ADVERTISEMENT

6 ರಿಂದ ಶ್ರೀರಾಮನವಮಿ ಉತ್ಸವ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 20:00 IST
Last Updated 2 ಏಪ್ರಿಲ್ 2019, 20:00 IST
ಮಾನಸಿ ಪ್ರಸಾದ್
ಮಾನಸಿ ಪ್ರಸಾದ್   

ವೈಯಾಲಿಕಾವಲ್‌ನ 9ನೇ ಮುಖ್ಯರಸ್ತೆಯಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಏಪ್ರಿಲ್ 6 ರಿಂದ 20ರವರೆಗೆ 53ನೇ ಶ್ರೀರಾಮನವಮಿ ಉತ್ಸವ ನಡೆಯಲಿದೆ.

ಉತ್ಸವದ ದಿನಗಳಂದು ಪ್ರತಿದಿನ ಬೆಳಿಗ್ಗೆ ಸೂರ್ಯ ನಮಸ್ಕಾರ, ನವಗ್ರಹ ಜಪ, ಸುಂದರ ಕಾಂಡ ಪಾರಾಯಣ ನಡೆಯಲಿದೆ. ಏ. 6ರಂದು ಹೊಸ ವರ್ಷದ ಪಂಚಾಂಗ ಶ್ರವಣ, 12ರಂದು ಸೀತಾ ಕಲ್ಯಾಣ, 13ರಂದು ಶ್ರೀರಾಮನವಮಿ ಪ್ರಯುಕ್ತ ವಿಶೇಷ ಅಲಂಕಾರ, ಸಹಸ್ರನಾಮಾರ್ಚನೆ, ಸಂಜೆ ಪ್ರಮುಖ ಬೀದಿಗಳಲ್ಲಿ ರಥೋತ್ಸವ, 14 ರಂದು ಅನ್ನದಾನ, 15ರಂದು ಶಯನೂತ್ಸವ, 16 ರಂದು ವಿಶ್ವರೂಪ ದರ್ಶನ, ವಸಂತೋತ್ಸವ, 18 ರಂದು ಶ್ರೀರಾಮ ಪಟ್ಟಾಭಿಷೇಕ, 19 ರಂದು ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ರಾಮನವಮಿ ಉತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳಲ್ಲದೇ ಸಾಂಸ್ಖೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ADVERTISEMENT

ಏಪ್ರಿಲ್ 6 ರಿಂದ 20ರವರೆಗೆ ಕ್ರಮವಾಗಿ ಪ್ರತಿದಿನ ಸಂಜೆ 6.45ಕ್ಕೆ ವಿಷ್ಣು ವೆಂಕಟೇಶ್ (ಮ್ಯಾಂಡೋಲಿನ್), ಚೆನ್ನೈನ ಅಶ್ವತ್ಥ್ ನಾರಾಯಣ (ಹಾಡುಗಾರಿಕೆ), ಹಂಸಿನಿ ನಾಗೇಂದ್ರ (ಹಾಡುಗಾರಿಕೆ), ಚೆನ್ನೈನ ಮಹತಿ (ಹಾಡುಗಾರಿಕೆ), ಬೆಂಗಳೂರು ಸಹೋದರರಾದ ಹರಿಹರನ್-ಅಶೋಕ್ (ಹಾಡುಗಾರಿಕೆ), ಸಿ.ಎನ್. ಚಂದ್ರಶೇಖರ್–ಸಿ.ಎನ್. ತ್ಯಾಗರಾಜನ್ ಸಹೋದರರಿಂದ (ದ್ವಂದ್ವ ಪಿಟೀಲು ವಾದನ), ಅಂಬಿಕಾ ದತ್- ಕಲಾಧರಿ ಭವಾನಿ-ಕಲಾಂಬಿಕ (ಹಾಡುಗಾರಿಕೆ), ಬೇಲೂರು ರಾಮಮೂರ್ತಿ ಮತ್ತು ಸಂಗಡಿಗರಿಂದ (ಹಾಸ್ಯ-ವಿಚಾರ-ವಿನೋದ), ಮಾನಸಿ ಪ್ರಸಾದ್ (ಹಾಡುಗಾರಿಕೆ), ವಿವೇಕ್ ಸದಾಶಿವಂ (ಹಾಡುಗಾರಿಕೆ), ಸುಕನ್ಯಾ ಪ್ರಭಾಕರ್ (ಹಾಡುಗಾರಿಕೆ), ಬೆಂಗಳೂರು ಎನ್. ನಿಶಾಂತ್ (ಹಾಡುಗಾರಿಕೆ), ಅಭಿಜಿತ್ ಶೆಣೈ (ಹಿಂದೂಸ್ತಾನಿ ಸಂಗೀತ), ದಿವ್ಯಾ ಗಿರಿಧರ್ (ಸುಗಮ ಸಂಗೀತ),‌ ಅಂಜಲಿ ಅಟ್ಟಾವರ (ಭರತನಾಟ್ಯ) ಆಯೋಜಿಸಲಾಗಿದೆ ಎಂದು ಶ್ರೀರಾಮ ದೇವಸ್ಥಾನ ಸಂಸ್ಥೆಯ ಅಧ್ಯಕ್ಷ ಭಾಷ್ಯಂ ಚಕ್ರವರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ:ದೇಸಾಯಿ ಸುಧೀಂದ್ರ, 99804 00535

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.