ADVERTISEMENT

ಜಯನಗರದಲ್ಲಿ ‘ಕಸದಿಂದ ರಸ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 19:45 IST
Last Updated 3 ನವೆಂಬರ್ 2019, 19:45 IST
ಬಾಂಧವ ಸಂಸ್ಥೆ ಜಯನಗರದಲ್ಲಿ ಹಮ್ಮಿಕೊಂಡ ‘ಕಸದಿಂದ ರಸ’ ಎಂಬ ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯ ರೆಡ್ಡಿ, ಪಾಲಿಕೆ ಸದಸ್ಯ ಎನ್‌. ನಾಗರಾಜ್‌ ಮತ್ತಿತರರು ಭಾಗವಹಿಸಿದ್ದರು
ಬಾಂಧವ ಸಂಸ್ಥೆ ಜಯನಗರದಲ್ಲಿ ಹಮ್ಮಿಕೊಂಡ ‘ಕಸದಿಂದ ರಸ’ ಎಂಬ ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯ ರೆಡ್ಡಿ, ಪಾಲಿಕೆ ಸದಸ್ಯ ಎನ್‌. ನಾಗರಾಜ್‌ ಮತ್ತಿತರರು ಭಾಗವಹಿಸಿದ್ದರು   

ಬಾಂಧವ ಸಂಸ್ಥೆ ಜಯನಗರದಲ್ಲಿ ‘ಕಸದಿಂದ ರಸ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಒಣ ಕಸ ಹಾಗೂ ಹಸಿ ಕಸವನ್ನು ವಿಂಗಡಿಸಿ ಅದನ್ನು ಗೊಬ್ಬರ ರೀತಿ ಸಂಸ್ಕರಿಸಿ ಪಾರ್ಕ್‌ ಗಿಡಗಳಿಗೆ ವಿತರಣೆ ಮಾಡುವ ಕಾರ್ಯಕ್ರಮ ಇದಾಗಿತ್ತು. ವಿನೂತನ ಡ್ರಮ್ ಹಾಗೂ ಬ್ಯಾಸ್ಕೆಟ್ ಮೂಲಕ ಈ ಕಾರ್ಯವನ್ನು ಕೈಗೊಳ್ಳಲಾಯಿತು.

ಜಯನಗರದ ಬೈರಸಂದ್ರ ವಾರ್ಡ್‌ನಲ್ಲಿ ಎಲ್ಐಸಿ ಕಾಲೊನಿಯ ಪಾರ್ಕ್‌ನಲ್ಲಿ ಗಿಡಗಳಿಂದ ಉದುರುವ ಹೂವು, ಎಲೆ, ಕಸ, ಕಡ್ಡಿಗಳನ್ನು ಸಂಸ್ಕರಿಸಿ ಅದೇ ಪಾರ್ಕ್‌ನ ಗಿಡಗಳಿಗೆ ಗೊಬ್ಬರವಾಗಿಸುವ ವಿನೂತನ ಕಾರ್ಯಕ್ರಮದಲ್ಲಿಜಯನಗರದ ಶಾಸಕಿ ಸೌಮ್ಯಾ ರೆಡ್ಡಿ, ಪಾಲಿಕೆ ಸದಸ್ಯ ಎನ್‌. ನಾಗರಾಜ್‌, ಸ್ಥಳೀಯರು,ಎಲ್ಐಸಿ ಕಾಲೊನಿಯ ನಿವಾಸಿಗಳು ಮತ್ತು ಬಾಂಧವ ಸಂಸ್ಥೆಯವರು ಪಾಲ್ಗೊಂಡಿದ್ದರು. .

‘ವಾರ್ಡ್‌ನ ಪ್ರತಿ ಮನೆಗಳಿಗೂ ಹಸಿರು ಮತ್ತು ಕೆಂಪು ಬಣ್ಣದ ದೊಡ್ಡ ಗಾತ್ರದ ಡ್ರಮ್‌ಗಳನ್ನು ವಿತರಣೆ ಮಾಡಲಾಗಿದೆ. ಹಸಿ ಹಾಗೂ ಒಣ ಕಸ ವಿಂಗಡಿಸಿ ಗೊಬ್ಬರವಾಗಿ ಪರಿವರ್ತಿಸುವ ಮತ್ತು ಆ ಗೊಬ್ಬರವನ್ನು ಪಾರ್ಕ್‌ನಲ್ಲೇ ಬಳಸುವಂತೆ ಮಾಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ಸ್ವಚ್ಛತೆ ಹಾಗೂ ಪಾರ್ಕ್‌ನ ಸಂರಕ್ಷಣೆಯೂ ಆಗುತ್ತದೆ’ ಎಂದು ಶಾಸಕಿ ಸೌಮ್ಯ ರೆಡ್ಡಿ ಹೇಳಿದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.