ADVERTISEMENT

ಚಿತ್ತ ಕದಿಯುವ ರಾಂಬೋ ಸರ್ಕಸ್‌

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 23:58 IST
Last Updated 27 ಸೆಪ್ಟೆಂಬರ್ 2024, 23:58 IST
<div class="paragraphs"><p>ರಾಂಬೋ ಸರ್ಕಸ್‌</p></div>

ರಾಂಬೋ ಸರ್ಕಸ್‌

   

ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿಗೆ ಜಗತ್ತಿನಾದ್ಯಂತ ಅತಿ ದುಬಾರಿ ಬೆಲೆ ತೆತ್ತದ್ದು ಪ್ರದರ್ಶನ ಕಲಾವಿದರು. ಕೋವಿಡ್ ಲಾಕ್ ಡೌನ್ ಹಾಗು ಬಿಗಿ ನಿಯಮಗಳ ಕಾರಣದಿಂದಾಗಿ ಪ್ರದರ್ಶನಗಳು ನಡೆಯದೆ ಸಾವಿರಾರು ಕಲಾವಿದರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ.  ಸರ್ಕಸ್ ಕಲಾವಿದರು ಮತ್ತು ಕಂಪನಿಗಳು ಇದಕ್ಕೆ ಹೊರತಾಗಿಲ್ಲ. 

 ರಾಂಬೋ ಸರ್ಕಸ್ ಈ ಬಿಕ್ಕಟ್ಟಿನ ಸವಾಲನ್ನು ಯಶಸ್ವಿಯಾಗಿ ಎದುರಿಸಿ, ಈಗ ಮತ್ತೆ ಪ್ರದರ್ಶನ ನೀಡಲು ಆರಂಭಿಸಿದೆ.  

ADVERTISEMENT

ಕೆಂಗೇರಿ ಬಸ್ ನಿಲ್ದಾಣ ಹತ್ತಿರ, ಮೆಟ್ರೊ ಸ್ಟೇಷನ್, ಮೈಸೂರು ರಸ್ತೆ, ಕೆಂಗೇರಿಯಲ್ಲಿ ಸಾಂಪ್ರದಾಯಿಕ ಸರ್ಕಸ್ ಕೌಶಲ ಮತ್ತು ಸಾಹಸಗಳ ಪರಿಚಯವಿಲ್ಲದ ಹೊಸ ಪೀಳಿಗೆಯ ಮಕ್ಕಳಿಗೆ ಹಾಗೂ ಯುವಜನರಿಗೆ ಸೇರಿ ಸರ್ಕಸ್ ಪ್ರೇಮಿಗಳಿಗೆ ಕಲಾವಿದರು ಸರ್ಕಸ್ ರಸದೌತಣ ಬಡಿಸಲಿದ್ದಾರೆ.

ಆನ್‌ಲೈನ್‌ ಸರ್ಕಸ್‌ ಪ್ರದರ್ಶನಗಳು, ಜೂಮ್‌ ಹಾಗೂ ಯೂಟ್ಯೂಬ್‌ನಂಥ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿಶೇಷ ಪ್ರದರ್ಶನ ನೀಡಲಾಗಿದೆ. ಸರ್ಕಸ್‌ ಪ್ರೇಮಿಗಳ ಮನಸೂರೆಗೊಳ್ಳಲು ಸಿದ್ಧರಾಗಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಮಾಲೀಕ ಸುಜಿತ್‌ ದಿಲೀಪ್. 

ಈ  ಪ್ರದರ್ಶನದಲ್ಲಿ ಸುಮಾರು 60 ಕಲಾವಿದರು ಸುಮಾರು 120 ನಿಮಿಷಗಳ ಅವಧಿಯಲ್ಲಿ ಪ್ರೇಕ್ಷಕರನ್ನು  ಮಂತ್ರಮುಗ್ದಗೊಳಿಸುವ ಪ್ರದರ್ಶನ ನೀಡುತ್ತಾರೆ.   ಸ್ಕೇಟಿಂಗ್, ಲ್ಯಾಡರ್ ಬ್ಯಾಲೆನ್ಸ್, ಕ್ಯೂಬ್ ಜಗ್ಲಿಂಗ್, ರೋಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್ ಪ್ರದರ್ಶನಗಳು ಪ್ರೇಕ್ಷಕರನ್ನು ಹೊಸ ಜಗತ್ತಿಗೆ ಕೊಂಡೊಯ್ಯುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ 83085 36479

ಅಕ್ಟೋಬರ್‌ 31, 2024ರವರೆಗೆ ಪ್ರದರ್ಶನ ನಡೆಯಲಿದೆ.   ದಿನಕ್ಕೆ ಮೂರು ಪ್ರದರ್ಶನಗಳು ಇರುತ್ತವೆ. ಮಧ್ಯಾಹ್ನ 1, ಸಂಜೆ 4 ಮತ್ತು 7. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.