ಜೀವನದಲ್ಲಿ ಘಟಿಸುವ ಶುಭಗಳಿಗೆ ಮದುವೆ. ಅಂತೆಯೇ ಮನಗಳೆರಡರ ಪರಸ್ಪರ ಮಿಲನಕ್ಕೆ ಮುನ್ನುಡಿ ವಿವಾಹ ಸಂಭ್ರಮ. ಅದು ವಧು–ವರರ ಮಾಂತ್ರಿಕ ಲೋಕವೂ ಹೌದು. ಅದಕ್ಕಾಗಿ ಅದೆಷ್ಟೋ ಕನಸು, ತಯಾರಿಗಳಿರುತ್ತವೆ. ಇತ್ತೀಚಿನ ವಿವಾಹ ಸಂದರ್ಭಗಳು ಸ್ವರ್ಗವನ್ನು ಧರೆಗಿಳಿಸುವಂತಿರುತ್ತವೆ. ಅದಕ್ಕೆ ಪೂರ್ವ ತಯಾರಿಯಾಗಿ ಆಭರಣ, ವಸ್ತ್ರ, ಉಡುಗೊರೆಗಳ ಖರೀದಿಗೆಂದೇ ಒಂದಷ್ಟು ದಿನಗಳನ್ನು ಮೀಸಲಿಡಲಾಗುತ್ತದೆ. ಕೆಲವರಿಗೆ ಇವುಗಳ ಆಯ್ಕೆಯಲ್ಲಿ ಗೊಂದಲಗಳೂ ಇರಬಹುದು... ಪ್ರಸ್ತುತ ದಿನಗಳಲ್ಲಿನ ವಿವಾಹ ವಿನ್ಯಾಸದ ಕುರಿತು ಅಂತರರಾಷ್ಟ್ರೀಯ ಖ್ಯಾತಿಯ ಫಲ್ಗುಣಿಶೇನ್ ಪೀಕಾಕ್ ‘ಮೆಟ್ರೊ’ ಜೊತೆ ಮಾತನಾಡಿದರು.
ವೋಗ್ ವೆಡ್ಡಿಂಗ್ ಶೋ ಬಗ್ಗೆ ಹೇಳಿ..
ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಶ್ರೇಷ್ಠ ಫ್ಯಾಷನ್ ವಿನ್ಯಾಸಕರು ಮತ್ತು ಆಭರಣ ವ್ಯಾಪಾರಿಗಳನ್ನು ಒಂದೇ ಸೂರಿನಡಿ ಸೇರಿಸುವ ಅಪರೂಪದ ಕಾರ್ಯಕ್ರಮವೇ ವೋಗ್ ವೆಡ್ಡಿಂಗ್ ಶೋ.ಇದರ ಆರು ಆವೃತ್ತಿಗಳು ಆಯೋಜನೆಗೊಂಡು, ಮನ್ನಣೆ ಗಳಿಸಿವೆ. ಮೂರು ದಿನಗಳಏಳನೇ ಆವೃತ್ತಿಯ ವರ್ಣರಂಜಿತ ಶಾಪಿಂಗ್ ಮೇಳ ಆಗಸ್ಟ್ 2ರಂದು ನವದೆಹಲಿಯ ತಾಜ್ ಪ್ಯಾಲೇಸ್‍ನಲ್ಲಿ ಆರಂಭವಾಗಲಿದ್ದು, ಆಗಸ್ಟ್ 4ರಂದು ಮೇಳಕ್ಕೆ ತೆರೆ ಬೀಳಲಿದೆ.ನುರಿತ ವಿವಾಹ ಸಂಯೋಜಕರು, ಕೇಶ ವಿನ್ಯಾಸ ಮತ್ತು ಪ್ರಸಾದನ (ಮೇಕಪ್) ಕಲಾವಿದರು, ಅಲಂಕಾರ, ಉಡುಗೊರೆ ತಜ್ಞರು ಭಾಗವಹಿಸುತ್ತಾರೆ. ಆಯ್ದ ಕೆಲವೇ ಕೆಲವರಿಗೆ ಆಹ್ವಾನವಿರುವ ಇದರಲ್ಲಿಭಾರತದ ಪ್ರಖ್ಯಾತ ಫ್ಯಾಷನ್ ವಿನ್ಯಾಸಕಾರರ ಜೊತೆ ಸಮಾಲೋಚನೆ ನಡೆಸುವ ಹಾಗೂ ಶ್ರೇಷ್ಠ ವಿನ್ಯಾಸಗಳನ್ನು ಖರೀದಿಸುವ ಅವಕಾಶವಿದೆ.
ತಮ್ಮ (ಫಲ್ಗುಣಿ ಶೇನ್ ಪೀಕಾಕ್) ಬಗ್ಗೆ ಮಾಹಿತಿ ನೀಡುವಿರಾ?
ಡಿಸೈನರ್ ಜೋಡಿಯಾಗಿರುವ ನಾವು, ಉತ್ಕೃಷ್ಟ ಲೇಬಲ್‌ನ ಶಕ್ತಿಗಳೆಂದೇ ಗುರುತಿಸಿಕೊಂಡಿದ್ದೇವೆ. ಈ ಕ್ಷೇತ್ರದಲ್ಲಿ ಇದೇ ಆಗಸ್ಟ್‌ಗೆ 15 ವರ್ಷಗಳನ್ನು ಪೂರೈಸಲಿದ್ದೇವೆ. ಬಿಯಾನ್ಸೆ, ನಿಕಿ ಮಿನಾಜ್ ಮತ್ತು ಲೇಡಿ ಗಾಗಾ ರೀತಿಯ ಖ್ಯಾತನಾಮರ ವಸ್ತ್ರವಿನ್ಯಾಸ ಮಾಡಿದ ಖ್ಯಾತಿ ಫಲ್ಗುಣಿ ಶೇನ್ ಪೀಕಾಕ್ ಲೇಬಲ್‍ನದ್ದಾಗಿದೆ. ಈ ಜೋಡಿ ಮುಂಚೂಣಿಯಲ್ಲಿರುವ ‘ಬ್ರೈಡಲ್ ಕೌಚರ್ ಬ್ರಾಂಡ್’ ಎಂದೆನಿಸಿದೆ.
ಇತ್ತೀಚಿನ ವಿವಾಹ ಸಂಗ್ರಹದ ಕುರಿತು ಹೇಳಿ?
ಇದಕ್ಕೆ ಉತ್ತರವಾಗಿ ತಕ್ಷಣಕ್ಕೆ ಹೊಳೆಯುವುದು ಜೈಪುರ ಮತ್ತು ಪಿಂಕ್ ಸಿಟಿ ಸಂಗ್ರಹ. ನಮ್ಮ ಇತ್ತೀಚಿನ ಜೈಪುರ ಅರಮನೆ ಪ್ರವಾಸ, ನೆನಪಿನಲ್ಲುಳಿಯುವ ಮಹತ್ವದ ಅಂಶಗಳನ್ನು ನೀಡಿದೆ. ಅರಮನೆಯ ವಾಸ್ತುಶಿಲ್ಪ ಶೈಲಿ, ಅತ್ಯದ್ಭುತ ಕಮಾನುಗಳು, ಶ್ರೇಷ್ಠ ಕೆತ್ತನೆಗಳು, ವರ್ಣರಂಜಿತ ಚಿತ್ತಾರಗಳು ಮನ ಸೆಳೆಯುವಂತಹವು. ಇವೆಲ್ಲವುಗಳ ಪ್ರಭಾವವೇ ಇತ್ತೀಚಿನ ವೈವಾಹಿಕ ಸಂಗ್ರಹ. ಪ್ರಾಚೀನ ವೈಭವವನ್ನು ಒಳಗೊಂಡ ಆಧುನಿಕ ಶೈಲಿಗಳು, ಸ್ಟೆಲ್ಲರ್ ಲೆಹೆಂಗಾಗಳು, ಅತ್ಯಾಕರ್ಷಕ ಗೌನ್‍ಗಳು, ಅಸಮ ಎಳೆಗಳಿಂದತಯಾರಿಸಲ್ಪಟ್ಟ ಲಾಂಗ್ ಸ್ವೀಪಿಂಗ್ ಟ್ರೇಲ್‍ಗಳು ಮದುವೆ ವಸ್ತ್ರಗಳಿಗೆ ಅದ್ಭುತ ಆಕರ್ಷಣೆ ನೀಡುತ್ತವೆ. ಸ್ಪಾನಿಶ್ ವೆನಿಲ್ಲ, ಲ್ಯಾವೆಂಡರ್ ಫಾಂಗ್, ಸ್ಮೋಕಿ ಗ್ರೀನ್, ಪೆವ್ಟರ್, ಬ್ಯಾಲೆಟ್ ಪಿಂಕ್, ಪ್ರಿಸ್ಮ್ ಸಿಲ್ವರ್, ಸ್ಕಲ್ಲೋಪ್ ಶೆಲ್, ಟುಸ್ಕನ್ ಗೋಲ್ಡ್ ಮತ್ತು ಮಿಡ್‍ನೈಟ್ ಬ್ಲೂ ರೀತಿಯ ಬಣ್ಣಗಳು ಸಂಗ್ರಹದ ಅಂದ ಹೆಚ್ಚಿಸಿವೆ.
ನಿಮ್ಮ ಸಂಗ್ರಹದಲ್ಲಿರುವ ವಿಶಿಷ್ಟ ವಿನ್ಯಾಸದ ಬಗ್ಗೆ ಮಾಹಿತಿ ನೀಡಿ?
ಮಿಡ್‍ನೈಟ್ ಬ್ಲೂ (ಮಧ್ಯರಾತ್ರಿ ನೀಲಿ) ಬಣ್ಣದ, ಪೂರ್ಣ ಪ್ರಮಾಣದಲ್ಲಿ ಅಲಂಕರಿಸಲ್ಪಟ್ಟ, ಗ್ರೇ ಮತ್ತು ರೆಡ್ ಅಸ್ಸೆಟ್‍ಗಳನ್ನು ಒಳಗೊಂಡ ಲೆಹೆಂಗಾ, ಅದಕ್ಕೊಪ್ಪುವ ರಿಸ್ಕ್ಯೂ ಕಟ್-ಔಟ್ ಬ್ಲೌಸ್ ವಿನ್ಯಾಸ ವಿಶೇಷ ಪ್ರಕಾರದ್ದಾಗಿದ್ದು ಇತ್ತೀಚೆಗೆ ಎಲ್ಲರು ಇಷ್ಟಪಡುವ ಸಂಗ್ರಹವಾಗಿದೆ. ಮಾತ್ರವಲ್ಲನಮ್ಮ ಸಂಗ್ರಹದಲ್ಲಿ ವಿಭಿನ್ನವಾಗಿ ಕಾಣುವ ಮತ್ತೊಂದು ಲೆಹೆಂಗಾ ಇದೆ. ಅದು ಮೆಟಾಲಿಕಲಿ (ಲೋಹೀಯವಾಗಿ) ಅಲಂಕಾರಗೊಂಡಿರುವ ಕೌಚ್ ಪೀಸ್ ಆಗಿದ್ದು, ಸೀಕ್ವಿನ್ಸ್, ಸಣ್ಣಸಣ್ಣ ಕನ್ನಡಿ ಮತ್ತು ಕ್ರಿಸ್ಟಲ್‍ಗಳಿಂದ ಅಲಂಕೃತಗೊಂಡಿದೆ. ಇದರಲ್ಲಿ ಎಲ್ಲೂ ಕೂಡ ಫ್ಯಾಬ್ರಿಕ್ ಸ್ಪೇಸ್ ಇಲ್ಲ. ಬ್ಲೌಸ್ ಸೂಕ್ಷ್ಮ ಕಸೂತಿಯಿಂದ ಕೂಡಿದ್ದು ಮನಸೆಳೆಯುವಂತಿದೆ.
ನಿಮ್ಮ ಪ್ರಕಾರ ಐಡಿಯಲ್ ವಧು (ಬ್ರೈಡ್) ಎಂದರೆ ಯಾರು?
ಪ್ರಬಲ ಅಸ್ಮಿತೆ, ಅಸ್ತಿತ್ವ, ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುವ ಆಧುನಿಕ ಭಾರತೀಯ ವಧುವೇ ನಮ್ಮ‘ಐಡಿಯಲ್ ಬ್ರೈಡ್’. ಇಂದಿನ ವಧುಗಳು ನಿಖರ ಆಯ್ಕೆ ಹೊಂದಿರುವುದಷ್ಟೇ ಅಲ್ಲದೆ, ಟ್ರೆಂಡ್‍ಗಳ ಬಗ್ಗೆ ಜ್ಞಾನ ಹೊಂದಿರುತ್ತಾರೆ. ಇದು ಅವರ ಜೀವನದ ಮಹತ್ವದ ದಿನವಾದ ವಿವಾಹದಂದು ತಾವು ಏನನ್ನು ಧರಿಸಬೇಕು, ಹೇಗೆ ಕಾಣಬೇಕೆಂಬ ಬಗ್ಗೆ ಸ್ಪಷ್ಟತೆ ಹೊಂದಲು ನೆರವಾಗುತ್ತದೆ. ವಧುಗಳಿಗೆ ಆಧುನಿಕ ಶೈಲಿ ಹೆಚ್ಚು ಇಷ್ಟ. ಉದಾಹರಣೆಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ, ತಮ್ಮ ವಿವಾಹದ ರಿಸೆಪ್ಷನ್‌ನಲ್ಲಿಫಲ್ಗುಣಿ ಶೇನ್ ಪೀಕಾಕ್ ವಿನ್ಯಾಸದ ಕ್ರಿಸ್ಟಲ್ ಕ್ಯಾಸ್ಕೇಡಿಂಗ್, ಬಿಸ್ಕೊಟ್ಟಿ ಹುಡ್ ಲೆಹೆಂಗಾ ಧರಿಸಿದ್ದರು. ಇತ್ತೀಚೆಗೆ ಡಬಲ್ ದುಪಟ್ಟಾ ಡ್ರಾಪ್ ವಧುಗಳ ವಿಶಿಷ್ಟ ಆಯ್ಕೆಯಾಗಿದ್ದು, ಪ್ರಿಯಾಂಕಾ ಚೋಪ್ರಾ ಅದನ್ನು ಸಲೀಸಾಗಿ ಧರಿಸಿದ್ದರಲ್ಲದೆ, ಅದು ಆರಾಮದಾಯಕವಾಗಿತ್ತು.
ಭಾರತೀಯ ವಧು-ವರರ ಇತ್ತೀಚಿನ ಟ್ರೆಂಡ್‍ಗಳು ಯಾವುವು?
ಸೆಲೆಬ್ರಿಟಿ ವಿವಾಹಗಳು ಸದ್ದು ಮಾಡುತ್ತಿರುವ ಈ ದಿನಗಳಲ್ಲಿ ಸೆಲೆಬ್ರಿಟಿ ವಧುಗಳೇ ಹೊಸ ಟ್ರೆಂಡ್‍ಗಳನ್ನು ಸೃಷ್ಟಿಸುತ್ತಿದ್ದು, ಸಂಪ್ರದಾಯಗಳನ್ನು ತಮ್ಮದೇ ಆದ ಆಧುನಿಕ ವಿಧಾನದಲ್ಲಿ ಬಳಸುವ ಮೂಲಕ ಅಧಿಕೃತ, ಆಕರ್ಷಕ ಶೈಲಿ ವಿನ್ಯಾಸಗೊಳಿಸಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ಪ್ರಿಯಾಂಕ ಚೋಪ್ರಾ. ಇಂದಿನ ವಧುವಿನ ಆಯ್ಕೆ ವಿಶಿಷ್ಟವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಸೀಸನ್‍ನ ಬ್ರೈಡಲ್ ಕಲರ್ ಯಾವುದು?
ನೀಲಿ ಬಣ್ಣ, ಸಾಂಪ್ರದಾಯಿಕ ಕೆಂಪು, ಗುಲಾಬಿ ಬಣ್ಣ ಮತ್ತು ಪ್ಯಾರಿಸಿಯನ್ ಪ್ಯಾಲೆಟ್‍ನಿಂದ ಪಾಸ್ಟೆಲ್ಸ್, ಶಾಂಪೇನ್, ಬೆಳ್ಳಿ, ಗೋಲ್ಡ್ಬಣ್ಣಗಳು ಇಂದಿನ ವಧುವಿನ ಪ್ರಮುಖ ಆಯ್ಕೆಯಾಗಿರುತ್ತವೆ.
ಮುಂಬರುವ ವಿವಾಹದ ಋತುವಿನಲ್ಲಿ ಯಾವ ಟ್ರೆಂಡ್?
ಪ್ರಸ್ತುತ ಸಂದರ್ಭದಲ್ಲಿ ಹೊಸ ಸಿಲ್ಹೋಟೀಸ್, ಕಲರ್ ಪ್ಯಾಲೆಟ್‍ಗಳನ್ನು ವಧುಗಳು ಎದುರು ನೋಡುತ್ತಿದ್ದು, ತಮ್ಮ ವಿವಾಹ ಸಮಾರಂಭವನ್ನು ಸಂಭ್ರಮಿಸುತ್ತಿದ್ದಾರೆ. ಕ್ರಿಯಾತ್ಮಕವಾಗಿರುವ ಜೊತೆಗೆ ವರ್ಣರಂಜಿತವೆನಿಸುವ ಸಿಲ್ಹೋಟೀಸ್ ಆಧುನಿಕ ವಧುವಿನ ಆದ್ಯತೆಯಾಗಿದೆ. ಬಹುತೇಕ ವಧುಗಳು ಸಾಂಪ್ರದಾಯಿಕ ಮಾರ್ಗಕ್ಕಿಂತ ಪ್ರಯೋಗಾತ್ಮಕ ವಿನ್ಯಾಸಗಳನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದು, ಸಾಕಷ್ಟು ಕಾರ್ಸೆಟ್ ಮತ್ತು ಕ್ರಾಪ್ಡ್ ಬ್ಲೌಸ್‍ಗಳನ್ನು ಸ್ಯಾರಿ-ಗೌನ್‍ಗಳ ಜೊತೆ ಈ ಸೀಸನ್‍ನಲ್ಲಿ ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.