ತಬಲಾದಲ್ಲಿ ಅಪ್ರತಿಮ ಸಾಧನೆ ತೋರಿದ ಹಿರಿಯ ಕಲಾವಿದ ಪಂ. ರವೀಂದ್ರ ಯಾವಗಲ್. ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಈಗಾಗಲೇ ಭಾಜನರಾಗಿರುವ ರವೀಂದ್ರ ಯಾವಗಲ್ ಅವರಿಗೆ ಹಿರಿಯ ಸಂಗೀತ ವಿದ್ವಾಂಸ ಪಂ. ಗುರುರಾವ್ ದೇಶಪಾಂಡೆ ಸವಿನೆನಪಿನಲ್ಲಿ ನೀಡುವ ‘ಗುರುಗಂಧರ್ವ ರಾಷ್ಟ್ರೀಯ ಪ್ರಶಸ್ತಿ’ಯ ಗರಿ.
ಹಿಂದೂಸ್ತಾನಿ ಸಂಗೀತದ ವಿದ್ವಾಂಸ ಪಂ. ವಿನಾಯಕ ತೊರವಿ ಅವರು ತಮ್ಮ ಗುರುಗಳ ಹೆಸರಿನಲ್ಲಿ ಸ್ಥಾಪಿಸಿದ ‘ಗುರು ಗಂಧರ್ವ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾರ್ಚ್ 2ರಂದು ಎನ್.ಆರ್. ಕಾಲೊನಿ ರಾಮಮಂದಿರದಲ್ಲಿ ರಾತ್ರಿ 9 ಗಂಟೆಯಿಂದ ನಡೆಯಲಿರುವ ಅಹೋರಾತ್ರಿ ಸಂಗೀತೋತ್ಸವದಲ್ಲಿ ಯಾವಗಲ್ ಅವರಿಗೆ ಪ್ರದಾನವಾಗಲಿದೆ.
ಅಹೋರಾತ್ರಿ ಸಂಗೀತ ಕಾರ್ಯಕ್ರಮ: ಪಂಡಿತ್ ರವೀಂದ್ರ ಯಾವಗಲ್ ‘ಗುರುಗಂಧರ್ವ ಪ್ರಶಸ್ತಿ ಪ್ರದಾನ’. ಅತಿಥಿಗಳು– ಯತಿರಾಜ ಜೀಯರ್ ಸ್ವಾಮೀಜಿ, ಡಿ. ವಿಜಯ ಕುಮಾರ್, ಪಿ.ಎಚ್. ರಾಜಕುಮಾರ್. ಆಯೋಜನೆ– ಗುರುರಾವ್ ದೇಶಪಾಂಡೆ ಸಂಗೀತ ಸಭಾ. ಸ್ಥಳ– ಪತಿ ಸಭಾಂಗಣ, ರಾಮಮಂದಿರ, ಎನ್.ಆರ್. ಕಾಲೊನಿ ಬಸ್ ನಿಲ್ದಾಣದ ಬಳಿ, ಬಸವನಗುಡಿ. ರಾತ್ರಿ 9. ಪ್ರವೇಶ ಉಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.