ADVERTISEMENT

ನಿಸಾರ್ ಅಹಮದ್‌ಗೆ ‘ಕನ್ನಡ ರತ್ನ’

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 19:30 IST
Last Updated 31 ಅಕ್ಟೋಬರ್ 2019, 19:30 IST
ನಿಸಾರ್ ಅಹಮದ್
ನಿಸಾರ್ ಅಹಮದ್   

ಡಾ.ವಿಷ್ಣುಸೇನಾ ಸಮಿತಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೀಡುವ ಪ್ರಸಕ್ತ ಸಾಲಿನ ‘ಕನ್ನಡ ರತ್ನ’ ಪ್ರಶಸ್ತಿಗೆ ಹಿರಿಯ ಕವಿ ಕೆ.ಎಸ್.ನಿಸಾರ್ ಅಹಮದ್ ಭಾಜನರಾಗಿದ್ದಾರೆ. ಕನ್ನಡದ ಮೇರು ನಟ ಡಾ.ವಿಷ್ಣುವರ್ಧನ್‌ ನೆನಪಿನಲ್ಲಿ ಪ್ರತಿ ರಾಜ್ಯೋತ್ಸವದಂದು ಕನ್ನಡಿಗೊಬ್ಬರಿಗೆ ಈ ಪ್ರಶಸ್ತಿಯನ್ನು ಸಮಿತಿ ನೀಡುತ್ತಾ ಬಂದಿದೆ. ಈ ಪ್ರಶಸ್ತಿ ₹20 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಈವರೆಗೆ ಸಾಹಿತಿ ರಾ.ನಂ. ಚಂದ್ರಶೇಖರ್, ಕನ್ನಡಪರ ಹೋರಾಟಗಾರ ಶ್ರ.ದೇ.ಪಾರ್ಶ್ವನಾಥ್‌, ಕಸಾ‍‍ಪ ಕಾರ್ಯದರ್ಶಿ ವ.ಚ.ಚನ್ನೇಗೌಡ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮತ್ತು ಶರಣು ಬಿ.ಗದ್ದುಗೆ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಬಾರಿಯ 6ನೇ ಸಾಲಿನ ಪ್ರಶಸ್ತಿಗೆ ನಿತ್ಯೋತ್ಸವ ಕವಿ ನಿಸಾರ್‌ ಅಹಮದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ತಿಳಿಸಿದ್ದಾರೆ. ವಿಷ್ಣುವರ್ಧನ್ ಅವರ ನೆನಪಿನ ಪ್ರಶಸ್ತಿ ಸ್ವೀಕರಿಸಲು ಅತ್ಯಂತ ಹರ್ಷಪಡುತ್ತೇನೆ ಎಂದು ನಿಸಾರ್ ಅಹಮದ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ನ.16ರಂದು ಚಾಮರಾಜಪೇಟೆಯ ಶಾರದಾಸ್ತ್ರೀ ಸಮಾಜದಲ್ಲಿ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.