ADVERTISEMENT

‘ನಮ್ಮ ಕುಡ್ಲ' : ‘ಆ್ಯಪ್‌' ಮೂಲಕ ಮನೆಗೆ ಆಹಾರ !

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 12:46 IST
Last Updated 5 ಜುಲೈ 2020, 12:46 IST
ನಮ್ಮ ಕುಡ್ಲ
ನಮ್ಮ ಕುಡ್ಲ   

ಬೆಂಗಳೂರಲ್ಲಿರುವ ಮಂಗಳೂರಿಗರಿಗೆ, ತಮ್ಮೂರಿನ ಸಾಂಪ್ರದಾಯಿಕ ಆಹಾರ ಸವಿಯಲು ಬಹಳ ಇಷ್ಟ. ಕೊಂಕಣಿಯವರಿಗೆ ತಮ್ಮೂರಿನ ತಿನಿಸುಗಳನ್ನು ತಿನ್ನಲು ಎಷ್ಟ. ಇಷ್ಟೆಲ್ಲ ಇಷ್ಟವಿದ್ದರೂ, ಹೊರಗಡೆ ಈ ಕೊರೊನಾ ಭಯದಿಂದ ಹೊರಡೆ ಎಲ್ಲೂ ಹೋಗೋಕೆ ಆಗುತ್ತಿಲ್ಲ. ಏನ್ಮಾಡೋದು?

ಚಿಂತೆ ಮಾಡಬೇಡಿ. ನಿಮ್ಮಂತಹ ‘ಆಹಾರ ಪ್ರಿಯರಿಗಾಗಿ‘ ಮಂಗಳೂರು ಹಾಗೂ ಕೊಂಕಣಿ ತಿನಿಸುಗಳನ್ನು (ಆಮ್ಚಿ ಫುಡ್‌) ಮನೆಬಾಗಿಲಿಗೆ ಪೂರೈಸಲೆಂದೇ ‘ನಮ್ಮ ಕುಡ್ಲ‘ ರೆಸ್ಟೊರೆಂಟ್‌ನವರು ‘ನಮ್ಮ ಕುಡ್ಲ‘ ಎಂಬ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದಾರೆ. ಈ ಆಪ್ ಮೂಲಕ, ನಿಮಗೆ ಬೇಕಾದ ಆಹಾರ ಆರ್ಡ್‌ ಮಾಡಿದರೆ, ನಿಮ್ಮ ನೆಚ್ಚಿನ ತಿನಿಸುಗಳನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು.

ಆ್ಯಪ್ ‌ಡೌನ್‌ಲೋಡ್ ಮಾಡಿ

ADVERTISEMENT

ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಅನೇಕರಿಗೆ ಮನೆಯಿಂದ ಹೊರಗಡೆ ಬರಲು ಆತಂಕ. ಆದರೆ, ರುಚಿ ರುಚಿಯಾದ ಆಹಾರ ತಿನ್ನಬೇಕೆಂಬ ಬಯಕೆ. ಅಂಥವರು,ಮೊಬೈಲ್‌ನಲ್ಲಿ ಪ್ಲೇಸ್ಟೋರ್‌ಗೆ ಹೋಗಿ, ಆ್ಯಪ್‌ ಡೌನ್‌ಲೋಡ್‌ ಮಾಡಿ. ಮೆನು ಓಪನ್ ಮಾಡಿ. ಅದರಲ್ಲಿ ತಿಂಡಿ– ತಿನಿಸುಗಳ ಪಟ್ಟಿ ಇದೆ. ನಿಮಗೆ ಯಾವುದು ಇಷ್ಟವೋ ಅದನ್ನು ಸೆಲೆಕ್ಟ್ ಮಾಡಿ, ಆರ್ಡರ್‌ ಮಾಡಿ. ಸುರಕ್ಷಿತ ಹಾಗೂ ಶುಚಿತ್ವದ ಪೊಟ್ಟಣದೊಂದಿಗೆ, ಶೀಘ್ರವಾಗಿ ನಿಮ್ಮ ಮನೆ ಬಾಗಿಲಿಗೆ ರುಚಿ–ಶುಚಿಯಾದ ಆಹಾರ ತಲುಪುತ್ತದೆ.

‘ಬ್ರೇಕ್ ಫಾಸ್ಟ್, ಊಟ, ಇತರೆ ತಿಂಡಿ ತಿನಿಸುಗಳ ತರಹೇವಾರಿ ಮೆನು ನಮ್ಮ ಆಪ್ ನಲ್ಲಿ ಲಭ್ಯವಿದೆ. ನಗರದ ದೂರ ಸ್ಥಳಗಳಿಂದ ಡ್ರೈವ್ ಮಾಡಬೇಕಾದ ತೊಂದರೆ ನಿಮಗಿಲ್ಲ. ಮನೆಯಲ್ಲಿಯೇ ಕುಳಿತು ಆರ್ಡರ್ ಮಾಡಿ, ಚಿಂತೆ ಬಿಡಿ. ಸಮಯಕ್ಕೆ ಸರಿಯಾಗಿ ನಿಮ್ಮ ಆಹಾರ ನಿಮಗೆ ತಲುಪಿಸುತ್ತೇವೆ‘ ಎನ್ನುತ್ತಾರೆ ‘ನಮ್ಮ ಕುಡ್ಲ‘ ಹೋಟೆಲ್‌ನವರು.

ನಿಮಗೆ ಸಾಧ್ಯವಾಗುತ್ತದೆ ಎನ್ನುವುದಾದರೆ, ಬೆಂಗಳೂರಿನ ಮಲ್ಲೇಶ್ವರದ 8ನೇ ಕ್ರಾಸ್‌ನ ಟೆಂಪಲ್‌ರಸ್ತೆಯಲ್ಲಿರುವ ‘ನಮ್ಮಕುಡ್ಲ‘ ರೆಸ್ಟೊರೆಂಟ್‌ಗೂ ಭೇಟಿ ನೀಡಬಹುದು. ಅಲ್ಲೇ ಶುಚಿಯಾದ ವಾತಾವರಣದಲ್ಲಿ ಕುಳಿತು ರುಚಿರುಚಿಯಾದ ಆಹಾರ ಸೇವಿಸಬಹುದು. ಬೇಡವಾದರೆ, ಪಾರ್ಸೆಲ್ ತೆಗೆದುಕೊಂಡು ಹೋಗಿ ಮನೆಯಲ್ಲೂ ನಿಮ್ಮ ಪ್ರೀತಿಯ ‘ಆಮ್ಚಿ‘ ಆಹಾರದ ರುಚಿ ಸವಿಯಬಹುದು.

ಏನೆಲ್ಲ ಸಿಗುತ್ತೆ ಗೊತ್ತಾ ?
ಶುದ್ಧ ಸಸ್ಯಹಾರಿ ಮಂಗಳೂರು–ಕೊಂಕಣಿಶೈಲಿಯ ಆಹಾರ ತಾಣವಾದ ‘ನಮ್ಮ ಕುಡ್ಲ‘ – ಹೋಟೆಲ್‌ನಲ್ಲಿ ಒತ್ತು ಶ್ಯಾವಿಗೆ, ಉಂಡಿ, ಕೊಟ್ಟೆ, ಮೂಡೆ, ಪತ್ರೊಡೆ, ಹಲಸಿನ ಹಣ್ಣಿನ ಮುಳ್ಕ, ಮುಂತಾದ ಸೀಸನಲ್ ತಿನಿಸುಗಳು ಲಭ್ಯ. ಅಷ್ಟೇ ಅಲ್ಲ, ನೀರು ದೋಸೆ, ಗೋಳಿಬಜೆ, ಮಂಗಳೂರು ಬನ್ಸ್, ಮಸಾಲೆ ದೋಸೆ ಮುಂತಾದ ರುಚಿ ರುಚಿಯಾದ ಮಂಗಳೂರು ತಿನಿಸುಗಳೂ ಇರುತ್ತವೆ. ಇವೆಲ್ಲವನ್ನೂ ಆ್ಯಪ್‌ ಮೂಲಕವೇ ಆರ್ಡರ್‌ ಮಾಡಿ ತರಿಸಿಕೊಳ್ಳಬಹುದು. ಸಂಪರ್ಕಕ್ಕೆ: 9148275177, nammakudla.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.