾರ ತಿನಿಸುವ ಮೂಲಕ, ಮಕ್ಕಳ ಮೊಗದಲ್ಲಿ ಮಂದಹಾಸ ಬೀರುವ ಪ್ರಯತ್ನವನ್ನು ಸಂಸ್ಥೆ ಮಾಡಿದೆ.ಆರ್‌.ಟಿ ನಗರದಲ್ಲಿರುವ ಸುಮಂಗಳಿ ಸೇವಾ ಆಶ್ರಮದ ಒಟ್ಟು 100 ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಸಂಸ್ಥೆ, ಮಕ್ಕಳು ಮತ್ತು ವೃದ್ಧರಿಗೆ ಹಲವು ವರ್ಷಗಳಿಂದ ಆಶ್ರಯ ನೀಡುತ್ತಿದೆ. ಇಲ್ಲಿನ ಮಕ್ಕಳು ಇವರದ್ಧೇ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ADVERTISEMENT

ಕಳೆದ 8 ವರ್ಷಗಳಿಂದಐಐಎಚ್‌ಎಂ ಸಂಸ್ಥೆ ಆಹಾರೋತ್ಸವವನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ ಆಹಾರೋತ್ಸವದಲ್ಲಿ ಇಟಾಲಿಯನ್, ಒರಿಯಂಟಲ್‌, ಫ್ರೆಂಚ್‌, ಅಮೆರಿಕನ್‌, ಥಾಯ್ಲೆಂಡ್‌, ದೇಸಿ ಮತ್ತು ಚೈನೀಸ್‌ ತ್ಯಾಜ್ಯಗಳು ಪ್ರಮುಖವಾಗಿದ್ದವು. ಇದರ ಜೊತೆಗೆ ಕಾಕ್‌ಟೇಲ್‌, ಮಾಕ್‌ಟೇಲ್‌ಗಳ ಕೌಂಟರ್‌ ಕೂಡ ಇದ್ದವು. ಹೋಟೆಲ್‌ ಮ್ಯಾನೆಂಜ್‌ಮೆಂಟ್‌ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಆಹಾರೋತ್ಸವದ ಪ್ರಮುಖ ರೂವಾರಿಗಳು. 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೊತೆಗೂಡಿ ‘ಈಸೋಟಿರ’ ಆಹಾರೋತ್ಸವವನ್ನು ಆಯೋಜಿಸಿದ್ದರು.

ಮಕ್ಕಳಿಗಾಗಿ ಫ್ಯಾಶನ್‌ ಷೋ, ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.‘ಕಸದಿಂದ ರಸ’ ಎಂಬ ವಿಚಾರವನ್ನು ಪ್ರಮುಖವಾಗಿ ಇರಿಸಿಕೊಂಡು, ಉಪಯೋಗಕ್ಕೆ ಬಾರದ ವಸ್ತುಗಳಿಂದ ‘ಈಸೋಟಿರ’ ಆಹಾರೋತ್ಸವವನ್ನು ಅಲಂಕರಿಸಲಾಗಿತ್ತು. ಆಹಾರೋತ್ಸವದಲ್ಲಿ ಸಿಗುವ ಒಟ್ಟು ಲಾಭದಲ್ಲಿ ಶೇಕಡಾ 25 ರಷ್ಟು ಹಣವನ್ನು ಅನಾಥಾಶ್ರಮಗಳಿಗೆ ನೀಡುವುದಾಗಿ ಸಂಸ್ಥೆ ತಿಳಿಸಿದೆ.

ಈಸೋಟಿರದಲ್ಲಿ ಥಾಯ್ಲೆಂಡ್‌ನ ಕೇಂಗ್‌ ಫೇಟ್‌ ಚಿಕನ್‌, ಫ್ರೆಂಚ್‌ನರಟಾಟೂಲ್, ಭಾರತದ ಅವಧಿ ಮುರ್ಗ್‌, ಮಂಗಳೂರು ಮೀನು ಸಾರು, ಚಟ್ಟಿನಾಡ್‌ ಚಿಕನ್‌, ಫಾಕಸ್ಸಿಯಾ, ಲಾವಾಶ್‌, ಕಲ್ಲಂಗಡಿ ಮತ್ತು ಲಿಚೀ ಮಾಕ್‌ಟೇಲ್‌, ಪಾಸ್ತಾ, ಕಪ್‌ಕೇಕ್‌, ಮಿಶ್ರಿ ಸೇರಿದಂತೆ ಹಲವು ಬಗೆಯ ಖಾದ್ಯಗಳಿದ್ದವು.

ಈಸೋಟಿರ ಆಹಾರೋತ್ಸವದ ಮೂಲಕ ಬಡ ಮಕ್ಕಳಿಗೆ ಆಹಾರ ಉಣಿಸುವ ಅವಕಾಶ ದೊರಕಿದೆ. ಈ ಮೂಲಕ ಪ್ರತಿಯೊಬ್ಬರನ್ನು ಆಹಾರದ ಸೈನಿಕ ಮಾಡಲು ನಾವು ಬಯಸುತ್ತೇವೆ. ಕೇವಲ ಒಂದು ಸಂಸ್ಥೆ ಮಾತ್ರವಲ್ಲ , ಇತರೆ ಸಂಘಟನೆಗಳು, ಜನರು ಹಸಿವು ನಿರ್ಮೂಲನೆಗೆ ತಮ್ಮ ಕೈಯಲ್ಲಾದ ಸಹಾಯವನ್ನು ಮಾಡಬೇಕು.

- ಸಂಚಾರಿ ಚೌಧರಿ, ಐಐಎಚ್‌ಎಂ ಸಂಸ್ಥೆ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.